ಗೋಣಿಕೊಪ್ಪಲು: ಕೂರ್ಗ್ ಯುನೈಟೆಡ್ ಬ್ಯಾಸ್ಕೆಟ್ ಬಾಲ್ ಕ್ಲಬ್ ಪೊನ್ನಂಪೇಟೆಯಿಂದ, ಟೀಗಲ್ ಹೂಪ್ ಸ್ಟರ್ಸ್ ಹಾಗೂ ಡಿಕೋಚ್ ಸಹಯೋಗದಲ್ಲಿ ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕೊಡಗು ಬ್ಯಾಸ್ಕೆಟ್ ಬಾಲ್ ಲೀಗ್ ಸೀಸನ್ -3ನಲ್ಲಿ ಬಿಬಿಸಿ ಗೋಣಿಕೊಪ್ಪಲು ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಫೈನಲ್ ಪಂದ್ಯದಲ್ಲಿ ಗೆಲುವಿಗಾಗಿ ತೀವ್ರ ಪೈಪೋಟಿ ನೀಡಿದ ಅವೆಂಜರ್ಸ್ ವೀರಾಜಪೇಟೆ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಚಾಂಪಿಯನ್ ಬಿಬಿಸಿ ತಂಡಕ್ಕೆ ₹50 ಸಾವಿರ ಆಕರ್ಷಕ ಟ್ರೋಫಿ, ರನ್ನರ್ ಅಪ್ ಅವೆಂಜರ್ಸ್ ತಂಡಕ್ಕೆ ₹25 ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು. ಟೂರ್ನಿಯಲ್ಲಿ ಚೆನ್ನೈ ಕಸ್ಟಮ್ಸ್ ಪರ ಆಡುತ್ತಿರುವ ಭಾರತ ತಂಡದ ಆಟಗಾರ ಪರದಂಡ ಎನ್. ಬೋಪಣ್ಣ, ರಾಷ್ಟ್ರೀಯ ಆಟಗಾರ ಹಾಗೂ ಖೇಲೋ ಇಂಡಿಯಾ ಬೆಳ್ಳಿ ಪದಕ ವಿಜೇತ ಕುಂಬೆಯಂಡ ಕರಣ್ ಅಯ್ಯಪ್ಪ, ರಾಷ್ಟ್ರೀಯ ಆಟಗಾರರಾದ ಅರ್ಪಣ್ ಪೂಜಾರಿ, ಸುರೇಶ್ ಶೆಟ್ಟಿ ವಿವಿಧ ತಂಡಗಳ ಪರ ಆಡಿದರು.

ವೈಯಕ್ತಿಕ ಪ್ರಶಸ್ತಿ : ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್ ಆಗಿ ಬಿಬಿಸಿ ತಂಡದ ಬೋಪಣ್ಣ, ಸ್ಟೈಲಿಶ್ ಪ್ಲೇಯರ್ ಬಿಬಿ ಸಿ ತಂಡದ ಗೆದುನ್, ಬೆಸ್ಟ್ ಡಿಫೆನ್ಸಿವ್ ಆಗಿ ಅವೆಂಜರ್ಸ್ ತಂಡದ ಸನತ್, ಬೆಸ್ಟ್ ತ್ರಿ ಪಾಯಿಂಟರ್ ಆಗಿ ಟೀಗಲ್ ಹೂಪ್ ಸ್ಟರ್ಸ್ ತಂಡದ ಅರ್ಪಣ್ ಪ್ರಶಸ್ತಿ ಪಡೆದುಕೊಂಡರು

ಪೊನ್ನಂಪೇಟೆಯ ಫಾದರ್ ಮನೋಜ್ ಮ್ಯಾನುವೆಲ್ ಡಿಸೋಜ ಫೈನಲ್ ಟೂರ್ನಿ ಉದ್ಘಾಟಿಸಿ ಮಾತನಾಡಿ ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಅರೋಗ್ಯಕ್ಕೆ ಸಹಕಾರಿಯಾಗಿದೆ. ಕ್ರೀಡೆಯ ಮೂಲಕ ಉತ್ತಮ ಭಾಂದವ್ಯ ಬೆಳೆಸಿಕೊಳ್ಳಬೇಕು ಎಂದರು.

ಆಯೋಜಕರಾದ ಚೊಟ್ಟಂಗಡ ಎಸ್. ಸೋಮಯ್ಯ, ಕೊಟ್ರಂಗಡ ಸುಬ್ಬಯ್ಯ, ಮುಕ್ಕಾಟಿರ ಡ್ಯಾನಿ ಕಾವೇರಪ್ಪ, ಕುಂದಚ್ಚಿರ ನಿತಿನ್, ಜೋಜೋ, ನೌಷಾದ್, ಸೋಯಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-51-1171625025

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.