ಬೆಂಗಳೂರು: ಗೆಲುವಿನ ಓಟ ಮುಂದುವರಿಸಿದ ಕರ್ನಾಟಕ ಬಾಲಕರ ತಂಡವು ಗುರುವಾರ ಜೂನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಚಾಂಪಿಯನ್ ಷಿಪ್ನಲ್ಲಿ 83-68ರಿಂದ ಚಂಡೀಗಢ ತಂಡವನ್ನು ಮಣಿಸಿ ಫೈನಲ್ಗೆ ಲಗ್ಗೆ ಹಾಕಿತು. ಆದರೆ, ಬಾಲಕಿಯರ ತಂಡವು ಸೆಮಿಫೈನಲ್ನಲ್ಲಿ ನಿರಾಸೆ ಅನುಭವಿಸಿತು.

ಪುದುಚೆರಿಯ ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಕರ್ನಾಟಕದ ಬಾಲಕರು ಸಾಂಘಿಕ ಆಟ ಪ್ರದರ್ಶಿಸಿದರು. ವಿರಾಮದ ವೇಳೆ 40–31ರಿಂದ ಮುನ್ನಡೆ ಪಡೆದಿದ್ದ ರಾಜ್ಯ ತಂಡ, ನಂತರವೂ ಹಿಡಿತ ಮುಂದುವರಿಸಿತು. ಕರ್ನಾಟಕ ಗೆಲುವಿನಲ್ಲಿ ಸಮರ್ಥ ಮಣ್ಣೂರು, ಆದಿತ್ಯ ಶೆಣೈ, ಹರ್ಷನ್ ಯತೀಶ್ (ತಲಾ 16 ಅಂಕ) ಮತ್ತು ವೈಭವ್ ಗೌಡ (15) ಮಿಂಚಿದರು.

ಕರ್ನಾಟಕ ತಂಡವು ಫೈನಲ್ನಲ್ಲಿ ಹರಿಯಾಣ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್ನಲ್ಲಿ ಹರಿಯಾಣ ತಂಡವು 87–71ರಿಂದ ರಾಜಸ್ಥಾನ ತಂಡವನ್ನು ಮಣಿಸಿತು,

ರಾಜ್ಯದ ಬಾಲಕಿಯರ ತಂಡವು 62–67ರಿಂದ ಛತ್ತೀಸಗಢ ತಂಡಕ್ಕೆ ಮಣಿಯಿತು. ಆ ತಂಡವು ಫೈನಲ್ನಲ್ಲಿ ಕೇರಳ ತಂಡವನ್ನು ಎದುರಿಸಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-4-975619427

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.