ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿ’ ಯಲ್ಲಿ ಬೊಳ್ಳಚೆಟ್ಟಿರ ತಂಡಕ್ಕೆ 90 ರನ್ಗಳ ಭರ್ಜರಿ ಜಯ ಲಭಿಸಿದರೆ, ಪೆಬ್ಬಟ್ಟಿರ 4 ರನ್ಗಳ ರೋಚಕ ಜಯ ಸಿಕ್ಕಿದ್ದು ಪ್ರೇಕ್ಷಕರಿಗೆ ಮುದ ನೀಡಿತು.

ಮಾದೇಟಿರ ಮತ್ತು ಬೊಳ್ಳಚೆಟ್ಟಿರ ನಡುವಿನ ಪಂದ್ಯದಲ್ಲಿ ಬೊಳ್ಳಚೆಟ್ಟಿರ 6 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಅಮೋಘ 136 ರನ್ಗಳನ್ನು ಗಳಿಸಿತು. ಅಂತಿಮವಾಗಿ 90 ರನ್ಗಳ ಜಯ ಪಡೆಯಿತು.

ಪೆಬ್ಬಟ್ಟಿರ ಮತ್ತು ಅಪ್ಪುಡ ನಡುವಿನ ಪಂದ್ಯದಲ್ಲಿ ಪೆಬ್ಬಟ್ಟಿರ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 71 ರನ್ ಗಳನ್ನು ಸೇರಿಸಿತು. ಆದರೆ, ಅಪ್ಪುಡ 6 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 67 ರನ್ ಗಳನ್ನು ಗಳಿಸಿ ಗೆಲುವಿನ ಸನಿಹದಲ್ಲಿ ಮುಗ್ಗರಿಸಿತು. ಅಂತಿಮವಾಗಿ ಪೆಬ್ಬಟ್ಟಿರ ತಂಡಕ್ಕೆ 4 ರನ್ಗಳ ರೋಚಕ ಜಯ ಒಲಿಯಿತು.

ಕಂಗಾoಡ ತಂಡ ಮಾದೆಯಂಡ (ಎಂ.ಬಾಡಗ) ವಿರುದ್ಧ, ಸಣ್ಣುವಂಡ ತಂಡವು ಬಡುಮಂಡ ವಿರುದ್ಧ, ಮಲ್ಲಜ್ಜೀರ ತಂಡವು ಚಾರಿಮಂಡ ವಿರುದ್ಧ 10 ವಿಕೆಟ್ಗಳ ಜಯ ಗಳಿಸಿತು.

ಮಾಚೆಟ್ಟಿರ (ಬಾಳುಗೋಡು) ತಂಡವು ಮುಂಡ್ಯೋಳಂಡ ವಿರುದ್ಧ ಹಾಗೂ ಮುಕ್ಕಾಟಿರ (ಹರಿಹರ ಬೆಳ್ಳೂರು) ತಂಡವು ಮುಂಡಚಾಡಿರ ವಿರುದ್ಧ 9 ವಿಕೆಟ್ಗಳ ಜಯ ಪಡೆದವು.

ಮೂಕೊಂಡ ತಂಡ ಅಯ್ಯಲಾಪಂಡ ವಿರುದ್ಧ ಹಾಗೂ ಕರವಂಡ ತಂಡ ಅರಮಣಮಾಡ (ಬೇಗೂರು) ವಿರುದ್ಧ 8 ವಿಕೆಟ್ಗಳ ಜಯ ಗಳಿಸಿದವು.

ಉಳಿದಂತೆ, ಕೂತಂಡ ತಂಡ ಅಪ್ಪುಮಣಿಯಂಡ ವಿರುದ್ಧ 7 ವಿಕೆಟ್ಗಳಿಂದ; ಮುಕ್ಕಾಟಿರ (ಕುಂಜಲಗೇರಿ) ತಂಡವು ಬೋವ್ವೇರಿಯಂಡ ವಿರುದ್ಧ 11 ರನ್ಗಳಿಂದ; ಕೊಟ್ಟಂಗಡ ತಂಡವು ತೀತಿರ (ಹುದಿಕೇರಿ) ವಿರುದ್ಧ 42 ರನ್ಗಳ ಗೆಲುವು ಪಡೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-51-1235792266

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.