ಬೆಂಗಳೂರು: ಡಿವೈಇಎಸ್ ಹಾಸನ ತಂಡವು 3–2 ಗೋಲುಗಳಿಂದ ಡಿವೈಇಎಸ್ ಕೂಡಿಗೆ ತಂಡವನ್ನು ಮಣಿಸಿ, ಶನಿವಾರ ಮುಕ್ತಾಯಗೊಂಡ ‘ಹಾಕಿ ಕರ್ನಾಟಕ’ ರಾಜ್ಯ 16 ವರ್ಷದೊಳಗಿನ ಬಾಲಕಿಯರ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಶಾಂತಿನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಡಿವೈಇಎಸ್ ಹಾಸನ ತಂಡದ ಸರಸ್ವತಿ ಎಸ್.ಎಂ., ಆರಾಧ್ಯ ಎಂ.ಡಿ. ಹಾಗೂ ಜಿ.ಎಚ್. ಅನುಷ್ಯಾ ತಲಾ ಒಂದು ಗೋಲು ಗಳಿಸಿ, ಗೆಲುವಿನ ರೂವಾರಿಯಾದರು. ಕೂಡಿಗೆ ತಂಡದ ಬಿ.ಎಸ್.ದೇಚಮ್ಮ (10ನೇ ಹಾಗೂ 30ನೇ ನಿ.) ಅವಳಿ ಗೋಲು ಗಳಿಸಿದರು.

ತೃತೀಯ ಸ್ಥಾನದ ನಿರ್ಣಯಕ್ಕಾಗಿ ನಡೆದ ಪಂದ್ಯದಲ್ಲಿ ಮಡಿಕೇರಿಯ ‘ಸಾಯ್’ ತರಬೇತಿ ಕೇಂದ್ರ ತಂಡವು 3–0ಯಿಂದ ‘ಹಾಕಿ ಬೆಳಗಾವಿ’ ತಂಡವನ್ನು ನಿರಾಯಾಸವಾಗಿ ಮಣಿಸಿತು.

ಡಿವೈಇಎಸ್ ಕೂಡಿಗೆ ತಂಡದ ಯಶಿಕಾ ಕೆ.ಕೆ. ಟೂರ್ನಿಯ ಆಟಗಾರ್ತಿ ಗೌರವಕ್ಕೆ ಭಾಜನರಾದರು.

ಉತ್ತಮ ಗೋಲ್ಕೀಪರ್: ಬಿಂದುಶ್ರೀ (ಡಿವೈಇಎಸ್ ಹಾಸನ); ಉತ್ತಮ ಡಿಫೆಂಡರ್: ಸಿಂಚನಾ ಕೆ.ಪಿ. (ಡಿವೈಇಎಸ್ ಕೂಡಿಗೆ); ಉತ್ತಮ ಮಿಡ್ಫೀಲ್ಡರ್: ಅನುಶ್ರೀ ಜೆ. (ಹಾಕಿ ಬೆಳಗಾವಿ); ಉತ್ತಮ ಫಾರ್ವರ್ಡ್ ಆಟಗಾರ್ತಿ: ಸುಮಿಯಾ ಶೇಕ್ (ಎಸ್ಟಿಸಿ ಮಡಿಕೇರಿ).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-1267499086

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.