ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿ'ಯಲ್ಲಿ ಕರಿನೆರವಂಡ ಮತ್ತು ನಂದಿನೆರವಂಡ ನಡುವಿನ ಪಂದ್ಯದಲ್ಲಿ ಕರಿನೆರವಂಡ 7 ರನ್ ಗಳಿಂದ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರಿನೆರವಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 79 ರನ್ ಗಳನ್ನು ಸೇರಿಸಿತು. ನಂದಿನೆರವoಡ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 72 ರನ್ ಗಳನ್ನು ಗಳಿಸಿ ಗೆಲುವಿನ ದಡದಲ್ಲಿ ಎಡವಿತು.ಅಳಮೇಂಗಡ ಮತ್ತು ದಾಸಂಡ ನಡುವಿನ ಪಂದ್ಯದಲ್ಲಿ ಅಳಮೇಂಗಡ 9 ವಿಕೆಟ್ ಗಳಿಂದ ಗೆಲುವು ಕಂಡಿತು. ಇದು ಕೇವಲ 2.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 42 ರನ್ ಗಳನ್ನು ಗಳಿಸಿದ್ದು ವಿಶೇಷ ಎನಿಸಿತ್ತು.

ಕೋಳೆರ ತಂಡವು ಗೀಜಿಗಂಡ ವಿರುದ್ಧ ಹಾಗೂ ಮುಕ್ಕಾಟಿರ (ಬೆಳ್ಳೂರು ಹರಿಹರ) ತಂಡವು ಮೂಕಳೆರ ವಿರುದ್ಧ 7 ವಿಕೆಟ್ ಗಳಿಂದ; ಪಾರುವಂಡ ತಂಡವು ಮಂದೇಯoಡ (ಮಾದಾಪುರ) ವಿರುದ್ಧ ಹಾಗೂ ಕೊಟ್ಟಂಗಡ ತಂಡವು ಮೂಕೊಂಡ ವಿರುದ್ಧ 8 ವಿಕೆಟ್ ಗಳಿಂದ; ನೆರವಂಡ ತಂಡವು ಮುಕ್ಕಾಟಿರ (ಕುಂಬಳದಾಳು) ವಿರುದ್ಧ 24 ರನ್ ಗಳಿಂದ: ಮಾಳೇಟಿರ (ಕೆದಮುಳ್ಳೂರು) ತಂಡವು ತoಬುಕುತ್ತಿರ ವಿರುದ್ಧ 9 ವಿಕೆಟ್ ಗಳಿಂದ ಗೆಲುವು ಪಡೆಯಿತು.

ಮಹಿಳಾ ತಂಡಗಳು: ಪಾಸುರ ತಂಡವು ಮಾಚಿಮಂಡ ವಿರುದ್ಧ 9 ವಿಕೆಟ್ ಗಳಿಂದ; ಮುಕ್ಕಾಟಿರ (ಹರಿಹರ) ತಂಡವು ಮಾಚಮಾಡ ವಿರುದ್ಧ 24 ರನ್ ಗಳಿಂದ; ಓಡಿಯಂಡ ತಂಡವು ಮೇವಡ ವಿರುದ್ಧ 60 ರನ್ ಗಳಿಂದ; ಚೆಕ್ಕೇರ ತಂಡವು ಕಂಬೀರoಡ ವಿರುದ್ಧ 9 ವಿಕೆಟ್ ಗಳಿಂದ ಗೆಲುವು ಸಾಧಿಸಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-51-1967421205

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.