ಮಡಿಕೇರಿ: ತಾಲ್ಲೂಕಿನ ಮರಗೋಡುವಿನ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಸೋಮವಾರ ಆರಂಭವಾದ ಗೌಡ ಜನಾಂಗದ ಕುಟುಂಬವಾರು ಕ್ರಿಕೆಟ್ನಲ್ಲಿ ಉಳುವಾರನ ಪ್ರಿಕ್ವಾರ್ಟರ್ ತಲುಪಿ ಪಾರಮ್ಯ ಮೆರೆಯಿತು.

ಉಳುವಾರನ ತಂಡ 1 ವಿಕೆಟ್ ನಷ್ಟದಲ್ಲಿ 94 ರನ್ ಕಲೆ ಹಾಕಿದರೆ, ತುಂತಜೆ ತಂಡ 4 ವಿಕೆಟ್ ಕಳೆದುಕೊಂಡು ಕೇವಲ 21 ರನ್ ಮಾತ್ರ ಗಳಿಸಿತು. ಈ ಮೂಲಕ 73 ರನ್ಗಳ ಬೃಹತ್ ಅಂತರದ ಜಯವನ್ನು ಉಳುವಾರನ ತಂಡ ಪಡೆದುಕೊಂಡಿತು. ಮತ್ತೊಂದು ಪಂದ್ಯದಲ್ಲಿ ಹೊಸೂರು ತಂಡ 7 ವಿಕೆಟ್ಗೆ 46 ರನ್ ಗಳಿಸಿದರೆ ಉಳುವಾರನ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿ ಪ್ರಿಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿತು. ಉಳಿದಂತೆ, ತುಂತಜೆ, ಹೊಸೂರು, ತೇಲಬೈಲು ತಂಡಗಳು ಶುಭಾರಂಭ ಮಾಡಿದವು.

ಮೂಡಗದ್ದೆ ತಂಡ ನಿಗದಿತ 6 ಓವರ್ಗಳಲ್ಲಿ 3 ವಿಕೆಟ್ಗೆ 57 ರನ್ ಗಳಿಸಿದರೆ, ತುಂತಜೆ ತಂಡ ಒಂದು ವಿಕೆಟ್ ನಷ್ಟದಲ್ಲಿ 60 ಗಳಿಸಿ ಗುರಿ ಸಾಧಿಸಿತು.

ಹೊಸೂರು ತಂಡ 4 ವಿಕೆಟ್ಗೆ 50 ರನ್ ಕಲೆ ಹಾಕಿದರೆ, ಕಾಂಗಿರ ತಂಡ 7 ವಿಕೆಟ್ ಕಳೆದುಕೊಂಡು 34 ರನ್ ಮಾತ್ರ ಗಳಿಸಿ ಸೋಲನುಭವಿಸಿತು. ತೇಲಬೈಲು ತಂಡ 6 ವಿಕೆಟ್ಗೆ 57 ರನ್ ಗಳಿಸಿದರೆ, ಕೈಕೇರಿ ಮುಕ್ಕಾಟಿ ತಂಡ 6 ವಿಕೆಟ್ಗೆ 49 ರನ್ ಗಳಿಸಿ ಸೋಲನುಭವಿಸಿತು.

ಹೊಸೂರು ತಂಡ 2 ವಿಕೆಟ್ಗೆ 77 ರನ್ ಗಳಿಸಿದರೆ, ತೇಲಬೈಲು ತಂಡ 7 ವಿಕೆಟ್ ಕಳೆದುಕೊಂಡು 50ರನ್ ಮಾತ್ರ ಗಳಿಸಿ 27 ರನ್ಗಳ ಅಂತರದಿಂದ ಸೋಲನುಭವಿಸಿತು. ಮುಕ್ಕಾಟಿ ತಂಡ 7 ವಿಕೆಟ್ಗೆ 24 ರನ್ ಗಳಿಸಿದರೆ, ಬೈಮನ ತಂಡ 5 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.

ಇದಕ್ಕೂ ಮುನ್ನ ನಡೆದ ಪ್ರದರ್ಶನ ಪಂದ್ಯದಲ್ಲ ಸ್ಥಳೀಯ ಆತಿಥೇಯ ಗೌಡ ಇವಿನಿಂಗ್ ಸ್ಟಾರ್ ತಂಡದ ವಿರುದ್ಧ ಕೊಡಗು ಪತ್ರಕರ್ತರ ತಂಡ ಜಯ ಸಾಧಿಸಿತು.

ಇದಕ್ಕೂ ಮುನ್ನ ಪಂದ್ಯಾವಳಿ ಉದ್ಘಾಟಿಸಿದ ಮ್ಯಾರಥಾನ್ ಓಟಗಾರ ಹೊಸೋಕ್ಲು ಚಿಣ್ಣಪ್ಪ, ‘ಕ್ರೀಡಾಪಟುಗಳು ಯಾವದೇ ಬೇಧ ಭಾವವಿಲ್ಲದೆ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕು’ ಎಂದು ಹೇಳಿದರು.

ಇವಿನಿಂಗ್ ಸ್ಟಾರ್ ಅಧ್ಯಕ್ಷ ಕಟ್ಟೆಮನೆ ರೋಷನ್, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪಿ.ಕೆ.ರವಿ, ಭಾರತಿ ಗ್ಲೋಬಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ

ಮಳ್ಳಂದಿರ ಕೃಷ್ಣರಾಜು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಪೂಳಕಂಡ ಸಂದೀಪ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್ ಕುಮಾರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಮಹೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-51-1358576526

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.