ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಇದುವರೆಗೂ 25 ಬಾರಿ ನಡೆದಿದೆ. ಇದರಲ್ಲಿ 5 ಉತ್ಸವಗಳು ನಾಪೋಕ್ಲುವೊಂದರಲ್ಲೇ ನಡೆದಿದ್ದು, ಅದರಲ್ಲಿಯೂ 4 ಉತ್ಸವಗಳು ಸತತವಾಗಿ ಇದೇ ಪಟ್ಟಣದಲ್ಲಿ ಜರುಗಿದ್ದು ವಿಶೇಷ. ಇದೀಗ ಪಟ್ಟಣ 6ನೇ ಉತ್ಸವಕ್ಕೆ ಸಜ್ಜಾಗಿದೆ.

1997ರಲ್ಲಿ ಕರಡದಲ್ಲಿ ಈ ಉತ್ಸವ ಮೊದಲ ಬಾರಿಗೆ ಆರಂಭಗೊಂಡಿತಾದರೂ 2003ರವರೆಗೂ ನಾಪೋಕ್ಲುವಿನಲ್ಲಿ ಈ ಉತ್ಸವ ಆಯೋಜನೆಗೊಳ್ಳಲೇ ಇಲ್ಲ. ಕರಡ, ಕಡಂಗ, ಕಾಕೋಟುಪರಂಬು, ಪೊನ್ನಂಪೇಟೆ, ಅಮ್ಮತ್ತಿ ಹಾಗೂ ಹುದಿಕೇರಿಯ ನಂತರ ಅಂದರೆ 6 ವರ್ಷಗಳ ತರುವಾಯ ನಾಪೋಕ್ಲುವಿನಲ್ಲಿ ಆಯೋಜನೆಗೊಂಡಿತು.

ಮೊದಲ ಬಾರಿಗೆ 2003ರಲ್ಲಿ ನಾಪೋಕ್ಲುವಿನಲ್ಲಿ ಆಯೋಜನೆಯಾದ 7ನೇ ಕೊಡವ ಕೌಟುಂಬಿಕ ಹಾಕಿ ಉತ್ಸವವು ಇಡೀ ಉತ್ಸವಕ್ಕೆ ಹೊಸ ಮೆರುಗು ತಂದಿತು. ಕಲಿಯಂಡ ಕುಟುಂಬದವರು ಈ ಟೂರ್ನಿಯನ್ನು ಅಚ್ಚುಕಟ್ಟಾಗಿ ನಡೆಸಿದ್ದರು. ಆಗ 281 ತಂಡಗಳು ಗೆಲುವಿಗಾಗಿ ಸೆಣಸಾಟ ನಡೆಸಿದ್ದವು. ಅಂತಿಮವಾಗಿ ನೆಲ್ಲಮಕ್ಕಡ ತಂಡ ವಿಜಯಿಯಾಗಿ ಹೊರಹೊಮ್ಮಿತು.

ಆದರೆ, ಆನಂತರ ಮತ್ತೆ ನಾಪೋಕ್ಲು ಪಟ್ಟಣದಲ್ಲಿ ಹಾಕಿ ಉತ್ಸವ ಆಯೋಜನೆಗೊಳ್ಳಬೇಕಾದರೆ 2017ರವರೆಗೂ ಕಾಯಬೇಕಾಯಿತು. ಕೊಡವ ಕೌಟುಂಬಿಕ ಹಾಕಿಯ 21ನೇ ಆವೃತ್ತಿಯನ್ನು ಬಿದ್ದಾಟಂಡ ಕುಟುಂಬದವರು ನಾಪೋಕ್ಲುವಿನಲ್ಲಿ ಆಯೋಜಿಸಿದ್ದ ಹಾಕಿ ಉತ್ಸವದಲ್ಲಿ 306 ತಂಡಗಳು ಭಾಗವಹಿಸಿದ್ದವು. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ 300ಕ್ಕೂ ಅಧಿಕ ತಂಡಗಳು ಭಾಗಿಯಾದ ಉತ್ಸವ ಇದು ಎಂಬ ಹೆಗ್ಗಳಿಕೆಗೂ ಈ ಉತ್ಸವ ಪಾತ್ರವಾಯಿತು. ಚೇದಂಡ ತಂಡ ಪ್ರಶಸ್ತಿ ಜಯಿಸಿತ್ತು.

ಆನಂತರ, ಸತತ 3 ಬಾರಿ ಪಂದ್ಯಾವಳಿ ಆಯೋಜನೆಗೊಂಡಿದ್ದು ಇದೇ ನಾಪೋಕ್ಲು ಪಟ್ಟಣದಲ್ಲಿ. ಈ ಮೂಲಕ ಸತತ 4 ಬಾರಿ ಒಂದೇ ಪಟ್ಟಣದಲ್ಲಿ ಹಾಕಿ ಉತ್ಸವ ನಡೆದ ದಾಖಲೆಯನ್ನೂ ನಾಪೋಕ್ಲು ಪಟ್ಟಣ ಪಡೆದಿರುವುದು ವಿಶೇಷ.

2017ರಲ್ಲಿ ಬಿದ್ದಾಟಂಡ, 2018ರಲ್ಲಿ ಕುಲ್ಲೇಟಿರ, 2023ರಲ್ಲಿ ಅಪ್ಪಚೆಟ್ಟೋಳಂಡ ಹಾಗೂ 2024ರಲ್ಲಿ ಕುಂಡ್ಯೋಳಂಡ ತಂಡದವರು ಉತ್ಸವವನ್ನು ನಾಪೋಕ್ಲು ಪಟ್ಟಣದಲ್ಲೇ ಆಯೋಜಿಸಿದ್ದರು.

ಇದಕ್ಕೂ ಮುನ್ನ ಪೊನ್ನಂಪೇಟೆ ಪಟ್ಟಣದಲ್ಲಿ ಇದುವರೆಗೂ 5 ಬಾರಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಆಯೋಜನೆಗೊಂಡಿರುವುದು ದಾಖಲೆ ಎನಿಸಿತ್ತು. ಇಲ್ಲಿ ಚೆಪ್ಪುಡಿರ (2000), ಕಳ್ಳಿಚಂಡ (2006), ಅಳಮೇಂಗಡ (2008), ಮನೆಯಪಂಡ (2010) ಮತ್ತು ಮಚ್ಚಮಡ (2011) ಕುಟುಂಬಗಳು ಸಂಘಟಿಸಿದ್ದವು. ಈ ದಾಖಲೆಯನ್ನು ನಾಪೋಕ್ಲು 2024ರಲ್ಲೇ ಸರಿಗಟ್ಟಿತ್ತು. ಇದೀಗ 6ನೇ ಉತ್ಸವ ಆಯೋಜನೆಗೊಳ್ಳುವ ಮೂಲಕ ಇದುವರೆಗೂ ಅತಿ ಹೆಚ್ಚು ಬಾರಿ ಹಾಕಿ ಉತ್ಸವ ನಡೆದ ಪಟ್ಟಣ ಎಂಬ ಹೆಗ್ಗಳಿಕೆಗೂ ನಾಪೋಕ್ಲು ಪಾತ್ರವಾಗಲಿದೆ.

ವಿಶೇಷ ಎಂದರೆ, ನಾಪೋಕ್ಲುವಿನಲ್ಲಿ ನಡೆದ 5 ಉತ್ಸವಗಳ ಪೈಕಿ ಒಂದು ಉತ್ಸವ ಬಿಟ್ಟರೆ ಉಳಿದ 4 ಉತ್ಸವಗಳಲ್ಲೂ 300ಕ್ಕೂ ಅಧಿಕ ತಂಡಗಳು ಭಾಗವಹಿಸಿವೆ.

ಈ ಪೈಕಿ 360 ಕುಟುಂಬಗಳ 3 ಸಾವಿರಕ್ಕೂ ಅಧಿಕ ಹಾಕಿ ಆಟಗಾರರು ಪಾಲ್ಗೊಳ್ಳುವ ಮೂಲಕ ದಾಖಲೆ ಮಾಡಿದ ಕುಂಡ್ಯೋಳಂಡ ಹಾಕಿ ಟೂರ್ನಿ 2024 ರಲ್ಲಿ ಅಧಿಕೃತವಾಗಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿತ್ತು. ಈ ಟೂರ್ನಿಗೂ ವೇದಿಕೆಯಗಿದ್ದು ಇದೇ ನಾಪೋಕ್ಲು.

ನಾಲ್ಕುನಾಡಿನ ಕಲಿಯಂಡ ತಂಡ ಕೊಡವ ಹಾಕಿ ಉತ್ಸವದ ಮೊದಲ ಚಾಂಪಿಯನ್ ರಾದ ಗೌರವಕ್ಕೆ ಪಾತ್ರವಾಗಿದೆ. ಕಲಿಯಂಡ ಹಾಗೂ ಕುಲ್ಲೇಟಿರ ತಂಡಗಳು ತಲಾ ಮೂರು ಬಾರಿ ಚಾಂಪಿಯನ್ ಆಗುವುದರೊಂದಿಗೆ ನಾಲ್ಕುನಾಡು ಹಾಕಿಕ್ರೀಡೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ನಾಪೋಕ್ಲು ಅತಿದೊಡ್ಡ ಹೋಬಳಿಯಾಗಿದ್ದು 28 ಗ್ರಾಮಗಳನ್ನು ಹೊಂದಿದೆ. ಕ್ರೀಡಾಕೂಟ ನಡೆಸಲು ಉತ್ತಮ ಕ್ರೀಡಾಂಗಣಗಳಿದ್ದು ಕ್ರೀಡಾಪ್ರೇಮಿಗಳನ್ನು ಒಗ್ಗೂಡಿಸಲು ಸೂಕ್ತ ತಾಣವೂ ಆಗಿರುವುದರಿಂದ ಕ್ರೀಡಾಕೂಟಗಳಿಗೆ ಉತ್ತಮವೇದಿಕೆಯನ್ನು ಒದಗಿಸುತ್ತಿದೆ. ಚೆರಿಯಪರಂಬುವಿನ 3 ಕ್ರೀಡಾಂಗಣಗಳು ಕ್ರೀಡಾಪ್ರೇಮಿಗಳಿಗೆ ಭರಪೂರ ಮನೋರಂಜನೆಯನ್ನೂ ನೀಡುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-51-25008769

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.