ಹುಬ್ಬಳ್ಳಿ: ಇಲ್ಲಿನ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಿರುವ ಕೆಎಲ್ಇ ಟಿ–20 ಕ್ರಿಕೆಟ್ ಟೂರ್ನಿಗೆ ವಿ.ವಿಯ ಕುಲಪತಿ ಪಿ. ಜಿ. ತೇವರಿ ಈಚೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಪ್ರಾಮಾಣಿಕವಾಗಿ ಆಟದಲ್ಲಿ ಭಾಗವಹಿಸಬೇಕು. ಗೆಲುವನ್ನು ವಿನಮ್ರತೆಯಿಂದ, ಸೋಲನ್ನು ಗೌರವದಿಂದ ಸ್ವೀಕರಿಸಬೇಕು’ ಎಂದರು.

ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಎಲ್ಇ ಸಂಸ್ಥೆಗಳ 23 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ. ಮಾರ್ಚ್ 30ರಿಂದ ಏ. 7 ರವರೆಗೆ ವಿ.ವಿಯ ಟರ್ಫ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯಗಳು ನಡೆಯಲಿದೆ. ವಿಜೇತ ತಂಡಕ್ಕೆ ₹50,000 ನಗದು ಹಾಗೂ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ₹25,000 ನಗದು ಮತ್ತು ಟ್ರೋಫಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು. ವಿ.ವಿಯ

ವಿ.ವಿಯ ಅಕಾಡೆಮಿಕ್ ಡೀನ್ ಬಿ. ಬಿ. ಕೊಟ್ಟೂರುಶೆಟ್ಟರ್, ವಿದ್ಯಾರ್ಥಿ ವ್ಯವಹಾರಗಳ ಡೀನ್ ಸಂಜಯ ಕೊಟಬಾಗಿ, ಕ್ರೀಡಾ ವಿಭಾಗದ ಸಂಯೋಜಕ ಪ್ರೊ. ವಿಜಯಕುಮಾರ ನಿಂಬಗಲ್, ಕ್ರೀಡಾ ನಿರ್ದೇಶಕ ಜಯದೇವ ದನದಮನಿ ಇದ್ದರು. ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಮಾರಿಹಾಳ, ಗುರುರಾಜ ಪುರಾಣಿಕ್, ಶ್ರಿದೇವಿ ಪಾಟೀಲ, ನೇತ್ರಾವತಿ ಗಾಯಕ್ವಾಡ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-24-1473593083

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.