ಕುಶಾಲನಗರ: ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ಪ್ರತಿಯೊಬ್ಬರಿಗೂ ಕ್ರೀಡೆಗಳು ತುಂಬ ಅಗತ್ಯ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಎಚ್.ವಿ.ಶಿವಪ್ಪ ಹೇಳಿದರು.

ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡ ಅವರು ಮಾತನಾಡಿದರು. ಕ್ರೀಡೆಗಳಿಂದಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಪರಸ್ಪರರಲ್ಲಿ ಸ್ನೇಹ ಸೌಹಾರ್ದ ಒಡಮೂಡುತ್ತದೆ. ಕ್ರೀಡೆಗಳಿಂದಾಗಿ ಪರಸ್ಪರ ಸ್ನೇಹ ವಿಶ್ವಾಸ ವಿಕಸನಗೊಳ್ಳುತ್ತದೆ ಎಂದರು.

ವೀರಶೈಲ ಮಹಾಸಭಾ ಸಮುದಾಯದ ಮಂದಿ ಒಗ್ಗೂಡುವ ಮೂಲಕ ಸಮಾಜದ ಸಂಘಟನೆಗೆ ಒತ್ತು ನೀಡಬೇಕು ಎಂದು ಶಿವಪ್ಪ ಸಲಹೆ ನೀಡಿದರು.

ಕೈಗಾರಿಕಾ ಹಾಗೂ ವಾಣಿಜ್ಯ ಘಟಕದ ರಾಜ್ಯ ನಿರ್ದೇಶಕ ಗರಗಂದೂರು ಸತೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎರಡು ನೂರು ವರ್ಷಗಳ ಕಾಲ ಕೊಡಗಿನ ಲಿಂಗಾಯತ ರಾಜರು ಆಳ್ವಿಕೆ ನಡೆಸಿದ ಕೊಡಗಿನಲ್ಲಿ ಲಿಂಗಾಯಿತರು ಅಲ್ಪಸಂಖ್ಯಾತರಾಗಿರುವುದು ಬೇಸರದ ಸಂಗತಿ. ಜಿಲ್ಲೆಯಲ್ಲಿ ಇರುವ ಲಿಂಗಾಯುತರು ಒಗ್ಗೂಡುವ ಮೂಲಕ ಸಂಘಟಿತರಾಗಬೇಕಿದೆ. ರಾಜಕೀಯವಾಗಿ ಅಸ್ತಿತ್ವ ಸ್ಥಾಪಿಸಬೇಕಿದೆ ಎಂದು ಹೇಳಿದರು. ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ.ಮಧುಸೂದನ್, ಕಾರ್ಯದರ್ಶಿ ಎಸ್. ಧರ್ಮೇಂದ್ರ, ಕೊಡಗು ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್.ಶಾಂಬಶಿವಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಉದ್ಯಮಿ ಬಸವರಾಜು, ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೀಪಿಕಾ ಕರುಣ, ಕಾರ್ಯದರ್ಶಿ ಲೇಖನಾ ಧರ್ಮೇಂದ್ರ, ಯುವ ಘಟಕದ ತಾಲ್ಲೂಕು ಅಧ್ಯಕ್ಷ ಎಚ್.ಪಿ.ವಿನಯ್, ನಗರ ಯುವ ಘಟಕದ ಅಧ್ಯಕ್ಷ ಎಂ.ಸಿ.ಸಚಿನ್, ನಿರ್ದೇಶಕಿ ಮನುಜಗದೀಶ್, ಯಶೋಧ ಮಹದೇವಪ್ಪ, ವೀರಶೈವ ಸಮುದಾಯದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ನಂದೀಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಗಣೇಶ್, ಶಿಕ್ಷಕ ಎಸ್.ಪಿ ಪರಮೇಶ್, ಶುಭಶೇಖರ್, ಉದಯಕುಮಾರ, ಎಸ್.ಎಸ್. ವಿರೂಪಾಕ್ಷ, ಟಿ.ಎಸ್. ಸೌಭಾಗ್ಯ ಪಾಲ್ಗೊಂಡಿದ್ದರು.

ಕ್ರೀಡಾಕೂಟದಲ್ಲಿ ಯುವಕರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ಮಕ್ಕಳಿಗೆ ಕಾಳು ಹೆರಕುವುದು, ಕಪ್ಪೆ ಕುಪ್ಪಳಿಸುವುದು, ಸ್ಟಿಕ್ಕರ್ ಅಂಟಿಸುವುದು, ಒಂಟಿಕಾಲು ಓಟ, ಬಲೂನು ಒಡೆಯುವುದು, ಕಾಲೇಜು ವಿದ್ಯಾರ್ಥಿಗಳಿಗೆ ನೂರು ಮೀಟರ್ ಓಟದ ಸ್ಪರ್ಧೆ, ನಿಂಬೆ ಚಮಚ, ನಿಧಾನ ಬೈಕ್ ಚಾಲನೆ, ಮಹಿಳೆಯರಿಗೆ ರಂಗೋಲಿ, ಪುರುಷರಿಗೆ ಭಾರದ ಗುಂಡು ಎಸೆತ ಸೇರಿದಂತೆ ಅನೇಕ ಕ್ರೀಡಾ ಚಟುವಟಿಕೆಗಳು ನಡೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-51-1332469030

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.