ನಾಪೋಕ್ಲು: ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ತೀವ್ರ ಹಣಾಹಣಿ ಕಂಡು ಬರಲಿಲ್ಲ. ಚಿಂಡಮಾಡ ಮತ್ತು ಕಂಜಿತಂಡ ತಂಡಗಳ ನಡುವಿನ ಪಂದ್ಯ ಹಾಗೂ ಕಲ್ಲಂಗಡ ಮತ್ತು ಚೋಕಿರ ನಡುವಿನ ಪಂದ್ಯಗಳನ್ನು ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲಿ ಸಮಬಲದ ಹೋರಾಟ ಕಾಣಲಿಲ್ಲ.

ಚಿಂಡಮಾಡ ಮತ್ತು ಕಂಜಿತಂಡ ತಂಡಗಳ ನಡುವಿನ ಪಂದ್ಯ ಮಾತ್ರ ಪ್ರೇಕ್ಷಕರನ್ನು ತುದಿಗಾಲ ಮೇಲೆರಿಸುವಲ್ಲಿ ಸಫಲವಾಯಿತು. ಕೊನೆಯವರೆಗೂ ಕುತೂಹಲವನ್ನು ಉಭಯ ತಂಡಗಳು ಕಾಯ್ದುಕೊಂಡಿದ್ದವು. ಎರಡು ತಂಡಗಳು ತಲಾ 2 ಗೋಲು ಗಳಿಸಿ ಸಮಬಲ ಸಾಧಿಸಿದವು. ನಂತರ ಟೈ ಬ್ರೇಕರ್ನಲ್ಲಿ ಚಿಂಡಮಾಡ ತಂಡ 4-1ರಲ್ಲಿ ಕಂಜಿತಂಡ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.

ಚೋಕಿರ ಮತ್ತು ಕಲ್ಲಂಗಡ ನಡುವಿನ ಪಂದ್ಯ ಸಹ ಜಿದ್ದಾಜಿದ್ದಿನಿಂದ ಕೂಡಿತ್ತು. ಉಭಯ ತಂಡಗಳ ನಡುವೆ ಸರಿಸಮವಾದ ಹೋರಾಟ ಕಂಡು ಬಂದರೂ, ಅಂತಿಮವಾಗಿ ಚೋಕಿರ 6–5ರ ಅಂತರದಿಂದ ಗೆಲುವು ಪಡೆದು ನಿಟ್ಟುಸಿರು ಬಿಟ್ಟಿತು.

ಉಳಿದಂತೆ ಬಹುತೇಕ ತಂಡಗಳು ಯಾವುದೇ ಗೋಲು ಗಳಿಸಲು ಸಾಧ್ಯವಾಗದೇ ಶೂನ್ಯಸಾಧನೆ ಮಾಡಿದವು.

ಪುಟ್ಟಿಚಂಡ ತಂಡವು ಬೊಳ್ಳರ್ಪಂಡ ತಂಡದ ವಿರುದ್ಧ 6-0, ಕೈಪೆಟ್ಟಿರ ತಂಡ ಪುಚ್ಚಿಮಾಡ ವಿರುದ್ಧ 5-1 ರಿಂದ ,ತಿರುತೆರ ಮಿಣ್ಣಂಡ ವಿರುದ್ಧ 5-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದವು.

ಮಂದನೆರವಂಡ ಕಾಂಡೇರ ವಿರುದ್ಧ 3-1ರಲ್ಲಿ, ಮುಂಡಂಡ ಮಾಚೆಟ್ಟಿರ ವಿರುದ್ಧ 3-1 ರಲ್ಲಿ ಮುರುವಂಡ ಕುಲ್ಲಚಂಡ ವಿರುದ್ಧ 2-0 ರಲ್ಲಿ ಕಲ್ಕಂಡ ಪುಲಿಯಂಡ ವಿರುದ್ಧ 3 -0 ಅಂತರದಲ್ಲಿ ಗೆಲುವು ಸಾಧಿಸಿದವು.

ಅಪ್ಪು ಮಣಿಯಂಡ ಗೀಜಗಂಡ ವಿರುದ್ಧ 3- 0 ಅಂತರದಲ್ಲಿ ಕೇಟೋಳಿರ ಸರ್ಕಂಡ ವಿರುದ್ಧ 4- 0 ಅಂತರದಲ್ಲಿ ಅಮ್ಮಂಡ ಅಂಗೇರಿರ(ಚೆಟ್ಟಿಮಾಡ) ವಿರುದ್ಧ 2-0 ಅಂತರದಲ್ಲಿ, ಮೂಕಂಡ ಪೇರಿಯಂಡ ವಿರುದ್ಧ 3-0 ರಲ್ಲಿ ಜಯ ಸಾಧಿಸಿದವು. ತೆಕ್ಕಡ, ಕೋಡಿರ ಹಾಗೂ ಮೂವೆರ ತಂಡಗಳು ವಾಕ್ ಓವರ್ ಪಡೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-51-1701339646

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.