ಗೋಣಿಕೊಪ್ಪಲು: ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮೈದಾನದಲ್ಲಿ 3 ದಿನಗಳವರೆಗೆ ನಡೆದ ಒಕ್ಕಲಿಗರ ಮಿಲನ, ಒಕ್ಕಲಿಗರ ಕ್ರೀಡಾಕೂಟದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕಿನ ಒಕ್ಕಲಿಗ ಬಾಂಧವರು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಕ್ರಿಕೆಟ್ನಲ್ಲಿ ಕೋಟೆಕೊಪ್ಪ ಚಾಂಪಿಯನ್: ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಕೋಟೆಕೊಪ್ಪ ವಾರಿಯರ್ಸ್ ಮತ್ತು ಕಣ್ಣಂಗಾಲ ಎ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಣ್ಣಂಗಾಲ ಎ ತಂಡ ನಿಗದಿತ 4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 54 ರನ್ ಕಲೆಹಾಕಿತು.

ಗೆಲ್ಲಲು 55 ರನ್ ಗಳ ಗುರಿ ಬೆನ್ನಟ್ಟಿದ ಕೋಟೆಕೊಪ್ಪ ತಂಡ, 3.5 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.

ಗೆಲುವಿಗಾಗಿ ಅಂತಿಮ ಕ್ಷಣದವರೆಗೂ ಹೋರಾಟ ನೀಡಿದ ಕಣ್ಣಂಗಾಲ ಎ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ವಿನಾಯಕ ಸ್ಟ್ರೈಕರ್ಸ್ ಮೂರನೇ ಸ್ಥಾನ ಪಡೆದುಕೊಂಡಿತು. ಮಕ್ಕಳ ಕ್ರಿಕೆಟ್ ಪಂದ್ಯದಲ್ಲಿ ಹಾತೂರು ತಂಡ ಕೋಟೆಕೊಪ್ಪ ತಂಡದ ವಿರುದ್ಧ ಜಯಗಳಿಸಿ ವಿನ್ನರ್ಸ್ ಟ್ರೋಫಿ ಪಡೆದುಕೊಂಡರೆ, ಕೋಟೆಕೊಪ್ಪ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ವೈಯಕ್ತಿಕ ಪ್ರಶಸ್ತಿ: ಮ್ಯಾನ್ ಆಫ್ ದಿ ಸೀರೀಸ್ ಆಗಿ ಕಣ್ಣಂಗಾಲ ತಂಡದ ಪ್ರಮೋದ್ ಗೌಡ, ಬೆಸ್ಟ್ ಬ್ಯಾಟ್ಸ್ಮನ್ ಆಗಿ ಕೋಟೆಕೊಪ್ಪ ತಂಡದ ಶಭರೀಶ್ ಪಿಂಕು, ಬೆಸ್ಟ್ ಬೌಲರ್ ಆಗಿ ಕೈಕೇರಿ ತಂಡದ ಚೇತನ್ ಗೌಡ, ಬೆಸ್ಟ್ ಫೀಲ್ಡರ್ ಭರತ್ ಕೋಟೆಕೊಪ್ಪ, ಬೆಸ್ಟ್ ವಿಕೆಟ್ ಕೀಪರ್ ಭವಿನ್ ಹಾತೂರು, ಬೆಸ್ಟ್ ಕ್ಯಾಚ್ ಸುದೀಪ್ ಹಾತೂರು, ಬೆಸ್ಟ್ ಆಲ್ ರೌಂಡರ್ ಆಗಿ ವಿನಾಯಕ ಸ್ಟ್ರೈಕರ್ಸ್ನ ಪ್ರಶಾಂತ್, ಎಮರ್ಜಿಂಗ್ ಪ್ಲೇಯರ್ ಆಗಿ ಹಾತೂರು ತಂಡದ ಪ್ರಥಮ್, ಬೆಸ್ಟ್ ಟೀಮ್ ಪ್ರಶಸ್ತಿಯನ್ನು ಬಾಳೆಲೆ ನಮೋ ಕ್ರಿಕೆಟರ್ಸ್ ತಂಡ ಪಡೆದುಕೊಂಡಿತು.

ತೀರ್ಪುಗಾರರಾಗಿ ದೈಹಿಕ ಶಿಕ್ಷಕ ಮಹೇಶ್, ಹರೀಶ್ ಮಸ್ಕಲ್, ಶ್ಯಾಮ್, ದರ್ಶನ್ ವಿರಾಜಪೇಟೆ ಕಾರ್ಯನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-2114976003

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.