ಆಲ್ದೂರು: ಸಮೀಪದ ಗುಡ್ಡದೂರು ಗ್ರಾಮದಲ್ಲಿ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೋಮವಾರ ಮುಕ್ತಾಯವಾಯಿತು.

ಕ್ರೀಡಾಕೂಟದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು, ಪ್ರಾದೇಶಿಕ ಪರಿಸರದ ಗುಡ್ಡದೂರು ಸಹರಾ ತಂಡ ಚಾಂಪಿಯನ್ ಆಗಿ ₹25 ಸಾವಿರ ನಗದು ಬಹುಮಾನ ಪಡೆಯಿತು. ದ್ವಿತೀಯ ಸ್ಥಾನ ಪಡೆದ ಯಲಗುಡಿಗೆ ಏಕತಾ ತಂಡ 13 ಸಾವಿರ ನಗದು ಗಳಿಸಿತು. ಬನ್ನೂರು ತಂಡ ತೃತೀಯ ಸ್ಥಾನ ಪಡೆದು ₹7 ಸಾವಿರ ನಗದು, ನಾಲ್ಕನೇ ಸ್ಥಾನ ಪಡೆದ ರೆಡ್ ಸ್ಟಾರ್ ದೇವರಹಳ್ಳಿ ₹4 ಸಾವಿರ ನಗದು ಬಹುಮಾನ ಪಡೆಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಕಠಾರದಹಳ್ಳಿ ಶಿವಕುಮಾರ್, ನವರಾಜು ಎಚ್, ರಕ್ಷಿತ್ ಗೌಡ ಭಾಗವಹಿಸಿದ್ದರು.

ಸರಣಿ ಸರ್ವೋತ್ತಮ ಪ್ರಶಸ್ತಿಯನ್ನು ಸಹರಾ ತಂಡದ ವಿಶ್ವ ಪಡೆದು ಕೊಂಡರು. ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಸಹರಾ ತಂಡದ ಕಾರ್ತಿಕ್ ಭಾಜನರಾದರು. ಕ್ರೀಡಾಕೂಟದ ಆಯೋಜಕರಾದ ರಾಮು, ವಿಶ್ವ, ರವಿ ವಿ.ಕೆ, ಕಾರ್ತಿಕ್, ಶಿವ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-126-369054945

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.