ಬೆಂಗಳೂರು: ಕಿಕ್ಸ್ಟಾರ್ಟ್ ಎಫ್ಸಿಯ ಪ್ರೇಮಿಶ್ ಟಿ. ಅವರು ಸ್ವಾಮಿ ವಿವೇಕಾನಂದ ಟ್ರೋಫಿಗಾಗಿ ನಡೆಯಲಿರುವ 20 ವರ್ಷದೊಳಗಿನವರ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಟೂರ್ನಿಯು ಛತ್ತೀಸಗಢದ ನಾರಾಯಣಪುರದಲ್ಲಿ ಮೇ 2ರಿಂದ 24ರ ವರೆಗೆ ನಡೆಯಲಿದೆ.

ಸಿದ್ಧಾರ್ಥ್ ಭಾಟಿಯಾ ಮಾರ್ಗದರ್ಶನದ ಕರ್ನಾಟಕ ತಂಡವು ಇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಲಿಷ್ಠ ತಂಡಗಳಾದ ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಲಕ್ಷದ್ವೀಪ ಇದೇ ಗುಂಪಿನಲ್ಲಿವೆ.

ರಾಜ್ಯ ತಂಡವು ಮೇ 2ರಂದು ಪಶ್ಚಿಮ ಬಂಗಾಳ ವಿರುದ್ಧ; ಮೇ 4 ರಂದು ಒಡಿಶಾ ವಿರುದ್ಧ ಹಾಗೂ ಮೇ 6ರಂದು ಲಕ್ಷದ್ವೀಪ ವಿರುದ್ಧ ಸೆಣಸಲಿದೆ.

ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಸೋಮವಾರ ಪ್ರಕಟಿಸಿರುವ ತಂಡ ಇಂತಿದೆ: ಪ್ರೇಮಿಶ್ ಟಿ. (ನಾಯಕ), ಆರ್ಯನ್ ಯೋಗೇಶ್, ಮೊಹಮ್ಮದ್ ಕೈಫ್, ಧ್ರುವ ಸಿ., ಶಾಲೊಮ್ ಸ್ಯಾಂಟ್ ಥಾಪಾ, ನಿರುಪಮ್ ಗೌಡ ಎಚ್., ಮೌಲಿಕ್ ದೋಶಿ, ಪವೊಟಿನ್ಮಂಗ್ ಟುಬೊಯ್, ರಯೂಲ್ ಡೆರಿಕ್ ಅಹಮದ್, ದರ್ಶನ್ ವಿ., ದೀಕ್ಷಿತ್ ಕೆ., ಮೈಥ್ರಮ್ ಕೆ. ಸಿಂಗ್, ಶೌರ್ಯ ಆರ್., ಕೆ.ಅನಿಲ್, ಪೌಲಂಥಂಗ್ ಸಿಮ್ಟೆ, ಸಾಟ್ಮಿನ್ಲನ್ ಖೊಂಗಸಾಯ್, ಜಾನ್ಸ್ಟರ್ ಎಂ. ಮರಕ್ ಹಾಗೂ ಶೊಗುಹೂ ಹಾವೊಕಿಪ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-15-1238768084

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.