ನಾಪೋಕ್ಲು: ಸಮೀಪದ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ನಾಡ್ ಕಪ್ ಅಂತರ ಗ್ರಾಮ ಹಾಕಿ ಟೂರ್ನಿಯ ಸೋಮವಾರದ ಪಂದ್ಯಗಳಲ್ಲಿ, ಯವಕಪಾಡಿ, ಬಲ್ಲಮಾವಟಿ ಯೆಲ್ಲೊ, ನಾಪೋಕ್ಲು-ಎ, ನೆಲಜಿ ತಂಡಗಳು ಮುನ್ನಡೆ ಸಾಧಿಸಿದವು.

ಸೋಮವಾರ ಕೊಳಕೇರಿ ಮತ್ತು ಯವಕಪಾಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಯವಕಪಾಡಿ ತಂಡ 4 -2 ಅಂತರದಿಂದ ಜಯ ಸಾಧಿಸಿತು. ಯವಕಪಾಡಿ ತಂಡದ ಪರವಾಗಿ ಆಟಗಾರರಾದ ರೋಷನ್ ಮತ್ತು ಬೋಪಣ್ಣ ತಲಾ ಎರಡು ಗೋಲು ಗಳಿಸಿದರು. ಕೊಳಕೇರಿ ತಂಡದ ಗಿಮಿನ್ ಮತ್ತು ತಿಮ್ಮಯ್ಯ ತಲಾ ಒಂದು ಗೋಲು ಗಳಿಸಿದರು.

ಎರಡನೇ ಪಂದ್ಯ ಬಲಮಾವಟಿ ಯೆಲ್ಲೊ ಮತ್ತು ಮರಂದೋಡ ತಂಡಗಳ ನಡುವೆ ನಡೆಯಿತು. ಬಲ್ಲಮಾವಟಿ ಯೆಲ್ಲೊ ತಂಡ 3- 2 ಅಂತರದಿಂದ ಜಯ ಸಾಧಿಸಿತು. ಬಲ್ಲಮಾವಟಿ ತಂಡದ ಪರವಾಗಿ ಅಪ್ಪಚೆಟ್ಟೋಳಂಡ ಅಯ್ಯಪ್ಪ ಕುಶಾಲ್ ಗೋಲ್ ಗಳಿಸಿದರು. ಮರಂದೋಡ ತಂಡದ ಪರವಾಗಿ ಆಟಗಾರರಾದ ರಾಯಲ್ ಅಯ್ಯಣ್ಣ, ಆಕಾಶ್ ಬಿದ್ದಪ್ಪ ತಲಾ ಒಂದು ಗೋಲು ಬಾರಿಸಿದರು.

ಕುಂಜಿಲ ತಂಡ ಸ್ಪರ್ಧೆಯಲ್ಲಿ ಪಾಲ್ಗೊಳ್ಳದ ಕಾರಣ ಬಲ್ಲಮಾವಟಿ ವೈಟ್ ತಂಡ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿತು. ಪೇರೂರು ಮತ್ತು ನಾಪೋಕ್ಲು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪೋಕ್ಲುತಂಡ 2-1 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.

ಪೇರೂರು ತಂಡದ ಪರವಾಗಿ ಸೋಮಣ್ಣ ಒಂದು ಗೋಲು ಗಳಿಸಿದರು. ನಾಪೋಕ್ಲು ತಂಡದ ಪರವಾಗಿ ಆಕಾಶ್ ಮತ್ತುಪುನೀತ್ ತಲಾ ಒಂದು ಗೋಲು ಗಳಿಸಿದರು.

ಬೇತು ತಂಡದ ವಿರುದ್ದ ನೆಲಜಿ ತಂಡ ಜಯಗಳಿಸಿತು. ಬೇತು ತಂಡದ ಪರವಾಗಿ ಜತಿನ್ ಮತ್ತು ಲಿನಿತ್ ತಲಾ ಒಂದು ಗೋಲು ಗಳಿಸಿದರು. ನೆಲಜಿ ತಂಡದ ಪರವಾಗಿ ಕೌಶಿಕ್ 2 ಹಾಗೂ ಡಿವಿನ್ 1 ಗೋಲು ಬಾರಿಸಿದರು.

ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್, ಟೂರ್ನಿ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕ್ಲಬ್ ಉಪಾಧ್ಯಕ್ಷ ಕೈಬುಲಿರ ಉಮೇಶ್ ಉತ್ತಪ್ಪ, ಕಾರ್ಯದರ್ಶಿ ಚಂಗೇಟಿರ ಕುಮಾರ್ ಸೋಮಣ್ಣ, ಖಜಾಂಜಿ ಚೀಯಂಡಿ ದಿನೇಶ್, ಸಹಕಾರ್ಯದರ್ಶಿ ಮಚ್ಚುರ ಯದುಕುಮಾರ್, ಹೊಸೊಕ್ಲು ಮಾಚಯ್ಯ ಪಾಲ್ಗೊಂಡಿದ್ದರು. ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟಿರ ವಿಕ್ರಂ, ಕರವಂಡ ಸೀಮಾ ಗಣಪತಿ ಕಾರ್ಯ ನಿರ್ವಹಿಸಿದರು.

ಅಂತರ ಗ್ರಾಮ ಮಹಿಳಾ ತಂಡಗಳ ನಡುವೆ ಹಗ್ಗಜಗ್ಗಾಟ ಸ್ಪರ್ಧೆಯು ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-51-1561872062

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.