ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿ’ ಯಲ್ಲಿ ಮಾಳೇಟಿರ (ಕೆದಮುಳ್ಳೂರು) ತಂಡಕ್ಕೆ 148 ರನ್ಗಳ ಭಾರಿ ಜಯ ಒಲಿಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಾಳೇಟಿರ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ ದಾಖಲೆಯ 190 ರನ್ ಗಳನ್ನು ಸೇರಿಸಿತು. ಇದಕ್ಕೆ ಪ್ರತಿಯಾಗಿ ಕೊಡಂದೇರ 6 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 42 ರನ್ಗಳನ್ನಷ್ಟೇ ಗಳಿಸಿತು.

ಕನ್ನಂಡ ಮತ್ತು ಅಲ್ಲಂಗಡ ನಡುವಿನ ಪಂದ್ಯದಲ್ಲಿ ಕನ್ನಂಡ 10 ರನ್ಗಳ ರೋಚಕ ಗೆಲುವು ಪಡೆದದ್ದು ಸಹ ವಿಶೇಷ ಎನಿಸಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕನ್ನಂಡ 6 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 82 ರನ್ಗಳನ್ನು ಸೇರಿಸಿತು. ಅಲ್ಲಂಗಡ 6 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 72 ರನ್ಗಳನ್ನಷ್ಟೇ ಗಳಿಸಿತು.

ತಂಬುಕುತ್ತೀರ ತಂಡ ಸಹ ರನ್ಗಳ ಸುರಿಮಳೆಗರೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಂಬುಕುತ್ತೀರ 6 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 111 ರನ್ಗಳನ್ನು ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಂದoಡ 6 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 62 ರನ್ ಗಳನ್ನು ಸೇರಿಸಿತು. ಅಂತಿಮವಾಗಿ ತಂಬುಕುತ್ತೀರ ತಂಡಕ್ಕೆ 49 ರನ್ ಗಳ ದೊರೆಯಿತು.

ಉಳಿದಂತೆ, ಚಿರಿಯಪಂಡ ತಂಡಕ್ಕೆ ಬೊಜ್ಜಂಗಡ ವಿರುದ್ಧ 8 ವಿಕೆಟ್ಗಳಿಂದ; ಮುಕ್ಕಾಟಿರ (ಕುಂಬಳದಾಳು) ತಂಡ ಚೀಕಂಡ ವಿರುದ್ಧ 10 ವಿಕೆಟ್ಗಳಿಂದ; ಸಿದ್ದಂಡ ತಂಡ ಬಲ್ಲಚಂಡ ವಿರುದ್ಧ 37 ರನ್ಗಳಿಂದ; ಬೊಳ್ಳೇರ ತಂಡ ಅಣ್ಣಳಮಾಡ (ಪೂಕೊಳ) ವಿರುದ್ಧ 5 ವಿಕೆಟ್ಗಳಿಂದ; ಮಾಳೇಟಿರ (ಕೆದಮುಳ್ಳೂರು) ತಂಡ ಮಲಚ್ಚೀರ ವಿರುದ್ಧ 25 ರನ್ಗಳಿಂದ; ಚೆಕ್ಕೇರ ತಂಡ ಐಚೋಡಿಯಂಡ ವಿರುದ್ಧ 23 ರನ್ಗಳಿಂದ ಜಯ ಸಾಧಿಸಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-1198660511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.