ಕೆಂಭಾವಿ: ‘ಕ್ರಿಕೆಟ್ ಆಟದಲ್ಲಿ ಯಾವುದೇ ಜಾತಿ – ಮತ, ಮೇಲು – ಕೀಳು ಎಂದು ಒಬ್ಬೊಬ್ಬರಿಗೆ ಒಂದು ನಿಯಮವಿಲ್ಲ. ಇಲ್ಲಿ ಎಲ್ಲರಿಗೂ ಸಮಾನ ನಿಯಮ ಇರುವುದರಿಂದ ಇಂದಿನ ದಿನಗಳಲ್ಲಿ ಕ್ರಿಕೆಟ್ ಒಂದು ಆಟವಾಗಿರದೆ, ಆಟಗಾರನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ’ ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು.

ಪಟ್ಟಣದ ಹಿಲ್ ಟಾಪ್ ಮೈದಾನದಲ್ಲಿ ಮಂಗಳವಾರ ನಡೆದ ‘ಎನ್ಆರ್ಜಿ ಟ್ರೋಫಿ’ಯ ಅಂತಿಮ ಪಂದ್ಯದಲ್ಲಿ ಜಯಗಳಿಸಿದ ಪ್ರಿನ್ಸ್ ಪ್ಯಾಂಥರ್ಸ್ ತಂಡಕ್ಕೆ ಹಾಗೂ ದ್ವಿತೀಯ ಸ್ಥಾನ ಪಡೆದ ನಗನೂರು ತಂಡಕ್ಕೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ಕ್ರಿಕೆಟ್ಗೆ ನಮ್ಮ ಭಾಗದಲ್ಲಿ ಹೆಚ್ಚು ಜನಮನ್ನಣೆ ಸಿಕ್ಕಿದೆ. ಅದರಂತೆ ಒಳ್ಳೆಯ ಆಟಗಾರರು ಇಲ್ಲಿದ್ದಾರೆ. ಅವರಲ್ಲಿನ ಪ್ರತಿಭೆ ಹೊರತರಲು ಇಂತಹ ಪಂದ್ಯಾವಳಿಗಳು ಅನುಕೂಲವಾಗುತ್ತವೆ. ಅಲ್ಲದೆ ನಾನು ಕೂಡಾ ಸ್ವತಃ ಕ್ರಿಕೆಟ್ ಆಟಗಾರನಾಗಿರುವುದರಿಂದ ಕ್ರೀಡೆಗೆ ಸದಾ ಪ್ರೋತ್ಸಾಹ ನೀಡುತ್ತೇನೆ’ ಎಂದರು.

‘ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಹೊಂದಿರಬೇಕು. ನನಗೂ ಈ ಗುಣ ಬಂದಿದ್ದು ಆಟದಿಂದಲೇ. ಹಾಗಾಗಿ ನಾನು ಚುನಾವಣೆಯಲ್ಲಿ ಸೋತರು ಸಹ ಜನಗಳ ಮಧ್ಯೆ ಇರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಕೆಂಭಾವಿ ವಲಯದ ಸಿಆರ್ಪಿ ಬಂದೇನವಾಜ್ ನಾಲತವಾಡ, ಬಿಜೆಪಿ ಯುವ ಮುಖಂಡ ಕೃಷ್ಣಾಡ್ಡಿ ಮುದನೂರ ಮಾತನಾಡಿದರು.

ಈ ಸಂದರ್ಭದಲ್ಲಿ ಸಚಿನ ನಾಯಕ್, ನಿತಿನ್ ಶೆಟ್ಟಿ ಬೈಂದೂರ, ಮಂಜು ಕಂಬಾರ, ಪುರಸಭೆ ಸದಸ್ಯ ರಾಘವೇಂದ್ರ ಕವಲ್ದಾರ್, ಸಿಆರ್ಪಿ ಶ್ರೀಶೈಲ ಪಾಸೋಡಿ, ಹನೀಫ್ ಸಾಸನೂರು, ಸಿದ್ರಾಮರೆಡ್ಡಿ, ಹಣಮಯ್ಯ ಗುತ್ತೇದಾರ, ರವಿಕುಮಾರ ಭೋವಿ, ಶಿವು ಮಲ್ಲಿಭಾವಿ ಇದ್ದರು. ಡಿ.ಸಿ ಪಾಟೀಲ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-30-1940873407

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.