ಹುಕ್ಕೇರಿ: ಪಟ್ಟಣದ ಹೊರವಲಯದ ಬಾಪೂಜಿ ಅಂತರರಾಷ್ಟ್ರೀಯ ಸಿಬಿಎಸ್ಇ ಶಾಲೆ ಮತ್ತು ವಸತಿ ಪಿಯು ಕಾಲೇಜು ಮತ್ತು ಡಾಡ್ಜ್ ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಸಹಯೋಗದಲ್ಲಿ 18ನೇ ರಾಷ್ಟ್ರಮಟ್ಟದ ಜೂನಿಯರ್ ಡಾಡ್ಜ್ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ಪುರುಷರ ತಂಡ ಜಯ ಸಾಧಿಸಿತು.

ಅದೇ ರೀತಿ ಮಿಕ್ಸ್ (ಪುರುಷ ಮತ್ತು ಮಹಿಳೆ) ತಂಡದಲ್ಲಿಯೂ ಕರ್ನಾಟಕ ಪ್ರಥಮ ಸ್ಥಾನ ಪಡೆಯಿತು. ಕರ್ನಾಟಕ ಮಹಿಳಾ ತಂಡವು ಮೂರನೇ ಸ್ಥಾನಕ್ಕೆ ತೃಪ್ತಿಪಡೆಯಿತು.

22 ರಾಜ್ಯಗಳ 23 ತಂಡಗಳು ಪಂದ್ಯದಲ್ಲಿ ಭಾಗವಹಿದ್ದವು. ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ತಂಡಗಳ ಮಧ್ಯೆ ಬಿರುಸಿನ ಸ್ಪರ್ಧೆ ನಡೆಯಿತು. ಕೊನೆಗೆ ಕರ್ನಾಟಕ ತಂಡ ಜಯಭೇರಿ ಭಾರಿಸಿತು.

ಮಮದಾಪುರದ ಚರಂತಮುರ್ತೇಶ್ವರ ಮಠದ ಸಿದ್ಧಲಿಂಗ ದೇವರು, ಕುರಣಿ ಗಂಗಾದೇವಿ ಮಠದ ಆನಂದ ಸ್ವಾಮೀಜಿ, ಕರ್ನಾಟಕ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ, ಡಾಡ್ಜ್ ಬಾಲ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಬ್ರಾರ್, ಧಾರವಾಡ ಕಮಿಶನರ್ ಕಚೇರಿಯ ವಿಷ್ಣು ಹೆಬ್ಬಾರ್, ಬೆಳಗಾವಿ ಡಿಡಿಪಿಐ ಕಚೇರಿ ದೈಹಿಕ ಶಿಕ್ಷಣಾಧಿಕಾರಿ ಎ.ಐ.ಜುನೇದ್ ಪಾಟೀಲ, ಪ್ರಾಚಾರ್ಯೆ ಲೀಲಾವತಿ ಹಿರೇಮಠ ಸೇರಿದಂತೆ ನೂರಾರು ಕ್ರೀಡಾಪಡುಗಳು, ಅಭಿಮಾನಿಗಳು ಇದ್ದರು.

ಡಾಡ್ಜ್ ಬಾಲ್ ಸಂಘದ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪಡಿಮನಿ, ಪ್ರಾಚಾರ್ಯ ಹೊಳಬಸಯ್ಯ ಹಿರೇಮಠ, ಕರ್ನಾಟಕ ಟೀಮ್ ಕೋಚ್ ತೇಜಸ್ ಎಸ್, ಆಡಳಿತಾಧಿಕಾರಿ ಬಸವರಾಜ ಅಮ್ಮಣಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-21-1002031372

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.