ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿ’ಯ ಪುರುಷರ ವಿಭಾಗದ ಪ್ರೀ–ಕ್ವಾರ್ಟರ್ ಫೈನಲ್ಸ್ ಪಂದ್ಯಗಳಲ್ಲಿ ಮಾಳೇಟಿರ (ಕೆದಮುಳ್ಳೂರು), ಅಳಮೇಂಗಡ, ಪಾರುವಂಡ ಹಾಗೂ ನೆರವಂಡ ತಂಡಗಳು ಜಯಗಳಿಸಿದವು. ಮಹಿಳೆಯರ ವಿಭಾಗದಲ್ಲಿ ಮಣವಟ್ಟಿರ ಮತ್ತು ಅರಮಣಮಾಡ ತಂಡಗಳು ಸೆಮಿಫೈನಲ್ಸ್ ತಲುಪಿದವು.

ಪುರುಷರ ವಿಭಾಗದಲ್ಲಿ ಲಾಲು ಮುದ್ದಯ್ಯ ಮೈದಾನದಲ್ಲಿ ಭಾನುವಾರ ಪ್ರೀ–ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ನಡೆದವು.

ಮಾಳೇಟಿರ (ಕೆದಮುಳ್ಳೂರು) ಮತ್ತು ಕರಿನೆರವಂಡ ನಡುವೆ ಪಂದ್ಯದಲ್ಲಿ ಮಾಳೇಟಿರ 38 ರನ್ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಾಳೇಟಿರ 6 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 97 ರನ್ಗಳನ್ನು ಸೇರಿಸಿತು. ಕರಿನೆರವಂಡ 6 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 59 ರನ್ಗಳನ್ನು ಗಳಿಸಿ ಸೋಲು ಕಂಡಿತು.

ಮಾಳೇಟಿರ ಪರ ನವೀನ್ ಹಾಗೂ ಅನ್ಶುಲ್ ತಲಾ 2 ವಿಕೆಟ್ ಪಡೆದರು. ರಾಣೆ ಅರ್ಧ ಶತಕ (50) ಗಳಿಸಿದರು. ಕರಿನೆರವಂಡ ಪರ 2 ವಿಕೆಟ್ ಪಡೆದು 14 ರನ್ಗಳನ್ನು ಸೇರಿಸಿದ ಗಗನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಅಳಮೇಂಗಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ ಅಳಮೇಂಗಡ ತಂಡಕ್ಕೆ 10 ವಿಕೆಟ್ಗಳ ಜಯ ಪಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪುದಿಯೊಕ್ಕಡ 6 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 39 ರನ್ಗಳನ್ನು ಗಳಿಸಿತು. ಅಳಮೇಂಗಡ ಯಾವುದೇ ವಿಕೆಟ್ ನಷ್ಟವಿಲ್ಲದೆ 3.1 ಓವರ್ಗಳಲ್ಲಿಯೇ 42 ರನ್ ಗಳಿಸಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿತು.

ಅಳಮೇಂಗಡ ಸೋಮಯ್ಯ 26 ರನ್ಗಳನ್ನು ಗಳಿಸಿದರು. ಪುದಿಯೊಕ್ಕಡ ನಿರನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಪಾರುವಂಡ ಮತ್ತು ಮುಕ್ಕಾಟಿರ (ಬೆಳ್ಳೂರು - ಹರಿಹರ) ನಡುವಿನ ಪಂದ್ಯದಲ್ಲಿ ಪಾರುವಂಡ ತಂಡ 7 ವಿಕೆಟ್ಗಳಿಂದ ಗೆಲುವು ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಕ್ಕಾಟಿರ 6 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 87 ರನ್ಗಳನ್ನು ಗಳಿಸಿತು. ಪಾರುವಂಡ 5.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 88 ರನ್ಗಳನ್ನು ಗಳಿಸಿ ಜಯ ಸಾಧಿಸಿತು.ಪಾರುವಂಡ ಪರ ಪ್ರಿನ್ಸ್ ಹಾಗೂ ಹೇಮಂತ್ ತಲಾ 2 ವಿಕೆಟ್ ಪಡೆದರು. ಮಿಥುನ್ 35 ರನ್ಗಳನ್ನು ಸೇರಿಸಿದರು. ಮುಕ್ಕಾಟಿರ ಪರ ಲಕ್ಷ್ಯನ್ 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ನೆರವಂಡ ಮತ್ತು ಕೊಟ್ಟಂಗಡ ನಡುವಿನ ಪಂದ್ಯದಲ್ಲಿ ನೆರವಂಡ ತಂಡಕ್ಕೆ 18 ರನ್ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆರವಂಡ 6 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 59 ರನ್ಗಳನ್ನು ಸೇರಿಸಿತು. ಕೊಟ್ಟಂಗಡ 6 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 41 ರನ್ಗಳನ್ನು ಗಳಿಸಿ ಗೆಲುವಿನ ಸಮೀಪ ಎಡವಿತು.

ನೆರವಂಡ ಪರ ಸಂಪನ್ 18 ರನ್ಗಳನ್ನು ಪಡೆದರು. ಅರುಣ್, ವರುಣ್ ಹಾಗೂ ಬೋಪಣ್ಣ ತಲಾ 1 ವಿಕೆಟ್ ಪಡೆದರು.

ಕೊಟ್ಟಂಗಡ ಪರ 2 ವಿಕೆಟ್ ಪಡೆದ ರೋಷನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-51-1063015768

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.