ಹರಿಹರ: ಮೇ 17ರಂದು ನಂಜನಗೂಡಿನಲ್ಲಿ ಕ್ರೀಡಾ ಅಕಾಡೆಮಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಪಂಜಾ ಕುಸ್ತಿ ಸ್ಪರ್ಧೆಯಲ್ಲಿ ಹರಿಹರದ ಬ್ರದರ್ಸ್ ಜಿಮ್ನ ಕ್ರೀಡಾಪಟುಗಳು 7 ಪದಕ ಹಾಗೂ 2 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

70 ಕೆ.ಜಿ. ವಿಭಾಗದಲ್ಲಿ ಮೊಹಮ್ಮದ್ ಉಮರ್ ಫಾರೂಖ್, 80 ಕೆ.ಜಿ. ವಿಭಾಗದಲ್ಲಿ ಮೊಹಮ್ಮದ್ ಸಲಾವುದ್ದೀನ್, ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಎನ್.ರಂಜಿತಾ ಮತ್ತು 45 ಕೆ.ಜಿ.ವಿಭಾಗದಲ್ಲಿ ಚೆಲುವಿ ಜಿ. ಸ್ವರ್ಣ ಪದಕ; 85 ಕೆ.ಜಿ. ವಿಭಾಗದಲ್ಲಿ ಮೊಹಮ್ಮದ್ ನವಾಜ್, 70 ಕೆ.ಜಿ. ವಿಭಾಗದಲ್ಲಿ ಸೂರಜ್ ಸಿಂಗ್ ಬೆಳ್ಳಿ ಪದಕ, 55 ಕೆ.ಜಿ. ವಿಭಾಗದಲ್ಲಿ ಅಹಮದ್ ರಜಾ ಕಂಚಿನ ಪದಕ ಗಳಿಸಿದ್ದಾರೆ.

ವಿಶಿಷ್ಟ ಸಾಧನೆಗಾಗಿ ಮೊಹಮ್ಮದ್ ಸಲಾವುದ್ದೀನ್ ಅವರಿಗೆ ವಜ್ರ ಬಾಹು, ಮಹಿಳಾ ವಿಭಾಗದಲ್ಲಿ ಚೆಲುವಿ ಜಿ. ಅವರಿಗೆ ಶಕ್ತಿ ದೀಪ್ತಿ 2026 ಪ್ರಶಸ್ತಿ ನೀಡಲಾಗಿದೆ. ಸಾಧಕ ಕ್ರೀಡಾಪಟುಗಳಿಗೆ ಶಾಸಕ ಬಿ.ಪಿ.ಹರೀಶ್, ಅಂಜುಮನ್ ಎ ಇಸ್ಲಾಮಿಯಾ ಸಮಿತಿ ಅಧ್ಯಕ್ಷ ಅರ್.ಸಿ. ಜಾವೀದ್, ಜಿಮ್ನ ಸಂಚಾಲಕ ಅಕ್ರಂ ಬಾಷ, ತರಬೇತುದಾರ ಮೊಹಮ್ಮದ್ ರಫೀಕ್ ಹಾಗೂ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-43-1512383187

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.