ಮಡಿಕೇರಿ: ‘ಕ್ರಿಕೆಟ್ ಮತ್ತು ಹಾಕಿಯಂತೆ ಫುಟ್ಬಾಲ್ ಸಹ ಉತ್ತಮ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿ ಯುವ ಪೀಳಿಗೆ ತೊಡಗಿಸಿಕೊಂಡು ಮುಂದೆ ಬರಬೇಕು’ ಎಂದು ಕೊಡಗು ಗೌಡ ಸಮಾಜದ ಅಧ್ಯಕ್ಷ ದಂಬೆಕೋಡಿ ಆನಂದ ತಿಳಿಸಿದರು.

ಮಡಿಕೇರಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ 2 ದಿನಗಳ ಕಾಲ ನಡೆಯಲಿರುವ ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷೆ ಗೌಡ ಜನಾಂಗ ಬಾಂಧವರಿಗಾಗಿನ ‘ಗೌಡ ಕ್ರೀಡಾ ಹಬ್ಬ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ನಿಟ್ಟಿನಲ್ಲಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿಯ ಪ್ರಯತ್ನ ಶ್ಲಾಘನೀಯವಾದುದು. ಸರ್ಕಾರ ಗೌಡ ಸಮಾಜಕ್ಕೆ ಜಾಗ ಮಂಜೂರು ಮಾಡಿದ್ದು ಆ ಜಾಗದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಟರ್ಫ್ ಮೈದಾನ ನಿರ್ಮಿಸಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

ಕೊಡಗು ಗೌಡ ಸಮಾಜಗಳ ಅಧ್ಯಕ್ಷ ಆನಂದ್ ಕರಂದ್ಲಾಜೆ ಮಾತನಾಡಿ, ‘ಕ್ರೀಡಾಕೂಟ ಆಯೊಜನೆ ಮಾಡುವುದು ಕಷ್ಟದ ಕೆಲಸ; ಜನಾಂಗ ಬಾಂಧವರು ಸಮಯ ಮೀಸಲಿರಿಸಿಕೊಂಡು ಆಯೋಜಕರಿಗೆ ಶಕ್ತಿ ನೀಡುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಸರ್ಕಾರದ ಅನುದಾನವಿಲ್ಲದಿದ್ದರೂ ವ್ಯವಸ್ಥಿತವಾಗಿ ಈ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲರೂ ಸಂಘಟಿತರಾಗಿ ದೊಡ್ಡಮಟ್ಟದಲ್ಲಿ ಪೂರ್ವ ತಯಾರಿಯಿಂದಿಗೆ ಆಯೋಜನೆ ಮಾಡಬೇಕು ಎಂದರು.

ಗೌಡ ಸ್ಪೋರ್ಟ್ಸ್ ಅಕಾಡೆಮಿ ಪದಾಧಿಕಾರಿ ಪೊನ್ನಚನ ಶ್ರೀನಿವಾಸ್, ಅಂತರರಾಷ್ಟ್ರೀಯ ಫುಟ್ಬಾಲ್ ಆಟಗಾರರಾದ ಬೆಪ್ಪುರನ ಅಣ್ಣಪ್ಪಕುಮಾರ್, ಪದ್ಮಪ್ರಿಯ ಸಿಂಗೂರು, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ, ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಕೋಡಿ ವಿದಿತ, ಕೊಡಗು ಗೌಡ ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಕುಟ್ಟನ ಪ್ರಶಾಂತ್, ಗೌಡ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಮಂಞಂಡ್ರ ವಿನೋದ್, ಅಕಾಡೆಮಿ ಪದಾಧಿಕಾರಿ ಕಲ್ಲುಮುಟ್ಲು ಜಶ್ಮಿ, ಕುಡೆಕಲ್ ಸಂತೋಷ್ ಭಾಗವಹಿಸಿದ್ದರು.

ಬಳಿಕ ಬಾಲಕರ, ಬಾಲಕಿಯರ, ಹಿರಿಯರ ಫುಟ್ಬಾಲ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾವಳಿಗಳು ನಡೆದವು. ಭಾನುವಾರ ಅಂತಿಮ ಪಂದ್ಯಾವಳಿಗಳು ಹಾಗೂ ಹಳೆಯ ಹಾಗೂ ಸೂಪರ್ ಬೈಕ್ಗಳ ಪ್ರದರ್ಶನ ಸಹ ಇರಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-51-1934950676

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.