ಹುಬ್ಬಳ್ಳಿ: ‘ಭಾರತ ಮಹಿಳಾ ಫುಟ್ಬಾಲ್ ಫೆಡರೇಷನ್ನ (ಡಬ್ಲುಎಫ್ಎಫ್ಐ) ಕಾರ್ಯವ್ಯಾಪ್ತಿಯನ್ನು ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲಾಗುತ್ತಿದ್ದು, ರಾಜ್ಯದ ಪ್ರಧಾನ ಕಚೇರಿ ಹುಬ್ಬಳ್ಳಿಯಲ್ಲಿ ಇರಲಿದೆ’ ಎಂದು ಫೆಡರೇಷನ್ ಅಧ್ಯಕ್ಷ ಮುಖೇಶ್ ಶರ್ಮಾ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿಯಲ್ಲಿ ಮಹಿಳಾ ಫುಟ್ಬಾಲ್ ಕ್ರೀಡೆ ಬೆಳವಣಿಗೆಗೆ ಸಾಕಷ್ಟು ಅವಕಾಶ ಇರುವುದನ್ನು ಗುರುತಿಸಿದ್ದೇವೆ. ಈ ಭಾಗದಲ್ಲಿ ಈ ಕ್ರೀಡೆ ಬಗೆಗೆ ಆಸಕ್ತಿಯೂ ಇದೆ’ ಎಂದರು.

‘ಕ್ರೀಡೆಯ ಮೂಲಕ ಮಹಿಳೆಯರ ಸಬಲೀಕರಣ, ತಳಮಟ್ಟದ ಫುಟ್ಬಾಲ್ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಜಾಗತಿಕವಾಗಿ ಮಿಂಚಲು ಮಹಿಳಾ ಫುಟ್ಬಾಲ್ ಪಟುಗಳಿಗೆ ದಾರಿ ಮಾಡಿಕೊಡುವುದೇ ಫೆಡರೇಷನ್ ಉದ್ದೇಶ’ ಎಂದು ತಿಳಿಸಿದರು.

ಫೆಡರೇಷನ್ನ ಕರ್ನಾಟಕ ಘಟಕದ ಅಧ್ಯಕ್ಷ ಸಿ.ವಿ. ಜೇಮ್ಸ್ಕುಮಾರ್ ಮಾತನಾಡಿ, ‘ಫೆಡರೇಷನ್ ಮೂಲಕ ಕಿರಿಯ, ಹಿರಿಯ ಮತ್ತು ಸಬ್ ಜ್ಯೂನಿಯರ್ ವಿಭಾಗಗಳಲ್ಲಿ ಚಾಂಪಿಯನ್ಷಿಪ್ ಆಯೋಜಿಸಲಾಗುವುದು. ಉತ್ತಮ ಕ್ಲಬ್ಗಳಿಗಾಗಿ ಫೆಡರೇಷನ್ ಕಪ್ ಪರಿಚಯಿಸುವುದು, ಉನ್ನತ ಪ್ರತಿಭೆಗಳನ್ನು ಪೋಷಿಸಲು ತರಬೇತಿ ಕ್ಯಾಂಪ್ಗಳನ್ನು ನಡೆಸುವುದು, ಪ್ರೊ ಮಿನಿ ಫುಟ್ಬಾಲ್ ಲೀಗ್ ಆಯೋಜಿಸುವ ಕೆಲಸ ನಡೆಯಲಿದೆ’ ಎಂದರು.

ನವೀನ್ ಹೆಗ್ಡೆ, ಯತೀಶ್ ಬಂಗೇರಾ, ವನಿತಾ ಗಡೈಲಿ, ಅಶೋಕ ಗಂಗೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-24-645731509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.