ಗೋಣಿಕೊಪ್ಪಲು: ಕೂರ್ಗ್ ಕ್ರಿಕೆಟ್ ಫೌಂಡೇಷನ್ ಇಲ್ಲಿ ಆಯೋಜಿಸಿರುವ ಮೂರನೇ ವರ್ಷದ ಟಿ–20 ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ಗೆ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್ಅರುಣ್ ಮಾಚಯ್ಯ ಶುಕ್ರವಾರ ಚಾಲನೆ ನೀಡಲಾಯಿತು.

ಅರುಣ್ ಮಾಚಯ್ಯ ಮಾತನಾಡಿ, ಕೊಡವ ಯುವಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ ಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಕೊಡಗಿನಲ್ಲಿ ಕ್ರಿಕೆಟ್, ಹಾಕಿಯಂತಹ ಕ್ರೀಡೆಗಳಿಂದ ಆಟಗಾರರನ್ನು ತಯಾರು ಮಾಡಿದರೆ ಮಾತ್ರ ಸಾಲದು, ಅದರ ಜೊತೆಗೆ ಕ್ರಿಕೆಟ್, ಹಾಕಿ, ಇನ್ನಿತರ ಕ್ರೀಡೆಗಳ ತೀರ್ಪುಗಾರರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತಯಾರು ಮಾಡಬೇಕು ಎಂದರು. ಜಿಲ್ಲೆಯ ವಿ. ಬಾಡಗ ಗ್ರಾಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದ್ದು, ಎಲ್ಲಾ ಕ್ರೀಡೆಗಳಿಗೂ ಉತ್ತೇಜನ ಸಿಗಲಿದೆ. ಕೂರ್ಗ್ ಕ್ರಿಕೆಟ್ ಫೌಂಡೇಷನ್ಗೆ ಸರ್ಕಾರದ ಮಾನ್ಯತೆ ಪಡೆಯಲು ಪ್ರಯತ್ನಿಸಲಾಗುವುದು ಎಂದರು. ಬ್ಯಾಟಿಂಗ್ ಮೂಲಕ ಟೂರ್ನಿಗೆ ಚಾಲನೆ ನೀಡಿದರು.

ಕೂರ್ಗ್ ಕ್ರಿಕೆಟ್ ಫೌಂಡೇಷನ್ ಮುಖ್ಯಸ್ಥ ಚೇರಂಡ ಕಿಶನ್ ಮಾದಪ್ಪ ಮಾತನಾಡಿ, ಕೊಡವ ಯುವ ಸಮೂಹದ ಲೆದರ್ ಬಾಲ್ ಆಟಗಾರರು, ದೇಶಿಯ ತಂಡ ಪ್ರತಿನಿಧಿಸುವಂತಾಗಬೇಕು ಎಂಬ ಕನಸಿನೊಂದಿಗೆ ಜಿಲ್ಲೆಯಲ್ಲಿ ಟೂರ್ನಿಯನ್ನು ಪ್ರಾರಂಭಮಾಡಲಾಯಿತು. ಐಸಿಸಿ ನಿಯಮಗಳನ್ನು ಅನುಸರಿಸಿ ಪಂದ್ಯಗಳನ್ನು ಆಡಿಸಲಾಗುತ್ತಿದ್ದು, ಅತ್ಯುತ್ತಮ 30 ಮಂದಿ ಆಟಗಾರರನ್ನು ಆಯ್ಕೆ ಮಾಡಿ, ಅವರಲ್ಲಿ ಎರಡು ತಂಡಮಾಡಿ ಆಟ ಆಡಿಸುವ ಉದ್ದೇಶ ಹೊದಿದ್ದೇವೆ. ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಿಂದ ಆಯ್ಕೆಗಾರರನ್ನು ಕರೆಸಲಾಗುವುದು.ಲೆದರ್ ಬಾಲ್ ಪಂದ್ಯಾವಳಿಯಲ್ಲಿ ಆಡಿದ ಎರಡು ಮೂರು ಆಟಗಾರರಾದರೂ ರಣಜಿ ಅಥವಾ ಐಪಿಎಲ್ನಲ್ಲಿ ಅವಕಾಶ ಪಡೆದುಕೊಂಡರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು.

ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚಿರಿಯಪಂಡ ಸುರೇಶ್ ಮಾತನಾಡಿ, ಕೊಡವ ಆಟಗಾರರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಅವಕಾಶ ಪಡೆಯುವಂತಾಗಲಿ, ಮುಂದಿನ ವರ್ಷ ಬೆಂಗಳೂರು ಕೊಡವ ಸಮಾಜ ಒಂದು ತಂಡದ ಮಾಲೀಕತ್ವ ಪಡೆದು ಪ್ರೋತ್ಸಾಹ ನೀಡಲಾಗುವುದು ಎಂದರು.

ಇನ್ಫೊಸಿಸ್ ನಿವೃತ್ತ ಅಧಿಕಾರಿ ಮಾಚಿಮಂಡ ಮೋಹನ್ ಮಾದಪ್ಪ, ಕೂರ್ಗ್ ಕ್ರಿಕೆಟ್ ಫೌಂಡೇಷನ್ ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ, ಮುಖ್ಯ ಕಾರ್ಯದರ್ಶಿ ಕೀತಿಯಂಡ ಗಣಪತಿ, ನಿರ್ದೇಶಕರಾದ ಕುಲ್ಲೇಟೀರ ಶಾಂತ ಕಾಳಪ್ಪ, ಟೂರ್ನಿ ನಿರ್ದೇಶ ಮಡ್ಲಂಡ ದರ್ಶನ್ ಪೆಮ್ಮಯ್ಯ, ಅಣ್ಣಳಮಾಡ ರಾಯ್ ಚಿಣ್ಣಪ್ಪ, ಚೇಂದೀರ ರಚನ್ ಚಿಣ್ಣಪ್ಪ, ಬಲ್ಲಂಡ ರೇಣಾ ದೇವಯ್ಯ, ಚೆರುಮಂದಂಡ ಸೋಮಣ್ಣ, ಮಂಡೇಪಂಡ ರತನ್ ಕುಟ್ಟಯ್ಯ, ಕೊಂಗಂಡ ದಿಲಿಪ್, ಬಾಳೆಯಡ ಕರುಣ್ ಕಾಳಪ್ಪ, ಪೊರುಕೊಂಡ ಬೋಪಣ್ಣ, ಚೇಂದಂಡ ನವೀನ್, ಮಿನ್ನಂಡ ಜೋಯಪ್ಪ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-51-711525235

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.