ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿ‘ಯಲ್ಲಿ ಸೂಪರ್ ಓವರ್ನಂತಹ ರೋಮಾಂಚನ ದೃಶ್ಯ ನೋಡುವ ಅವಕಾಶ ನೋಡಗರಿಗೆ ಗುರುವಾರ ಲಭಿಸಿತು.

ಕನ್ನಂಡ ಮತ್ತು ಕರಿನೆರವಂಡ ನಡುವಿನ ಪಂದ್ಯದಲ್ಲಿ ಉಭಯ ತಂಡಗಳೂ ತಲಾ 87 ರನ್ಗಳನ್ನು ಗಳಿಸಿ ಸಮಬಲ ಸಾಧಿಸಿದವು.

ನಂತರ ನಡೆದ ಸೂಪರ್ ಓವರ್ನಲ್ಲಿ ಕನ್ನಂಡ 2 ವಿಕೆಟ್ ನಷ್ಟಕ್ಕೆ 11 ರನ್ಗಳನ್ನು ಗಳಿಸಿತು. ಕರಿನೆರವಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 12 ರನ್ಗಳನ್ನು ಸೇರಿಸಿ ಗೆಲುವಿನ ನಗೆ ಬೀರಿತು.

ಸಣ್ಣುವಂಡ ಮತ್ತು ಹಂಚೆಟ್ಟಿರ ನಡುವಿನ ಪಂದ್ಯದಲ್ಲಿ ಹಂಚೆಟ್ಟಿರ ತಂಡ 3 ರನ್ಗಳಿಂದ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹಂಚೆಟ್ಟಿರ 6 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 50 ರನ್ಗಳನ್ನು ಗಳಿಸಿತು. ಸಣ್ಣುವಂಡ 6 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿ ಗೆಲುವಿನ ದಡದಲ್ಲಿ ಎಡವಿತು.

ನಂದಿನೆರವಂಡ ತಂಡವು ಅಮ್ಮಾಟಂಡ ವಿರುದ್ಧ 9 ವಿಕೆಟ್ಗಳಿಂದ; ಅಳಮೇಂಗಡ ತಂಡ ಚೊಟ್ಟೆಯಂಡಮಾಡ ವಿರುದ್ಧ 9 ವಿಕೆಟ್ಗಳ ಗೆಲುವು ಪಡೆದವು.

ಉಳಿದಂತೆ,ತಂಬುಕುತ್ತಿರ ತಂಡವು ಚಿರಿಯಪಂಡ ವಿರುದ್ಧ, 26 ರನ್ಗಳಿಂದ; ದಾಸಂಡ ಪೆಬ್ಬಟ್ಟಿರ ವಿರುದ್ಧ 6 ವಿಕೆಟ್ಗಳಿಂದ; ಪುದಿಯೊಕ್ಕಡ ತಂಡವು ಮುಂಡಂಡ ವಿರುದ್ಧ 5 ವಿಕೆಟ್ಗಳಿಂದ; ಮೂಕೊಂಡ ತಂಡವು ಮುಕ್ಕಾಟಿರ (ಕುಂಜಿಲಗೇರಿ) ವಿರುದ್ಧ 26ರನ್ಗಳಿಂದ; ಕೊಟ್ಟಂಗಡ ತಂಡವು ಕರವಂಡ ವಿರುದ್ಧ 34 ರನ್ಗಳಿಂದ; ಮುಕ್ಕಾಟಿರ (ಕುಂಬಳದಾಳು) ತಂಡ ಸಿದ್ದಂಡ ವಿರುದ್ಧ 26 ರನ್ಗಳಿಂದ; ನೆರವಂಡ ತಂಡ ಬೊಳ್ಳೆರ ವಿರುದ್ಧ 60 ರನ್ಗಳಿಂದ ಗೆಲುವು ಸಾಧಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-1611783153

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.