ಹುಬ್ಬಳ್ಳಿ: ‘ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಕೆಎಸ್ಸಿಎ ಅಕಾಡೆಮಿಯಿಂದ ಬೇಸಿಗೆ ಕ್ರಿಕೆಟ್ ಶಿಬಿರ ಏಪ್ರಿಲ್ 20ರಿಂದ ಆರಂಭವಾಗಿದ್ದು, ಒಂದು ತಿಂಗಳು ನಡೆಯಲಿದೆ’ ಎಂದು ಕೆಎಸ್ಸಿಎ ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ ಹೇಳಿದರು.

‘14 ರಿಂದ 16 ವರ್ಷದೊಳಗಿನ ಬಾಲಕರು ಮತ್ತು 19 ವರ್ಷದೊಳಗಿನ ಯುವಕರು, 15 ವರ್ಷದೊಳಗಿನ ಬಾಲಕಿಯರು ಮತ್ತು 19 ವರ್ಷದೊಳಗಿನ ಯುವತಿಯರು ಪಾಲ್ಗೊಂಡಿದ್ದಾರೆ. ಧಾರವಾಡ, ಬೆಳಗಾವಿ, ಗದಗ, ಉತ್ತರ ಕನ್ನಡ, ಹಾವೇರಿ ಸೇರಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ 15 ಆಟಗಾರರ ತಂಡ ರಚಿಸಿ, ಅಂತರ ಜಿಲ್ಲಾ ಪಂದ್ಯಗಳನ್ನು ಆಯೋಜಿಸಲಾಯಿತು. ಪ್ರತಿ ವಯೋಮಿತಿ ವಿಭಾಗದಿಂದ 25 ರಂತೆಒಟ್ಟು 75 ಬಾಲಕರನ್ನು ಆಯ್ಕೆ ಮಾಡಲಾಯಿತು’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿಡಿಯೊ ಅನಾಲಿಸ್ಟ್, ಸ್ಟ್ರೆಂಥನಿಂಗ್ ಕೋಚ್ಗಳು, ಫಿಸಿಯೊಗಳು ಮೂರ್ನಾಲ್ಕು ದಿನ ಆಟಗಾರರ ಮೌಲ್ಯಮಾಪನ ಮಾಡುವರು. ಶಿಬಿರದಲ್ಲಿ ತರಬೇತಿ ನೀಡಲು ಬಿಸಿಸಿಐ ಕೋಚ್ಗಳನ್ನು ಕೆಎಸ್ಸಿಎ ನೇಮಿಸಿದೆ. ಹುಬ್ಬಳ್ಳಿ– ಧಾರವಾಡ ಹೊರತುಪಡಿಸಿ ಉಳಿದ ಜಿಲ್ಲೆಗಳಿಂದ ಬಂದ ಆಟಗಾರರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಶಾಲಾ– ಕಾಲೇಜುಗಳು ಆರಂಭವಾಗುವ ಮುನ್ನ 16 ಮತ್ತು 19 ವಯೋಮಿತಿಯ ಅಂತರ ಕ್ಲಬ್ ಪಂದ್ಯಗಳನ್ನು ನಡೆಸಲಾಗುವುದು’ ಎಂದು ಹೇಳಿದರು.

ಕೆಎಸ್ಸಿಎ ಧಾರವಾಡ ವಲಯದ ಚೇರ್ಮನ್ ಅಲ್ತಾಫ್ ಕಿತ್ತೂರು, ವಲಯ ಕಮಿಟಿ ಸದಸ್ಯ ವಸಂತ ಮುರುಡೇಶ್ವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-24-1113059041

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.