ಮೈಸೂರು: ಪ್ರತಿಭಾವಂತ ಯುವ ಕ್ರಿಕೆಟಿಗರಿಗೆ ತರಬೇತಿ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಕ್ರಿಕೆಟ್ ಅಕಾಡೆಮಿಗೆ 2026–27ನೇ ಸಾಲಿನ ಪ್ರವೇಶಕ್ಕಾಗಿ ವಿವಿಧ ಜಿಲ್ಲೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಿದೆ.

ಮೈಸೂರು ವಲಯ ಮಟ್ಟದಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ಆಟಗಾರರು ಪಾಲ್ಗೊಳ್ಳಬಹುದು. ಬಾಲಕರ ವಿಭಾಗದಲ್ಲಿ 14, 16 ಹಾಗೂ 19ರ ವಯೋಮಿತಿಯಲ್ಲಿ ಪ್ರತ್ಯೇಕ ಆಟಗಾರರ ಆಯ್ಕೆ ನಡೆಯಲಿದೆ. ಏ. 3ರಂದು ಮಂಡ್ಯದ ಪಿಇಟಿ ಕೆಎಸ್ಸಿಎ ಟರ್ಫ್ ಮೈದಾನದಲ್ಲಿ, ಏ. 4ರಂದು ಚಾಮರಾಜನಗರದ ಲಯನ್ಸ್ ಕ್ರಿಕೆಟ್ ಅಕಾಡೆಮಿಯಲ್ಲಿ ಈ ಪ್ರಕ್ರಿಯೆ ಇರಲಿದೆ.

ಮೈಸೂರಿನಲ್ಲಿ ಏಪ್ರಿಲ್ 5ರಂದು 19 ವರ್ಷದ ಒಳಗಿನವರ ಆಯ್ಕೆಯು ಜೆಎಸ್ಎಸ್ ಕೆಎಸ್ಸಿಎ ಟರ್ಫ್ ಮೈದಾನದಲ್ಲಿ ಹಾಗೂ 16 ವರ್ಷದ ಒಳಗಿನವರ ಆಯ್ಕೆ ಎಸ್ಡಿಎನ್ಆರ್ಡಬ್ಲ್ಯು ನಡೆಯಲಿದೆ. ಮಾ. 22ರಂದು ನಡೆದ ಹಿಂದಿನ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ 14 ವರ್ಷದ ಒಳಗಿನ ಬಾಲಕರು ಮಂಡ್ಯ ಅಥವಾ ಚಾಮರಾಜನಗರದಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

ಬಾಲಕಿಯರಿಗಾಗಿ ಸಹ ಪ್ರತ್ಯೇಕ ಆಯ್ಕೆ ಪ್ರಕ್ರಿಯೆ ನಿಗದಿಯಾಗಿದೆ. 15 ವರ್ಷದ ಒಳಗಿನವರ ಆಯ್ಕೆಯು ಏ. 3ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನ ಜೆಎಸ್ಎಸ್ ಕೆಎಸ್ಸಿಎ ಟರ್ಫ್ ಮೈದಾನದಲ್ಲಿ ಹಾಗೂ 19 ವರ್ಷದ ಒಳಗಿನವರ ಆಯ್ಕೆಯು ಏ. 4ರಂದು ಬೆಳಿಗ್ಗೆ 9ಕ್ಕೆ ಮೈಸೂರಿನ ಎಸ್ಸಿಎನ್ಆರ್ಡಬ್ಲ್ಯು ಕ್ರೀಡಾಂಗಣದಲ್ಲಿ ನಡೆಯಲಿದೆ.

ಮಾಹಿತಿಗಾಗಿ ಕೆಎಸ್ಸಿಎ ಕಚೇರಿ ದೂರವಾಣಿ ಸಂಖ್ಯೆ 0821-2519900 ಅನ್ನು ಸಂಪರ್ಕಿಸಬಹುದು ಎಂದು ಮೈಸೂರು ವಲಯ ಸಂಚಾಲಕ ಶ್ರೀನಿವಾಸ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-40-1899306245

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.