ಮಡಿಕೇರಿ: ಕೊಡವ ಕುಟುಂಬಗಳ ನಡುವಿನ 24ನೇ ವರ್ಷದ ಕೌಟುಂಬಿಕ ಕ್ರಿಕೆಟ್ ಉತ್ಸವ ‘ಮುಕ್ಕಾಟಿರ ಕಪ್ ಕ್ರಿಕೆಟ್–2026’ ಈ ಬಾರಿ ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಆಯೋಜನೆ ಮಾಡುತ್ತಿದ್ದು, ಏಪ್ರಿಲ್ 3ರಿಂದ ಮೂರ್ನಾಡು ಗ್ರಾಮದ ಮೂರು ಮೈದಾನಗಳಲ್ಲಿ ನಡೆಯಲಿದೆ.

ಇದಕ್ಕಾಗಿ ಇಲ್ಲಿಯರೆಗಿನ ದಾಖಲೆ ಎನಿಸುವ 289 ತಂಡಗಳು ನೋಂದಣಿಯಾಗಿವೆ ಎಂದು ಕ್ರಿಕೆಟ್ ಉತ್ಸವ ಸಮಿತಿ ವಕ್ತಾರ ರವಿ ಚೀಯಣ್ಣ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಿಳೆಯರ ಕ್ರಿಕೆಟ್ಗಾಗಿ 44 ತಂಡಗಳು ನೋಂದಣಿಯಾಗಿದ್ದು, ಏಪ್ರಿಲ್ 15ರಿಂದ ಪಂದ್ಯಾವಳಿ ಆರಂಭವಾಗಲಿವೆ. ಇನ್ನೂ ಮಹಿಳೆಯರ ತಂಡದ ನೋಂದಣಿಗೆ ಅವಕಾಶ ಇದೆ ಎಂದು ಹೇಳಿದರು.

ಈ ಂದ್ಯಾವಳಿಗಾಗಿ ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಎಸ್ಎಂಎಸ್ ವಿದ್ಯಾಪೀಠದ ಮೈದಾನ, ಮೂರ್ನಾಡಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಮೈದಾನಗಳನ್ನು ಸಿದ್ಧಪಡಿಸಲಾಗುತ್ತಿದೆ. ಒಟ್ಟು 6 ಓವರ್ನ ಟೆನ್ನಿಸ್ಬಾಲ್ ಪಂದ್ಯಾವಳಿ ಇದಾಗಿದ್ದು, ನೋಡುಗರಿಗೆ ರಸದೌತಣ ನೀಡಲಿದೆ ಎಂದರು.

ಏಪ್ರಿಲ್ 3ರಂದು ಬೆಳಿಗ್ಗೆ 11 ಗಂಟೆಗೆ ಮೂರ್ನಾಡಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಕ್ರಿಕೆಟ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಭಾಗವಹಿಸಲಿದ್ದಾರೆ. ಉತ್ತರ ಕೊಡಗು ಮತ್ತು ದಕ್ಷಿಣ ಕೊಡಗಿನ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ ಎಂದರು.

ಕ್ರಿಕೆಟ್ ಸಮಿತಿಯ ಮಾಧ್ಯಮ ವಕ್ತಾರ ಉತ್ತಮ್ ಬೋಪಣ್ಣ ಮಾತನಾಡಿ, ‘ನೋಂದಣಿಗಾಗಿ ವೆಬ್ಸೈಟ್ ರೂಪಿಸಲಾಗಿತ್ತು. ಶೇ 80ರಷ್ಟು ನೋಂದಣಿ ಆನ್ಲೈನ್ ಮೂಲಕವೇ ಬಂದಿರುವುದು ವಿಶೇಷ‘ ಎಂದು ಹೇಳಿದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ₹ 1 ಲಕ್ಷ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹75 ಸಾವಿರ ನಗದು ಬಹುಮಾನವಿದೆ. ಹಾಗೆಯೇ, ವಿಜೇತ ಮಹಿಳಾ ತಂಡಕ್ಕೆ ₹1 ಲಕ್ಷ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹50 ಸಾವಿರ ನಗದು ಬಹುಮಾನ ನೀಡಲು ಚಿಂತಿಸಲಾಗಿದೆ ಎಂದರು.

ಕಳೆದ 23 ವರ್ಷಗಳ ಕಾಲ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವಗಳನ್ನು ಆಯೋಜಿಸಿದ್ದ ಕುಟುಂಬಗಳ ಮುಖ್ಯಸ್ಥರಿಗೆ ಈ ಬಾರಿ ಗೌರವ ಸಮರ್ಪಿಸಲಾಗುವುದು ಎಂದು ಹೇಳಿದರು.

ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಮಧು ದೇವಯ್ಯ, ಕಾರ್ಯದರ್ಶಿ ಭಜನ್ ಬೋಪಣ್ಣ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-51-760634327

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.