ನಾಪೋಕ್ಲು: ಸಮೀಪದ ಕಕ್ಕಬ್ಬೆಯ ಮಲ್ಮ ಹಾಕಿ ಕ್ಲಬ್ ವತಿಯಿಂದ ಹಾಕಿ ಕೂರ್ಗ್ ಸಹಯೋಗದೊಂದಿಗೆ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಹಾಕಿ ಲೀಗ್ನ ಟಾಪ್ 8 ತಂಡಗಳ ನಡುವಿನ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೋಣನಕಟ್ಟೆ ಇಲೆವೆನ್ ತಂಡ ಮಡಿಕೇರಿ ಚಾರ್ಮರ್ಸ್ ತಂಡವನ್ನು 5-3 ಗೋಲುಗಳಿಂದ ಪರಾಭವಗೊಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ವಿಜೇತ ಕೋಣನಕಟ್ಟೆ ಇಲೆವೆನ್ ತಂಡಕ್ಕೆ ಟ್ರೋಫಿ ಹಾಗೂ ₹50 ಸಾವಿರ ನಗದು, ರನ್ನರ್ ಅಪ್ ಆದ ಮಡಿಕೇರಿ ಚಾರ್ಮರ್ಸ್ ತಂಡಕ್ಕೆ ಟ್ರೋಫಿ ಹಾಗೂ ₹30 ಸಾವಿರ ನಗದು ಬಹುಮಾನ ನೀಡಲಾಯಿತು.

ಫೈನಲ್ ಪಂದ್ಯ ಶ್ರೇಷ್ಠ ಬಹುಮಾನವನ್ನು ಮಡಿಕೇರಿ ಚಾರ್ಮರ್ಸ್ ಯತೀಶ್ ಪಡೆದುಕೊಂಡರೆ, ಮಡಿಕೇರಿ ಚಾರ್ಮರ್ಸ್ ತಂಡದ ಚೇತನ್ ಬೆಸ್ಟ್ ಫಾರ್ವರ್ಡ್, ಕೋಣನಕಟ್ಟೆ ಇಲೆವೆನ್ ತಂಡದ ಮಾಚಂಗಡ ಅಯ್ಯಪ್ಪ ಬೆಸ್ಟ್ ಬ್ಯಾಕ್, ಮಡಿಕೇರಿ ಚಾರ್ಮರ್ಸ್ ತಂಡದ ಸೋಮಣ್ಣ ಬೆಸ್ಟ್ ಗೋಲ್ ಕೀಪರ್, ಕೋಣನಕಟ್ಟೆ ಇಲೆವೆನ್ ತಂಡದ ಭರತ್ ಬೆಸ್ಟ್ ಆಫ್ ಹಾಗೂ ಕೋಣನಕಟ್ಟೆ ಇಲೆವೆನ್ ತಂಡದ ಅಂಕೂರ್ ರಾಯ್ ಹೈಯೆಸ್ಟ್ ಗೋಲ್ ಸ್ಕೋರರ್ ಬಹುಮಾನಕ್ಕೆ ಭಾಜನರಾದರು.

ಹಾಕಿ ಟೂರ್ನಿಯ ಸಮಾರೋಪ ಸಮಾರಂಭವನ್ನು ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು.

ಮಲ್ಮ ಹಾಕಿ ಕ್ಲಬ್ ಅಧ್ಯಕ್ಷ ಮಾದಂಡ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ದಾನಿ ಎಡಿಕೇರಿ ಪ್ರಸನ್ನ, ಹಾಕಿ ಕೂರ್ಗ್ ಅಧ್ಯಕ್ಷ ಪಳಗಂಡ ಲವಕುಮಾರ್, ಉಪಾಧ್ಯಕ್ಷ ಮಾಪಂಗಡ ಯಮುನಾ ಚಂಗಪ್ಪ, ಕಾರ್ಯದರ್ಶಿ ಚೇತನ್, ಬಾಚಮಾಂಡ ಲವ ಚಿಣ್ಣಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಕುಲ್ಲೇಟಿರ ಅರುಣ್ ಬೇಬ, ಅರೆಯಡ ಪವಿನ್ ಪೊನ್ನಣ್ಣ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-1700582527

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.