ನಾಪೋಕ್ಲು (ಕೊಡಗು ಜಿಲ್ಲೆ): ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಬುಧವಾರ ನಡೆದ ಹಲವು ಪಂದ್ಯಗಳಲ್ಲಿ ವಿಶೇಷಗಳು ಕಂಡು ಬಂದವು.

ದಾಸಂಡ ವಿರುದ್ಧ ಪೆಮ್ಮಂಡ ತಂಡದ ಆಟಗಾರ ಪಿ.ಎ.ಸೋಮಣ್ಣ ಅವರು ಮೊದಲ 17 ಸೆಕೆಂಡ್ಗಳಲ್ಲೇ ಗೋಲು ಗಳಿಸಿದ್ದು ವಿಶೇಷ ಎನಿಸಿತ್ತು.

ಹಿರಿಯರೂ ಕಿರಿಯರೂ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. 76 ವರ್ಷದ ಬಾಚಮಂಡ ರಾಜ ಬಾಚಮಂಡ ಮತ್ತು ಕುಂಡ್ಯೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಾಚಮಂಡ ತಂಡದ ಪರವಾಗಿ ಆಟವಾಡಿ ಗಮನಸೆಳೆದರು. ಮತ್ತೋರ್ವ ಆಟಗಾರ್ತಿ ಕಲಿಯಂಡ ಸ್ಮಿತಾ ಬಾಚಮಂಡ ತಂಡದ ಪರವಾಗಿ ಆಟವಾಡಿದರು.

ಸುಳ್ಳಿಮಾಡ ವಿರುದ್ಧ ಅಪ್ಪಚೆಟ್ಟೋಳಂಡ ತಂಡದ ಪರವಾಗಿ 5 ವರ್ಷದ ಅದಿತ್ ಪೊನ್ನಣ್ಣ ಹಾಗೂ 10 ವರ್ಷದ ಅದ್ವಿಕ್ ಭೀಮಯ್ಯ ‘ಪ್ಲೇಯರ್ ಆಫ್ ದಿನ ಮ್ಯಾಚ್’ ಗೌರವಕ್ಕೆ ಪಾತ್ರರಾದರು. ಕೊನೆಯವರೆಗೂ ಸಾಕಷ್ಟು ಕುತೂಹಲಗಳನ್ನು ಉಳಿಸಿಕೊಂಡಿದ್ದ ಅಪ್ಪಡೇರಂಡ ಮತ್ತು ಮೇದುರ ನಡುವಿನ ಪಂದ್ಯದಲ್ಲಿ ಟೈಬ್ರೇಕರ್ನಲ್ಲಿ 4-3 ರಿಂದ ಅಪ್ಪಡೇರಂಡ ಗೆಲುವು ಸಾಧಿಸಿದರೆ, ಇದೇ ಬಗೆಯಲ್ಲಿ ಕುತೂಹಲ ಉಳಿಸಿಕೊಂಡಿದ್ದ ಕಾಡ್ಯಮಾಡ ಮತ್ತು ಚೆಯ್ಯಂಡ ನಡುವಿನ ಪಂದ್ಯದಲ್ಲಿ ಕಾಡ್ಯಮಾಡ 4-2 ರಿಂದ ಜಯ ಸಾಧಿಸಿತು.

ಸಜಿತ್ ಅವರು ಗಳಿಸಿದ ತ್ರಿವಳಿ ಗೋಲುಗಳ ನೆರವಿನಿಂದ ಸುಳ್ಳಿಮಾಡ ತಂಡವು 6-0 ರಿಂದ ಅಪ್ಪಚೆಟ್ಟೋಳಂಡ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಕೋಟೇರ 5-0ಯಿಂದ ಮುಕ್ಕಾಟಿರ (ಕುಂಬಳದಾಳು) ವಿರುದ್ಧ; ಪೆಮ್ಮಂಡ 5-1ರಿಂದ ದಾಸಂಡ ವಿರುದ್ಧ ಭಾರಿ ಅಂತರದ ಗೆಲುವು ಸಾಧಿಸಿದವು.

ಸ್ಪರ್ಧೆ ಕಂಡು ಬಂದ ಕೆಲವು ಪಂದ್ಯಗಳಲ್ಲಿ ಕೊಂಗಂಡ 3-1ರಿಂದ ಮೊಳ್ಳೇರ ವಿರುದ್ಧ; ಅಲ್ಲಪಂಡ 2-1 ರಿಂದ ತೀತಿಮಾಡ ವಿರುದ್ಧ; ಕಾಳೆಂಗಡ 2-1ರಿಂದ ವಾಟೇರಿರ ವಿರುದ್ಧ; ಮೇವಡ 4–2ರಿಂದ ಕಲ್ಲುಮಾಡಂಡ ವಿರುದ್ಧ; ಚೌರೀರ (ಹೊದವಾಡ) 3-2 ರಿಂದ ಅಜ್ಜಿನಂಡ ವಿರುದ್ಧ; ಐತಿಚಂಡ 3-1ರಿಂದ ಪುಗ್ಗೇರ ವಿರುದ್ದ; ಮಾದೆಯಂಡ 2-1ರಿಂದ ಮಂಡೀರ(ನೆಲಜಿ) ವಿರುದ್ಧ ಗೆಲುವು ಪಡೆದವು.

ಉಳಿದಂತೆ, ನಾಪಂಡ 4-0 ರಿಂದ ಮಚ್ಚುರ ವಿರುದ್ಧ; ಕುಂಡ್ಯೋಳಂಡ 4-0ರಿಂದ ಬಾಚಮಂಡ ವಿರುದ್ಧ; ಚೇಂದಿರ 2-0ರಿಂದ ಚೊಟ್ಟೆಯಂಡ ವಿರುದ್ಧ; ಮಲ್ಲಂಡ 2-0ರಿಂದ ಚೆನ್ನಪಂಡ ವಿರುದ್ಧ; ಮಂಡೀರ (ಮೂವತೋಕ್ಲು) 2-0ರಿಂದ ಬಾಚಳ್ಳೀರ ವಿರುದ್ಧ; ಚೌರೀರ (ಹೊದ್ದೂರು) 3-0 ರಿಂದ ಚೇಂದ್ರಿಮಾಡ (ನಾಂಗಾಲ) ವಿರುದ್ಧ; ಮೂಕಳಮಾಡ 3-0 ರಿಂದ ಪೋರಂಗಡ ವಿರುದ್ದ; ಮತ್ರಂಡ 2-0 ರಿಂದ ಕಾಂಡೇರ ವಿರುದ್ಧ; ಕಂಗಾಂಡ 2-0ರಿಂದ ಜಮ್ಮಡ ಗೆಲುವು ಸಾಧಿಸಿದವು. ಎದುರಾಳಿ ತಂಡಗಳಿಗೆ ಒಂದು ಗೋಲು ಗಳಿಸಲೂ ಅವಕಾಶ ನೀಡಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-51-1147487702

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.