ಮಹಾಲಿಂಗಪುರ: ‘ಗ್ರಾಮೀಣ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಬಡ ಕ್ರೀಡಾ ಸಾಧಕರನ್ನು ಹುರಿದುಂಬಿಸಬೇಕಿದೆ’ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.

ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಾಮಿಯಾ ಕ್ರಿಕೆಟ್ ಕ್ಲಬ್ ವತಿಯಿಂದ ಐದು ದಿನ ಹಮ್ಮಿಕೊಂಡಿರುವ ಬಾಗಲಕೋಟೆ ಜಿಲ್ಲಾ ಪ್ರಿಮಿಯರ್ ಲೀಗ್ನ ಕ್ರಿಕೆಟ್ ಪಂದ್ಯಾವಳಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಅಗತ್ಯ. ಆದರೆ ಇಂದು ಮೊಬೈಲ್, ಟಿವಿ ಚಟಕ್ಕೆ ಬಿದ್ದಿರುವ ಯುವ ಪೀಳಿಗೆಯನ್ನು ಮೈದಾನಕ್ಕೆ ಕರೆತರುವುದು ಅನಿವಾರ್ಯವಾಗಿದೆ. ಕ್ರೀಡೆ ಕೇವಲ ಪದಕ ಗೆಲ್ಲುವುದಕ್ಕಲ್ಲ, ಅದು ಶಿಸ್ತು, ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಗುಣ ಕಲಿಸುತ್ತದೆ’ ಎಂದರು.

ಶೇಖರ ಅಂಗಡಿ, ಬಸವರಾಜ ರಾಯರ, ಮಹಾಲಿಂಗಪ್ಪ ಸನದಿ, ಅಪ್ಪಾಸಾಬ ನಾಲಬಂದ, ಮಹಾಲಿಂಗ ಪಟ್ಟಣಶೆಟ್ಟಿ, ಸೈಯದ್ ಶೇಖ, ಇಜಾಜ್ ಯಾದವಾಡ, ಲಿಯಾಸ್ ಯಾದವಾಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-19-1461819142

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.