ಕಾರಟಗಿ: ‘ದೈಹಿಕ, ಬೌದ್ಧಿಕ ಸದೃಢ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ. ಮಾನಸಿಕ ಒತ್ತಡ ಕಡಿಮೆಯಾಗಿ ಏಕಾಗ್ರತೆ ಹೆಚ್ಚುತ್ತದೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಅಮರೇಶ ಮೈಲಾಪುರ ಹೇಳಿದರು.

ಪಟ್ಟಣದ ಬಾಲಕ ಹಾಗೂ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಭಾನುವಾರ ಅಭಿನವ ಸ್ಪೋರ್ಟ್ಸ್ ಕ್ಲಬ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಸಹಯೋಗದಲ್ಲಿ ನಡೆದ 45 ದಿನಗಳ ವಾಲಿಬಾಲ್ ಬೇಸಿಗೆ ಶಿಬಿರದ ಸಮಾರೋಪದಲ್ಲಿ ವಾಲಿಬಾಲ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

‘ವಿದ್ಯಾರ್ಥಿಗಳು ಓದಿನೊಂದಿಗೆ ಆಟಕ್ಕೂ ಸಮಯ ಮೀಸಲಿಡಬೇಕು. ಮೊಬೈಲ್ ವ್ಯಾಮೋಹದ ಯುಗದಲ್ಲಿ ಎಲ್ಲವೂ ತಿರುವು ಮುರುವಾಗಿದೆ. ಮಕ್ಕಳು, ಯುವಕರು ಮೊಬೈಲ್ ದಾಸರಾಗಿ, ಕ್ರೀಡೆಗಳಿಂದ ದೂರವಾಗುತ್ತಿರುವುದು ವಿಷಾದಕರ ಸಂಗತಿ. ಇದರನ್ನರಿತು ಏರ್ಪಡಿಸಿದ್ದ 45 ದಿನಗಳ ವಾಲಿಬಾಲ್ ತರಬೇತಿ ಶಿಬಿರವು, ಮಕ್ಕಳನ್ನು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಿದ್ದು ಶ್ಲಾಘನಾರ್ಹ’ ಎಂದು ಹೇಳಿದರು.

ಪಟ್ಟಣ ಸಹಿತ ಪಕ್ಕದ ಹಂಚಿನಾಳ ಕ್ಯಾಂಪ್, ಜಾಲಹಳ್ಳಿ, ಮರ್ಲಾನಹಳ್ಳಿ, ಸಿದ್ದಾಪುರ, ತೊಂಡಿಹಾಳ ಹಾಗೂ ಕುಷ್ಟಗಿ ಮತ್ತು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಹಾಗೂ ಕನಕಗಿರಿ ಪಟ್ಟಣದಿಂದ ಬಂದಿದ್ದ ಒಟ್ಟು 45ಕ್ಕೂ ಹೆಚ್ಚು ವಾಲಿಬಾಲ್ ಕ್ರೀಡಾಪಟುಗಳಿಗೆ ತರಬೇತಿ ನೀಡಲಾಯಿತು. ತರಬೇತಿದಾರ ಬಸವರಾಜ್ ಮೂಲಿಮನಿ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ತಿಮ್ಮಣ್ಣ ನಾಯಕ, ಅಭಿನವ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಶಿವಕುಮಾರ ಹಡಪದ, ಮುಖ್ಯಶಿಕ್ಷಕರಾದ ಬಸಯ್ಯ ಹಿರೇಮಠ, ಅಮರೇಶ ಪಾಟೀಲ, ಮಹಾಂತೇಶ ಗದ್ದಿ, ಪಾಲಕರಾದ ಕುಮಾರಸ್ವಾಮಿ, ಕರವೇ ಅಧ್ಯಕ್ಷ ಮಾರುತಿ ಬಳೂಟಗಿ, ಶರಣಪ್ಪ ಕುಂಬಾರ, ವೆಂಕಟಸಿಂಗ್ ರಜಪೂತ ಹಾಗೂ ಶಿಕ್ಷಕ ಜಗದೀಶ್ ಭಜಂತ್ರಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-35-1351534297

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.