ನಾಪೋಕ್ಲು ( ಕೊಡಗು ಜಿಲ್ಲೆ): ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಇನ್ನೇನಿದ್ದರೂ ಬಲಾಢ್ಯರ ಪೈಪೋಟಿ. ನೋಂದಣಿಯಾಗಿದ್ದ 383 ತಂಡಗಳ ಪೈಕಿ ಈಗಾಗಲೇ 321 ತಂಡಗಳು ನಿರ್ಗಮಿಸಿವೆ. ಈಗ ಉಳಿದಿರುವ 62 ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಶುರುವಾಗಿದೆ.

ದಿನ ಕಳೆದಂತೆ ರಂಗು ಪಡೆಯುತ್ತಿರುವ ಈ ಟೂರ್ನಿಯಲ್ಲಿ ಪಾಲ್ಗೊಂಡು ಸೋತು ನಿರ್ಗಮಿಸುತ್ತಿರುವ ಪ್ರತಿ ತಂಡಕ್ಕೆ ಚೇನಂಡ ಕುಟುಂಬದ ವಿಶೇಷ ಪಾಪುಲಿ ಸ್ಮರಣೆಯೊಂದಿಗೆ ವಿಶೇಷ ಕೊಡುಗೆಯಾಗಿ ಚೆಂಬದುಡಿಯನ್ನು ನೀಡಲಾಗುತ್ತಿದೆ. ಪ್ರತಿ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮನಾಗಿ ಆಯ್ಕೆಯಾಗುವ ಆಟಗಾರನಿಗೆ ಜಿಲ್ಲೆಯ ಒಲಂಪಿಯನ್ಗಳು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವವರು, ಚೇನಂಡ ಕುಟುಂಬದ ಅಧ್ಯಕ್ಷರು, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರು ಸೇರಿದಂತೆ 16 ಮಂದಿ ಸಹಿ ಮಾಡಿರುವ ಹಾಕಿ ಸ್ಟಿಕ್ ಅನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಅಂತಿಮ ಹಂತ ತಲುಪಿದ 64 ಕುಟುಂಬಗಳಿಗೆ ಚಂಬದುಡಿ ವಿತರಣೆ ಮಾಡಲಾಗುತ್ತಿದೆ. ಸೋಮವಾರದಿಂದ ಪರಾಜಿತ ತಂಡಗಳಿಗೆ ದುಡಿ ನೀಡಲಾಗುತ್ತಿದೆ. ಹೀಗೆ, ಹಲವು ಹತ್ತು ವಿಶೇಷಗಳನ್ನು ಒಳಗೊಂಡಿರುವ ಈ ಕ್ರೀಡೋತ್ಸವಕ್ಕೆ ಏಪ್ರಿಲ್ 25ರಿಂದ ಮಹಿಳಾ ಹಾಕಿಯೂ ಸೇರ್ಪಡೆಯಾಗಲಿದೆ.

ಆತಿಥೇಯ ಚೇನಂಡ ತಂಡವು ಬುಧವಾರ ನಡೆದ ಪಂದ್ಯದಲ್ಲಿ 1–0ರಿಂದ ಕರವಂಡ ವಿರುದ್ಧ ಗೆಲುವು ಸಾಧಿಸಿತು. ಉಳಿದಂತೆ, ಸಣ್ಣುವಂಡ 4-2 ರಿಂದ ಕುಪ್ಪಂಡ (ನಾಂಗಾಲ) ವಿರುದ್ಧ; ಬೋವ್ವೇರಿಯಂಡ 4-2ರಿಂದ ಕುಂಡ್ಯೋಳಂಡ ವಿರುದ್ಧ; ಮುರುವಂಡ 2-1ರಿಂದ ಅಮ್ಮಣಿಚಂಡ ವಿರುದ್ಧ ಜಯ ಗಳಿಸಿದವು. ಎದುರಾಳಿ ತಂಡಗಳು ಕೊಂಚ ಪೈಪೋಟಿ ತೋರಿದವು.

ಆದರೆ, ಪಳಂಗಡ ತಂಡವು 3–0 ರಿಂದ ಮಾತಂಡ ವಿರುದ್ಧ; ಕುಲ್ಲೇಟಿರ 3–0ರಿಂದ ಕರ್ತಮಾಡ ವಿರುದ್ಧ; ಮೇಚಿಯಂಡ 1-0ರಿಂದ ಅಪ್ಪನೆರವಂಡ ವಿರುದ್ದ; ಪುಲ್ಲಂಗಡ 1-0 ರಿಂದ ಚೌರಿರ (ಹೊದ್ದೂರು) ವಿರುದ್ಧ; ಕೂತಂಡ 3-0ರಿಂದ ಬಲಚಂಡ ವಿರುದ್ಧ ಗೆಲುವು ಸಾಧಿಸಿದವು. ಎದುರಾಳಿ ತಂಡಗಳು ಒಂದು ಗೋಲೂ ದಾಖಲಿಸಲು ಅವಕಾಶ ನೀಡಲಿಲ್ಲ.

ಇನ್ನು ಸಾಕಷ್ಟು ಕುತೂಹಲ ಕೆರಳಿಸಿದ್ದ ಕಾಂಡಂಡ –ಮೂಕಳಮಾಡ ಹಾಗೂ ಬಿದ್ದಾಟಂಡ–ನೆರವಂಡ ನಡುವಿನ ಪಂದ್ಯಗಳ ಗೆಲುವಿಗೆ ಟೈಬ್ರೇಕರ್ ಮೊರೆ ಹೋಗಬೇಕಾಯಿತು.

ಅಂತಿಮವಾಗಿ, ಕಾಂಡಂಡ 4-3 ರಿಂದ ಮೂಕಳಮಾಡ ವಿರುದ್ಧ ರೋಚಕ ಗೆಲುವು ಪಡೆದರೆ, ಬಿದ್ದಾಟಂಡ 5-3 ರಿಂದ ನೆರವಂಡ ವಿರುದ್ಧ ಟೈ ಬ್ರೇಕರ್ನಲ್ಲಿ ಗೆಲುವು ಸಾಧಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-51-576085533

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.