ನಾಪೋಕ್ಲು: ಸಮೀಪದ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ನಾಡ್ ಅಂತರ ಗ್ರಾಮ ಹಾಕಿ ಟೂರ್ನಿಯ ಭಾನುವಾರದ ಪಂದ್ಯಗಳಲ್ಲಿ ನಾಪೋಕ್ಲು ಬ್ಲೂ, ಯವಕಪಾಡಿ ಮರಂದೋಡ ಹಾಗೂ ಕುಂಜಿಲ ತಂಡಗಳು ಮುನ್ನಡೆ ಸಾಧಿಸಿದವು.

ಮರಂದೊಡ ಮತ್ತು ನಾಲಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮರಂದೊಡ ತಂಡವು ನಾಲಡಿ ತಂಡದ ವಿರುದ್ಧ 2-0 ಅಂತರದ ಜಯ ಸಾಧಿಸಿತು. ತಂಡದ ಪರವಾಗಿ ಆಟಗಾರರಾದ ಬಿದ್ದಪ್ಪ ಮತ್ತು ಚಿನ್ನಪ್ಪ ತಲಾ ಒಂದು ಗೋಲು ಗಳಿಸಿದರು.

ಪೇರೂರು ಮತ್ತು ಕುಂಜಿಲ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಂಜಿಲ ತಂಡವು 4-0 ಅಂತರದಿಂದ ಪೇರೂರು ತಂಡದ ವಿರುದ್ಧ ಜಯ ಸಾಧಿಸಿತು. ಕುಂಜಿಲ ತಂಡದ ಆಟಗಾರರಾದ ನಾಚಪ್ಪ ಕಾರ್ಯಪ್ಪ ಕಿರಣ್ ಮತ್ತು ಡಿವಿನ್ ತಲಾ ಒಂದು ಗೋಲು ಗಳಿಸಿದರು.

ಬಲ್ಲಮಾವಟಿ ವೈಟ್ ಮತ್ತು ನಾಪೋಕ್ಲು ಎ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪೋಕ್ಲು ಎ ತಂಡ ಭರ್ಜರಿ ಏಳು ಗೋಲುಗಳ ಜಯ ಸಾಧಿಸಿತು. ಕಳೆದ ವರ್ಷದ ಚಾಂಪಿಯನ್ ಬಲ್ಲಮಾವಟಿ ವೈಟ್ ತಂಡ ಯಾವುದೇ ಗೋಲು ಗಳಿಸಲು ಶಕ್ತವಾಗಲಿಲ್ಲ.

ಬೇತು ಮತ್ತು ನಾಪೋಕ್ಲು ಬ್ಲೂ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪೋಕ್ಲು ಬ್ಲೂ ತಂಡವು ಬೇತು ತಂಡದ ವಿರುದ್ಧ 3 -2 ಅಂತರದಿಂದ ಗೆಲುವು ಸಾಧಿಸಿತು. ದೊಡ್ಡ ಪುಲಿಕೋಟು ಮತ್ತು ಯವಕಪಾಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಯವಕಪಾಡಿ ತಂಡವು ದೊಡ್ಡಪುಲಿಕೋಟು ತಂಡದ ವಿರುದ್ಧ 3- 1 ಅಂತರದಿಂದ ಜಯ ಸಾಧಿಸಿ ಮುನ್ನಡೆ ಗಳಿಸಿತು.

ಪಂದ್ಯ ಉದ್ಘಾಟಿಸಿದ ಪ್ರಾಯೋಜಕ ಎಡಿಕೇರಿ ಪ್ರಸನ್ನ ಮಾತನಾಡಿ, ‘ಕೊಡಗಿನಲ್ಲಿ ಹಾಕಿ ಕ್ರೀಡೆ ಪ್ರಸಿದ್ಧಿ ಪಡೆದಿದೆ. ಈ ಕ್ರೀಡೆಯು ಎಲ್ಲಾ ಸಮಾಜ ಬಾಂಧವರನ್ನು ಒಗ್ಗೂಡಿಸುತ್ತದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಾಕಿ ಕ್ರೀಡೆ ನಡೆಯುತ್ತಿದ್ದರೂ, ಬಲ್ಲಮಾವಟಿಯಲ್ಲಿ ಹತ್ತು ಗ್ರಾಮಗಳ ಕ್ರೀಡಾಪಟುಗಳನ್ನು ಒಗ್ಗೂಡಿಸಿ ಕ್ರೀಡೆ ಆಯೋಜಿಸಲಾಗುತ್ತಿದೆ. ಈ ಕ್ರೀಡಾಕೂಟ ಜನಾಂಗ ಬಾಂಧವರು ಒಗ್ಗೂಡಿಸಲು ಸಹಕಾರಿ’ ಎಂದರು.

ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್, ಪಂದ್ಯಾವಳಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕ್ಲಬ್ ಉಪಾಧ್ಯಕ್ಷ ಕೈಬುಲಿರ ಉಮೇಶ್ ಉತ್ತಪ್ಪ, ಕಾರ್ಯದರ್ಶಿ ಚಂಗೇಟಿರ ಕುಮಾರ್ ಸೋಮಣ್ಣ, ಖಜಾಂಜಿ ಚೀಯಂಡಿ ದಿನೇಶ್, ಸಹಕಾರ್ಯದರ್ಶಿ ಮಚ್ಚುರ ಯದುಕುಮಾರ್, ಹೊಸೊಕ್ಲು ಮಾಚಯ್ಯ iದ್ದರು.

ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟಿರ ವಿಕ್ರಂ, ಕರವಂಡ ಸೀಮಾ ಗಣಪತಿ ಕಾರ್ಯ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-51-74220293

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.