ಬೆಂಗಳೂರು: ಸುಭತ್ರಾ ಎ. ಅವರ ಅಮೋಘ ಆಟದ ನೆರವಿನಿಂದ ಕರ್ನಾಟಕ ಬಾಲಕಿಯರ ತಂಡವು 13 ವರ್ಷದೊಳಗಿನ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿತು.

ಪಂಜಾಬ್ನ ಮಹಿಲ್ಪುರದಲ್ಲಿಗುರುವಾರ ನಡೆದ ಫೈನಲ್ನಲ್ಲಿ ಕರ್ನಾಟಕ ತಂಡವು ಟೈ ಬ್ರೇಕರ್ನಲ್ಲಿ 5–4ರಿಂದ ಆತಿಥೇಯ ಪಂಜಾಬ್ ತಂಡವನ್ನು ಮಣಿಸಿತು. ನಿಗದಿಯ ಅವಧಿಯ ಪಂದ್ಯವು 1–1 ಗೋಲುಗಳಿಂದ ಸಮಬಲಗೊಂಡಿತ್ತು.

ಕರ್ನಾಟಕದ ಪರ ಸುಭತ್ರಾ ಅವರು 31ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ಬಾರಿಸಿದರು. ಪಂಜಾಬ್ ತಂಡದ ತನ್ವೀರ್ ಕೌರ್ ಅವರು 38ನೇ ನಿಮಿಷದಲ್ಲಿ ಫೀಲ್ಡ್ ಗೋಲು ಗಳಿಸಿದರು.

ಟೈ ಬ್ರೇಕರ್ನಲ್ಲಿ ಕರ್ನಾಟಕದ ತಂಡದ ಅನ್ವಿ ಜೋಶಿ, ಮಧುಮಿತಾ ಕೆ, ರಿಚಾ ಭಾಟಿಯಾ, ತಕ್ಷ್ವಿ ಮಹಾಜನ್ ಮತ್ತು ಸುಭಾತ್ರಾ ಚೆಂಡನ್ನು ಗುರಿ ಸೇರಿಸಿದರು. ಪಂಜಾಬ್ನ ನಾಲ್ಕು ಮಂದಿ ಮಾತ್ರ ಈ ಪ್ರಯತ್ನದಲ್ಲಿ ಯಶಸ್ವಿಯಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-4-778685526

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.