ಕೋಲಾರ: ಉತ್ತಮ ಆಟವಾಡಿದ ಎಚ್ವಿಕೆ ರಾಕರ್ಸ್ ತಂಡದವರು ನಗರದಲ್ಲಿ ನಡೆದ ಕೆವಿಎಲ್–2 ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯಲ್ಲಿ ಮೊದಲ ಸ್ಥಾನದೊಂದಿಗೆ ಪ್ರಶಸ್ತಿ ಜಯಿಸಿದರು.

ನಗರದ ಮಿನಿ ಕ್ರೀಡಾಂಗಣದಲ್ಲಿ ಸ್ವಾಮಿ ವಿವೇಕಾನಂದ ವಾಲಿಬಾಲ್ ಕ್ಲಬ್ ಆಯೋಜಿಸಿದ್ದ ಟೂರ್ನಿಯಲ್ಲಿ ಈ ಸಾಧನೆ ಮಾಡಿದರು. ಟ್ರೋಫಿ ಹಾಗೂ ₹ 70 ಸಾವಿರ ಬಹುಮಾನ ಪಡೆದರು.

ಎರಡನೇ ಸ್ಥಾನ 7 ರಾಕರ್ಸ್ ಪಾಲಾಯಿತು. ಅವರಿಗೆ ₹ 50 ಸಾವಿರ ನಗದು ಲಭಿಸಿತು. ಮೂರನೇ ಸ್ಥಾನಕ್ಕೆ ಕೆಬಿಕೆ ಫ್ರೆಂಡ್ಸ್ ಭಾಜನರಾದರು. ಅವರಿಗೆ ₹ 30 ಸಾವಿರ ಸಿಕ್ಕಿತು. ನಾಲ್ಕನೇ ಸ್ಥಾನಕ್ಕೆ ಪಾತ್ರವಾದ ಚಿನ್ನದ ನಾಡು ತಂಡಕ್ಕೆ ₹ 20 ಸಾವಿರ ಲಭಿಸಿತು.

ಟೂರ್ನಿಯನ್ನು ಸುರೇಶ್ ಹಾಗೂ ಆಕಾಶ್ ನೇತೃತ್ವದಲ್ಲಿ ಹಿರಿಯ ಆಟಗಾರ ಪ್ರೇಮನಾಥ್ (ಗೋಪಾಲ್), ಕಿರಿಯ ಆಟಗಾರ ಹರ್ಷಿತ್ (ಮುನ್ನ) ಸ್ಮರಣಾರ್ಥ ಆಯೋಜಿಸಲಾಗಿತ್ತು. ಒಟ್ಟು 8 ತಂಡಗಳು ಪಾಲ್ಗೊಂಡಿದ್ದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-18-1507288017

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.