ಕನಕಗಿರಿ: ಯುವ ಸಮುದಾಯ ಮೊಬೈಲ್ ಗೀಳಿಗೆ ಅಂಟಿಕೊಳ್ಳದೆ ಮಾನಸಿಕ, ದೈಹಿಕ ಶಕ್ತಿ ಹೆಚ್ಚಿಸುವ ಆಟೋಟ, ಯೋಗ, ಚಿತ್ರಕಲೆ ಇತರೆ ಕಲಾರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂದು ಯುವ ಮುಖಂಡ ಟಿ.ಜೆ.ರಾಮಚಂದ್ರ ತಿಳಿಸಿದರು.

ಇಲ್ಲಿನ ಸರ್ಕಾರಿ ಪಿಯು ಕಾಲೇಜು ಪರಿಸರದಲ್ಲಿರುವ ಜಯಪ್ರಕಾಶರೆಡ್ಡಿ ಅವರ ಹೊಲದಲ್ಲಿ ಭಾನುವಾರ ಆಯೋಜಿಸಿದ್ದ ಕನಕಗಿರಿ ಪ್ರಿಮಿಯರ್ ಲೀಗ್ ಸೀಜನ್-8 ಕ್ರಿಕೆಟ್ ಟೂರ್ನಿಯಲ್ಲಿ ಅವರು ಮಾತನಾಡಿದರು.

ಒತ್ತಡದ ಜೀವನದಲ್ಲಿ ರೋಗಗಳಿಂದ ಮುಕ್ತರಾಗಲು ಕ್ರೀಡೆಗಳಲ್ಲಿ ಭಾಗವಹಿಸ ಬೇಕೆಂದು ಹೇಳಿದರು.

ಪಟ್ಟಣ ಪಂಚಾಯಿತಿ ಸದಸ್ಯ ಹನುಮಂತಪ್ಪ ಬಸರಿಗಿಡ ಮಾತನಾಡಿದರು. ಯುವ ಮುಂದಾಳು ಶಶಿಕಿರಣ ತಂಗಡಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಸಂಯೋಜಕ ಗಂಗಾಧರ ಗಂಗಾಮತ, ಮಂಜುನಾಥ ಚೂಡಾಮಣಿ, ಅಜಮೀರ ಎಲಿಗಾರ ಮಾತನಾಡಿ, ಟೂರ್ನಿಯಲ್ಲಿ ವಿಜೇತರಿಗೆ ಪ್ರಥಮ ₹1 ಲಕ್ಷ, ದ್ವಿತೀಯ ₹50 ಸಾವಿರ ಮತ್ತು ತೃತೀಯ ಸ್ಥಾನ ಪಡೆದವರಿಗೆ ₹ 25 ಸಾವಿರ ಬಹುಮಾನ ನೀಡಲಾಗುವುದು, ವೈಯಕ್ತಿಕ ಬಹುಮಾನ ಸಹ ಇರಲಿದೆ ಎಂದು ಮಾಹಿತಿ ನೀಡಿದರು.

ಶುಕ್ರವಾರ ನಿಧನರಾದ ಕ್ರೀಡಾಪಟು ಹನುಮಂತಪ್ಪ ನಾಗಲಾಪುರ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ಸಲ್ಲಿಸಲಾಯಿತು. ಪಂದ್ಯಾವಳಿಯ ಆಯೋಜಕರಾದ ವೀರೇಶ ಗೇಲ್, ಅಣ್ಣಪ್ಪ ಭಜಂತ್ರಿ, ಮಹ್ಮದ ಸಲೀಂ ಆಗೋಲಿ, ಕಬ್ಬಿಣದ ಮಂಜುನಾಥ, ಯಲ್ಲಪ್ಪ ಪೂಜಾರ, ಕಲ್ಲೇಶ ಅಕ್ಕನವರ್ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-35-1156328748

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.