ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿ’ ಯಲ್ಲಿ ಕೊಚ್ಚೆರ ತಂಡ ಕೈಪಟ್ಟಿರ ವಿರುದ್ಧ 2 ರನ್ಗಳ ರೋಚಕ ಜಯ ಗಳಿಸಿತು.

ಇದೇ ರೀತಿ ಮಾಚೆಟ್ಟಿರ ತಂಡವು (ಬಾಳುಗೋಡು) ಕರವಟ್ಟಿರ ವಿರುದ್ಧ 5 ರನ್ಗಳ ರೋಚಕ ಜಯ ಪಡೆದರೆ, ಬೊಳ್ಳಚೆಟ್ಟಿರ ತಂಡವು ಕೊಕ್ಕೆಂಗಡ ವಿರುದ್ಧ 4 ರನ್ಗಳ ರೋಚಕ ಜಯ ಪಡೆಯಿತು. ಈ ಮೂಲಕ ಈ ಪಂದ್ಯಗಳು ನೋಡುಗರನ್ನು ಬಹುವಾಗಿ ಸೆಳೆಯುವಲ್ಲಿ ಸಫಲವಾದವು.

ಆಟ್ರಂಗಡ ತಂಡವು ಕೊಳುವಂಡ ವಿರುದ್ಧ 10 ವಿಕೆಟ್ಗಳಿಂದ ಗೆಲುವು ಪಡೆಯಿತು. ಕೊಳುವಂಡ ನೀಡಿದ 38 ರನ್ಗಳನ್ನು ಆಟ್ರಂಗಡ ತಂಡವು ಕೇವಲ ಎರಡೇ ಓವರ್ನಲ್ಲಿ ತಲುಪಿದ್ದು ವಿಶೇಷ ಎನಿಸಿತ್ತು.

ಮೋಟನಾಳಿರ ಮತ್ತು ಗಾಂಡಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮೋಟನಾಳಿರ ರನ್ಗಳ ಹೊಳೆಯನ್ನೇ ಹರಿಸಿತು. 6 ಓವರ್ಗಳಲ್ಲಿ ಅದು ಗಳಿಸಿದ್ದು 3 ವಿಕೆಟ್ ನಷ್ಟಕ್ಕೆ 109 ರನ್ಗಳು. ಅಂತಿಮವಾಗಿ ಮೋಟನಾಳಿರ 62 ರನ್ಗಳಿಂದ ಗೆಲುವು ದಾಖಲಿಸಿತು.

ಇನ್ನುಳಿದಂತೆ, ಮುಂಡoಡ ತಂಡವು ಬೊಳಂದಂಡ ವಿರುದ್ಧ 14 ರನ್ಗಳಿಂದ; ಮಂದತಂಡ ತಂಡವು ಪಡೆಯೆಟ್ಟಿರ ವಿರುದ್ಧ 9 ವಿಕೆಟ್ಗಳಿಂದ; ಮಾದೆಯಂಡ (ಎಂ.ಬಾಡಗ)ತಂಡವು ಕಲ್ಲೇಂಗಡ (ಬೇಳೂರು) ವಿರುದ್ಧ 17ರನ್ಗಳಿಂದ; ಅಜ್ಜಿಕುಟ್ಟಿರ ತಂಡವು ಚೆನ್ನಪಂಡ ವಿರುದ್ಧ 5 ವಿಕೆಟ್ಗಳಿಂದ; ಮೂಕೊಂಡ ತಂಡವು ಮೇದುರ ವಿರುದ್ಧ 42 ರನ್ಗಳಿಂದ; ಬಾಚಿರ ತಂಡವು ಪುಟ್ಟಿಚoಡ (ಬೊಳ್ಳರಿಮಾಡ) ವಿರುದ್ಧ 13 ರನ್ಗಳಿಂದ; ಕೈಬಿಲಿರ ತಂಡವು ಕುಟ್ಟಂಡ (ಅಮ್ಮತ್ತಿ) ವಿರುದ್ಧ 51 ರನ್ಗಳಿಂದ ಗೆಲುವು ಸಾಧಿಸಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-51-1081076747

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.