ನಾಪೋಕ್ಲು: ಕೊಡಗು ಮುಸ್ಲಿಂ ಕಲ್ಚರಲ್ ಅಸೋಶಿಯೇಷನ್ ಮತ್ತು ಬುಲೆಟ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾಗಿದ್ದ 17ನೇ ವರ್ಷದ ಕೊಡಗು ಮುಸ್ಲಿಂ ವಾಲಿಬಾಲ್ ಕಪ್ ಚಾಂಪಿಯನ್ ಪಟ್ಟವನ್ನು ಡೆಕ್ಕನ್ ನಾಪೋಕ್ಲು ಮತ್ತು ರನ್ನರ್ ಪ್ರಶಸ್ತಿಯನ್ನು ಸಿವೈಸಿ ಚಿಟ್ಟಡೆ ಮುಡಿಗೇರಿಸಿಕೊಂಡವು.

ಮೂರ್ನಾಡು ಸಮೀಪದ ಕೊಂಡಂಗೇರಿ ಶಾಲಾ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಜಿಲ್ಲೆಯ 40 ತಂಡಗಳು ಪಾಲ್ಗೊಂಡಿದ್ದವು. ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಕೊಂಡಗೇರಿ ಬುಲ್ಲೆಟ್ ತಂಡವನ್ನು ಮಣಿಸಿ ಸಿವೈಸಿ ಚಿಟ್ಟಡೆ ತಂಡ ಫೈನಲ್ಗೆ ಲಗ್ಗೆ ಇಟ್ಟಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಕೊಟ್ಟಮುಡಿ ತಂಡವನ್ನು ಮಣಿಸಿ ಡೆಕ್ಕನ್ ನಾಪೋಕ್ಲು ತಂಡ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ಡೆಕ್ಕನ್ ನಾಪೋಕ್ಲು ತಂಡವು ಸಿವೈಸಿ ಚಿಟ್ಟಡೆ ತಂಡವನ್ನು ಮಣಿಸಿ 17ನೇ ವರ್ಷದ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

3ನೇ ಸ್ಥಾನವನ್ನು ಝೆಡ್ ವೈ ಸಿ ಮತ್ತು ನಾಲ್ಕನೇ ಸ್ಥಾನವನ್ನು ಬುಲೆಟ್ ಫ್ರೆಂಡ್ಸ್ ಪಡೆದುಕೊಂಡರು. ಕ್ರೀಡಾಕೂಟದಲ್ಲಿ ಉತ್ತಮ ಪಾಸರ್ ಪ್ರಶಸ್ತಿಯನ್ನು ಆದು ನಾಪೋಕ್ಲು, ಲಿಬ್ರೋ ಪ್ರಶಸ್ತಿಯನ್ನು ಇರ್ಷಾ ಕೊಟ್ಟಮುಡಿ, ಎಮರ್ಜಿಂಗ್ ಪ್ರಶಸ್ತಿಯನ್ನು ರಾಶಿ ಚಿಟ್ಟಡೆ, ಅಲ್ ರೌಂಡರ್ ಪ್ರಶಸ್ತಿಯನ್ನು ಅಪ್ಪಿ ನಾಪೋಕ್ಲು, ಬೆಸ್ಟ್ ಆಟಕರ್ ಪ್ರಶಸ್ತಿ ಫಾಝಿ ನಾಪೋಕ್ಲು ತನ್ನದಾಗಿಸಿಕೊಂಡರು.

ಕ್ರೀಡಾಕೂಟದಲ್ಲಿ ಆಯೋಜಕರನ್ನು ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಶಿಯೇಷನ್ ವತಿಯಿಂದ ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ನಾಪೋಕ್ಲು , ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಹನೀಫ್ ಪಿ.ಏ, ರಫೀಕ್ ಕೊಳಮಂಡ, ಮನ್ಸೂರ್ ಅಲಿ, ಖಲೀಲ್ ಕ್ರಿಯೇಟಿವ್, ಶಮೀರ್ ಕಡಂಗ, ಕರೀಂ ಲಿಂರಾ, ಆಪು ಕೊಂಡಗೇರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-51-2109329619

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.