ಮಡಿಕೇರಿ: ಮಡಿಕೇರಿ ನಗರ ಆಟೊ ಮಾಲೀಕ ಚಾಲಕರ ಸಂಘದಿಂದ ಏಪ್ರಿಲ್ 5ರಿಂದ 3 ದಿನಗಳ ಕಾಲ ಇಲ್ಲಿನ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.

ಈ ಪಂದ್ಯಾವಳಿಯು ಕೊಡಗಿನ ಆಟೊ ಚಾಲಕರಿಗೆ, ಸ್ಥಳೀಯ ಆಟೊ ಸಂಘಟನೆಗಳಲ್ಲಿ ಸದಸ್ಯರಾದವರಿಗಾಗಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಎಚ್.ಮೇದಪ್ಪ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಾದ ಇದು 5 ಓವರ್ಗಳಿಗೆ ಸೀಮಿತವಾಗಿದ್ದು, 16 ತಂಡಗಳೂ ನೋಂದಾವಣೆಯಾಗಿವೆ. ವಿಜೇತರಾದ ತಂಡಕ್ಕೆ ₹ 40 ಸಾವಿರ ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹ 25 ಸಾವಿರ ನಗದು, ಟ್ರೋಪಿ ನೀಡಲಾಗುವುದು ಎಂದರು.

ಏಪ್ರಿಲ್ 11ರಂದು ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಕ್ರೀಡಾಕೂಟ ಮತ್ತು ನೃತ್ಯ ಮೇಳ ನಡೆಯಲಿದೆ. ಕ್ರೀಡಾಕೂಟದಲ್ಲಿ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳವರೆಗೆ ನಾನಾ ಬಗೆಯ ಆಟೋಟ ಏರ್ಪಡಿಸಲಾಗಿದೆ ಎಂದರು.

ಕಾಳುಹೆಕ್ಕುವುದು, ಬೆಲೂನ್ ಒಡೆಯುವುದು, ಬಕೇಟ್ಗೆ ಚೆಂಡು ಎಸೆಯುವುದು, ಕೇರಂ, ಕಬಡ್ಡಿ (ಮಕ್ಕಳಿಗೆ) ಓಟದ ಸ್ಪರ್ಧೆ ಹುಡುಗಿಯರು, ಹುಡುಗರು ಪ್ರತ್ಯೇಕವಾಗಿ ಆಯೋಜಿಸಲಾಗಿದೆ. ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ, ಬಾಂಬ್ ಇನ್ ದ ಸಿಟಿ, ಸಂಗೀತ ಕುರ್ಚಿ ಮಡಕೆ ಒಡೆಯುವುದು, ನಿಂಬೆ ಚಮಚ ಓಟ, ಭಾರದ ಗುಂಡು ಎಸೆತ, ಮತ್ತು ಕಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದು ಹೇಳಿದರು.

ಪುರುಷರಿಗೆ ಹಗ್ಗಜಗ್ಗಾಟ, ತೆಂಗಿನ ಕಾಯಿಗೆ ಕಲ್ಲು ಎಸೆತ, ಭಾರದ ಗುಂಡು ಎಸೆತ, ಮಡಕೆ ಒಡೆಯುವುದು, ಹಾಗೆಯೇ ಆಟೊ ಚಾಲಕರಿಗೆ ಮಾತ್ರವೇ ಕಬಡ್ಡಿ ಪಂದ್ಯಾವಳಿ, ಸೊಂಟಕ್ಕೆ ಹಗ್ಗ ಕಟ್ಟಿ ಆಟೊ ಎಳೆಯುವುದು ಮತ್ತು 40ವರ್ಷದಿಂದ 70ವರ್ಷದ ಆಟೊ ಚಾಲಕರಿಗೆ ಅನ್ವಯಿಸುವಂತೆ ಆಂಗಿ ಗುಬ್ಬಿ ಹಾಕಿ ಓಟದ ವಿಶೇಷ ಸ್ಪರ್ಧೆ ಸಹ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅದೇ ದಿನ ಸಂಜೆ 6ಗಂಟೆಯ ನಂತರ ಡ್ಯಾನ್ಸ್ ಮೇಳ ನಡೆಯಲಿದ್ದು, ಸ್ಥಳೀಯ ಪ್ರತಿಯೊಬ್ಬರಿಗೂ ಅವಕಾಶ ಒದಗಿಸುವ ನಿಟ್ಟಿನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ನಿರಾಸರಾಗದಂತೆ ನೆನಪಿನ ಸ್ಮರಣಿಕೆ ನೀಡಲಿದ್ದೇವೆ ಎಂದರು.

ಡ್ಯಾನ್ಸ್ ಮೇಳದಲ್ಲಿ ಭಾಗವಹಿಸುವ ತಂಡಗಳು ದಿನಾಂಕ ಏಪ್ರಿಲ್ 6ರೊಳಗಾಗಿ ತಮ್ಮ ತಂಡಗಳ ಹೆಸರುಗಳನ್ನು ನೋಂದಾಯಿಸಬೇಕಿದೆ. ಮಾಹಿತಿಗೆ ಮೊ: 9686300738 ಸಂಪರ್ಕಿಸಬಹುದು ಎಂದು ಹೇಳಿದರು.

ಸಂಘದ ಮುಖಂಡರಾದ ಸಮದ್, ದಿನೇಶ್ಶೆಟ್ಟಿ, ಜಸ್ಟಿನ್ ಡಿಸೋಜಾ, ಎಚ್.ಎಸ್.ನಾಗರಾಜ, ದಿನೇಶ್ ಬಾರನಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-51-475936322

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.