ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಟೂರ್ನಿಯು ದೇಶಕ್ಕೆ ಮಾದರಿ ಎಂದು ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಮನ್ ಸುಖ್ ಮಾಂಡವಿಯಾ ಶ್ಲಾಘಿಸಿದರು.

ತಾಲ್ಲೂಕಿನ ನಾಪೋಕ್ಲು ಪಟ್ಟಣದಲ್ಲಿ ಶನಿವಾರ ನಡೆದ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ 26ನೇ ಆವೃತ್ತಿ ಚೇನಂಡ ಕಪ್ನ ಫೈನಲ್ ಪಂದ್ಯದಲ್ಲಿ ಅವರು ಮಾತನಾಡಿದರು.

‘ಅಂತರರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್ ಕ್ರೀಡೆ ಎನ್ನುವುದು ಒಂದು ಸಮುದಾಯದ ಒಗ್ಗಟ್ಟಿಗೆ ಸಹಕಾರಿಯಾಗಬೇಕು ಎಂದು ಈಗ ಹೇಳಿದೆ. ಆದರೆ, ಕೊಡವ ಸಮುದಾಯದ ಪೂರ್ವಜರು ಅದನ್ನು ಹಿಂದಿನಿಂದಲೇ ಕಾರ್ಯರೂಪಕ್ಕೆ ತಂದಿದ್ದಾರೆ. ನಿಜಕ್ಕೂ ನನಗೆ ಈ ಕ್ರೀಡೆ ನೋಡಿ ರೋಮಾಂಚನವಾಯಿತು’ ಎಂದು ಹೇಳಿದರು. ಒಟ್ಟು 18 ಒಲಿಂಪಿಯನ್ಗಳನ್ನು ನೀಡಿರುವ ಕೊಡಗಿನ ಭೂಮಿಗೆ ವಂದಿಸುವೆ ಎಂದ ಅವರು, ಇಂತಹ ಕ್ರೀಡಾ ಪ್ರತಿಭೆಗಳಿರುವ ಈ ಜಿಲ್ಲೆಯಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಎಲ್ಲ ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ ಎಂದು ಪ್ರತಿಪಾದಿಸಿದರು.

‘ಕೊಡಗಿನಲ್ಲಿ ಶೂಟಿಂಗ್ ಕ್ರೀಡೆಯೂ ಜನಪ್ರಿಯವಾಗಿದೆ. ಶೂಟಿಂಗ್ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುವುದು. ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರದ ಮೂಲಸೌಕರ್ಯಗಳ ವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಇಂತಹ ಕ್ರೀಡೆಗಳಲ್ಲಿ ಪ್ರತಿಭಾ ಶೋಧದ ವ್ಯವಸ್ಥೆ ಇರಬೇಕು. ಉತ್ತಮ ಕೌಶಲಗಳನ್ನು ಹೊಂದಿರುವ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ಕೊಡುವ ವ್ಯವಸ್ಥೆ ರೂಪಿಸಿದರೆ ಮುಂದೆ ಆ ಕ್ರೀಡಾಪಟುಗಳು ದೇಶದ ಕ್ರೀಡಾ ಕ್ಷೇತ್ರಕ್ಕೆ ಕೊಡುಗೆ ನೀಡಬಲ್ಲರು’ ಎಂದು ಅಭಿಪ್ರಾಯಪಟ್ಟರು.

ಸಂಸದ ಯದುವಿರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಭಾರತದ ಕ್ರೀಡಾ ತಂಡದಲ್ಲಿ ಕೊಡಗಿನವರು ಇಲ್ಲದಿದ್ದರೆ ಅದು ಅಪೂರ್ಣ. ಕೊಡವ ಕೌಟುಂಬಿಕ ಹಾಕಿ ಟೂರ್ನಿ ಯಶಸ್ವಿಯಾಗಿ ನಡೆಯುತ್ತಿದ್ದು, ಮಹಿಳೆಯರಿಗೂ ಪ್ರೇರಣೆ ನೀಡುತ್ತಿರುವುದು ಹೆಮ್ಮೆಯ ವಿಚಾರ. ಭಾರತೀಯ ಏಕತೆಗೆ ಇಂತಹ ವೇದಿಕೆ ಬೆಂಬಲ ನೀಡಿದೆ ಎಂದು ತಿಳಿಸಿದರು.

ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಮಾತನಾಡಿ, ‘ಪಾಂಡಂಡ ಕುಟ್ಟಪ್ಪನವರು 1997ರಲ್ಲಿ ಆರಂಭಿಸಿದ ಈ ಪ್ರತಿಷ್ಠಿತ ಕೊಡವ ಕೌಟುಂಬಿಕ ಹಾಕಿಯು ಕೊಡಗಿನ ಕ್ರೀಡಾ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಕೊಡಗನ್ನು ಕೇಂದ್ರದಿಂದ ಕ್ರೀಡಾಜಿಲ್ಲೆ ಎಂದು ಘೋಷಿಸಬೇಕು’ ಎಂದು ಹೇಳಿದರು.

ಈ ಟೂರ್ನಿಯು ಈಗಾಗಲೇ ಗಿನ್ನಿಸ್ ದಾಖಲೆ ಹಾಗೂ ವರ್ಲ್ಸ್ ಬುಕ್ ಆಫ್ ರೆಕಾರ್ಡ್ ಪುಟಗಳನ್ನು ಸೇರಿದೆ. ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಆಟಗಾರರು ಈ ಟೂರ್ನಿಯಲ್ಲಿ ಆಡಿದ್ದಾರೆ. ಹೊಸ ಆಟಗಾರರು ತಮ್ಮ ಕ್ರೀಡಾ ಜೀವನವನ್ನು ಈ ಟೂರ್ನಿಯಿಂದಲೇ ಆರಂಭಿಸಿದ್ದಾರೆ. ಮಹಿಳಾ ಹಾಕಿಯೂ ಇದರಲ್ಲಿದೆ. ರಾಜ್ಯ ಸರ್ಕಾರ ಅನುದಾನ ಕೊಡುತ್ತಿದೆ. ಕೇಂದ್ರ ಸರ್ಕಾರವೂ ಅನುದಾನ ನಿಡಬೇಕು ಎಂದರು.

ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅಜ್ಜಿಕುಟ್ಟಿರ ಎಸ್.ಬೋಪಣ್ಣ ಮಾತನಾಡಿ, ‘ಈ ಟೂರ್ನಿ ಕೊಡವ ಜನಾಂಗಕ್ಕೆ ಹೆಗ್ಗಳಿಕೆ. ಮುಂದೆ ಅಜ್ಜಿಕುಟ್ಟಿರ ಕಪ್ಗೂ ಸಹಕಾರ ನೀಡಬೇಕು. ಎಲ್ಲಾ ಕೌಟುಂಬಿಕ ಹಾಕಿಯನ್ನೂ ಎಲ್ಲರೂ ಬೆಂಬಲಿಸಬೇಕು’ ಎಂದು ಹೇಳಿದರು.

ಎಸ್ಎಲ್ಎನ್ ಸಂಸ್ಥೆಯ ಸಿಇಒ ಸಾಹೀದ್ ಸಿಂಗ್ ಮಾತನಾಡಿ, ಕೊಡವ ಸಂಸ್ಕೃತಿ, ಕಾಫಿ ದೇಶಕ್ಕೆ ಹೆಸರುವಾಸಿಯಾಗಿದೆ. ಹಾಕಿ ಕ್ರೀಡಾಕೂಟ ಜನಾಂಗವನ್ನು ಬೆಸೆಯುತ್ತಿದೆ’ ಎಂದರು.

ನಾರಾಯಣ ಆಸ್ಪತ್ರೆಯ ಡಾ.ಸಂತೋಷ್ ಉತ್ತಪ್ಪ ಮಾತನಾಡಿ, ‘ಯುವಕರು ದೈಹಿಕ ಕ್ಷಮತೆ ಕಳೆದುಕೊಳ್ಳುತ್ತಿರುವ ಇಂತಹ ಹೊತ್ತಿನಲ್ಲಿ ಇಂತಹ ಕ್ರೀಡೆ ಅನಿವಾರ್ಯ. ದುಶ್ಚಟಗಳಿಂದ ದೂರವಿದ್ದು, ನಿತ್ಯ ವ್ಯಾಯಾಮಕ್ಕೆ ಸಮಯ ನೀಡಿ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ವಿಮೆ ಮಾಡಿಸಿಕೊಂಡರೆ ಸಹಕಾರಿಯಾಗುತ್ತದೆ’ ಎಂದು ಸಲಹೆ ನೀಡಿದರು.

ಉದ್ಯಮಿ ಜೆಸು ಮಾತನಾಡಿ, ‘ಕೊಡಗು ಎಂದರೆ ವಿಶೇಷತೆ. ಇಲ್ಲಿನ ಹಬ್ಬಹರಿದಿನ, ವಿವಾಹ ಆಚರಣೆ ವಿಭಿನ್ನವಾಗಿರುತ್ತದೆ. ಅದೇ ರೀತಿ ಕೊಡವ ಕುಟುಂಬಗಳನ್ನು ಒಂದೆಡೆ ಸೇರಿಸುವುದು ಸಾಹಸದ ಕೆಲಸ. ಸ್ವಚ್ಛ ಹಾಗೂ ಸುಂದರವಾಗಿಡಬೇಕು. ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು’ ಎಂದರು.

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-51-698429151

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.