ಗೋಣಿಕೊಪ್ಪಲು: ಒಕ್ಕಲಿಗರು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.

ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ಆಯೋಜಿಸಿರುವ ‘ಒಕ್ಕಲಿಗರ ಮಿಲನ’ ಒಕ್ಕಲಿಗರ ಕ್ರೀಡಾಕೂಟದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು. ಕೊಡಗು ಪುಟ್ಟ ಜಿಲ್ಲೆಯಾದರೂ ಕ್ರೀಡಾ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದೆ. ಒಕ್ಕಲಿಗರು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ ಎಂದರು.

ಕ್ರೀಡೆಯು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಡುವುದರ ಜೊತೆಗೆ ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸಿ ಯಶಸ್ಸು ಸಾಧಿಸುವ ಕಲೆಯನ್ನು ಕಲಿಸುತ್ತದೆ. ಸಂಬಂಧ ಬೆಸೆದು ಒಗ್ಗಟ್ಟು ಮೂಡಿಸಲು ಕ್ರೀಡೆ ಸಹಕಾರಿಯಾಗಿದ್ದು, ಯಾವುದೇ ಒಂದು ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದರು.

ನಂತರ ಶಾಸಕ ಪೊನ್ನಣ್ಣ ಅವರು ವಕೀಲರಾದ ರಾಕೇಶ್ ಅವರ ಬೌಲಿಂಗ್ನಲ್ಲಿ ಬ್ಯಾಟ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ದಕ್ಷಿಣ ಕೊಡಗು ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಮಧುಸೂದನ್ ಅವರ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಾದ ವಿ.ಈ. ಭದ್ರಯ್ಯ, ಸಮಾಜ ಸೇವಕ ಗೋಪಾಲ್. ವಿ.ಟಿ.ಭವಾನಿ ಪರಮೇಶ್ವರ, ಜಿ.ಕೆ.ಜಯಲಕ್ಷ್ಮಿ ಗಣೇಶ್, ವಿ.ಎಸ್.ಪ್ರಶಾಂತ್, ಹಂಚಿಮನೆ ಸುಜಾತ ಮಹೇಶ್, ವಿ.ಬಿ.ವಿಠಲ, ವಿ.ಎನ್.ಮಹೇಶ್, ವಿ.ಈ.ರಮೇಶ್, ಸುಚಿತ್ರ ಸುರೇಂದ್ರ, ವಿ.ಆರ್.ಕೃಷ್ಣ, ವಿ.ವಿ. ಡಾಲು, ವಿ.ಟಿ.ವೆಂಕಟೇಶ್, ವೇದಿಕೆಯ ಉಪಾಧ್ಯಕ್ಷ ಅಜಿತ್, ಕಾರ್ಯದರ್ಶಿ ಲವ, ಗೌರವ ಅಧ್ಯಕ್ಷ ಡಾಲು, ಖಜಾಂಚಿ ಕಿರಣ್, ಕ್ರೀಡಾ ಸಂಚಾಲಕರಾದ ನಿಖಿಲ್, ಜಗದೀಶ್, ಸಹ ಕಾರ್ಯದರ್ಶಿ ಮನು, ಚಂದನಾ ಮಂಜುನಾಥ್, ದೀಪು ಹಾಜರಿದ್ದರು.

ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬೈಗೋಡ್ ಜಂಕ್ಷನ್ನಿಂದ ಮೈದಾನದವರೆಗೆ ಸಾಂಪ್ರದಾಯಿಕ ಉಡುಪುತೊಟ್ಟು ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ನಡೆಸಲಾಯಿತು. ಮಹಿಳೆಯರು ಕಳಸದೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-206264856

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.