ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿ ರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿ’ ಯಲ್ಲಿ ‘ಸೂಪರ್ ಓವರ್’ ನೋಡುವ ಅಪರೂಪದ ಅವಕಾಶ ಪ್ರೇಕ್ಷಕರಿಗೆ ಲಭ್ಯವಾಯಿತು.

ಮಿನ್ನಂಡ ಮತ್ತು ಚೌರಿರ ತಂಡಗಳ ನಡುವಿನ ಪಂದ್ಯದಲ್ಲಿ ಉಭಯ ತಂಡಗಳೂ ತಲಾ 50 ರನ್ಗಳಿಸಿ ಸಮಬಲ ಸಾಧಿಸಿವು. ಅಂತಿಮವಾಗಿ, ‘ಸೂಪರ್ ಓವರ್’ನಲ್ಲಿ ಚೌರಿರ 1 ಓವರ್ನಲ್ಲಿ 1 ವಿಕೆಟ್ ನಷ್ಟಕ್ಕೆ 20 ರನ್ಗಳನ್ನು ಗಳಿಸಿ ಗುರಿ ನೀಡಿತು. ಇದಕ್ಕೆ ಪ್ರತಿಯಾಗಿ ಮಿಣ್ಣಂಡ 1 ವಿಕೆಟ್ ನಷ್ಟಕ್ಕೆ 18 ರನ್ಗಳನ್ನಷ್ಟೇ ಗಳಿಸಿತು. ಅಂತಿಮವಾಗಿ, 2 ರನ್ಗಳ ರೋಚಕ ಗೆಲುವು ಚೌರಿರ ತಂಡಕ್ಕೆ ಒಲಿಯಿತು.

ಅಣ್ಣಳಮಾಡ (ಪೂಕಳ) ತಂಡವು ಪಳಂಗಂಡ ತಂಡ ನೀಡಿದ 60 ರನ್ಗಳ ಗುರಿಯನ್ನು ಕೇವಲ 3.1 ಓವರ್ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ ತಲುಪಿದ್ದು ವಿಶೇಷ ಎನಿಸಿತ್ತು. ಇದರಿಂದ 10 ವಿಕೆಟ್ಗಳ ಜಯ ಪಡೆದ ಅಣ್ಣಳಮಾಡ (ಪೂಕಳ) ತಂಡ ಮೆಚ್ಚುಗೆಗೆ ಪಾತ್ರವಾಯಿತು.

ಆತಿಥೇಯ ಮುಕ್ಕಾಟಿರ (ಬೇತ್ರಿ) ತಂಡವು ತೆನ್ನಿರ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತೆನ್ನಿರ 6 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 54 ರನ್ ಗಳನ್ನು ಗಳಿಸಿತು. ಮುಕ್ಕಾಟಿರ ಯಾವುದೇ ವಿಕೆಟ್ ನಷ್ಟವಿಲ್ಲದೆ 4.4 ಓವರ್ ಗಳಲ್ಲಿ 55 ರನ್ ಗಳನ್ನು ಸೇರಿಸಿ ಗೆಲುವಿನ ನಗೆ ಬೀರಿತು. ಮೂಕಳೇರ ಕೇವಲ 6 ಓವರ್ನಲ್ಲಿ 105 ರನ್ಗಳಿಸಿತು. ಎದುರಾಳಿ ತಂಡ ಅರೆಯಡ 75 ರನ್ಗಳನ್ನಷ್ಟೇ ಗಳಿಸಿತು. ಅಂತಿಮವಾಗಿ 30 ರನ್ಗಳ ಗೆಲವು ಮೂಕಳೇರ ತಂಡಕ್ಕೆ ಒಲಿಯಿತು. ಮುಂಡಚಾಡಿರ ತಂಡವು ಅಜ್ಜಮಕ್ಕಡ ವಿರುದ್ಧ 10 ವಿಕೆಟ್ಗಳಿಂದ; ಉಡುವೆರ ತಂಡವು ಮೇಪಾಡಂಡ ವಿರುದ್ಧ 7 ವಿಕೆಟ್ಗಳಿಂದ; ಮಂಡೇಪಂಡ ತಂಡವು ಪಾಸುರ ವಿರುದ್ಧ 8 ವಿಕೆಟ್ಗಳಿಂದ; ಅಪ್ಪುಮಣಿಯಂಡ ತಂಡವು ಬಲ್ಲಂಡ ವಿರುದ್ಧ 7 ವಿಕೆಟ್ಗಳಿಂದ; ಕಂಗಂಡ ತಂಡ ಚೆನಿಯಪಂಡ ವಿರುದ್ಧ 19 ರನ್ಗಳಿಂದ; ಕಾನತಂಡ ಮುಕ್ಕಾಟಿರ (ಪುಲಿಕೋಟ್) ವಿರುದ್ಧ 6 ರನ್ಗಳಿಂದ; ಮಂಡುವಂಡ ತಂಡವು ಮುಕ್ಕಾಟಿರ (ಅರಪಟ್ಟು) ವಿರುದ್ಧ 54 ರನ್ಗಳಿಂದ; ಸಿದ್ದಂಡ ತಂಡವು ಪೊರುಕೊಂಡ ವಿರುದ್ಧ 6 ವಿಕೆಟ್ಗಳಿಂದ ಗೆಲುವು ಸಾಧಿಸಿದವು. ಬಾರಿಯಂಡ ಮತ್ತು ಕಳಕಂಡ ತಂಡಗಳು ವಾಕ್ ಓವರ್ ಪಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-51-2096579793

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.