ಮಹಾಲಿಂಗಪುರ: ‘ಕ್ರೀಡೆಗಳು ಕೇವಲ ವಿನೋದ ಅಥವಾ ಸ್ಪರ್ಧೆಗಾಗಿ ಅಲ್ಲ; ಅವು ಯುವಕರ ಒಟ್ಟಾರೆ ಬೆಳವಣಿಗೆ ಮತ್ತು ಆರೋಗ್ಯದ ಅಡಿಪಾಯ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಕಂಪ್ಯೂಟರ್ಗಳಿಗೆ ಅಂಟಿಕೊಂಡಿರುವ ಯುವ ಪೀಳಿಗೆಗೆ ಕ್ರೀಡೆಗಳು ಅತ್ಯಂತ ಅತ್ಯಗತ್ಯವಾಗಿವೆ’ ಎಂದು ವಕೀಲ ಶಿವಾನಂದ ಉಳ್ಳಾಗಡ್ಡಿ ಹೇಳಿದರು.

ಸಮೀಪದ ಕೆಸರಗೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತರುಣ ಕ್ಷೇಮಾಭಿವೃದ್ಧಿ ಸಂಘ ಹಾಗೂ ನೇತಾಜಿ ಸ್ಪೋಟ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ ಕೆಸರಗೊಪ್ಪ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆಟದಲ್ಲಿ ಗೆದ್ದಾಗ ಸಿಗುವ ಆನಂದ ಮತ್ತು ಸೋತಾಗ ಕಲಿಯುವ ಪಾಠಗಳು ಯುವಕರಲ್ಲಿ ಅದ್ಭುತ ಆತ್ಮವಿಶ್ವಾಸ ತುಂಬುತ್ತವೆ. ಯುವಕರು ಪ್ರತಿದಿನ ಕನಿಷ್ಠ 45 ರಿಂದ 60 ನಿಮಿಷಗಳ ಕಾಲ ಯಾವುದಾದರೂ ಒಂದು ಕ್ರೀಡೆಯಲ್ಲಿ ಭಾಗವಹಿಸುವುದು ಅವರ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮೈದಾನ ಪೂಜೆ ನೆರವೇರಿಸಿದರು. ರನ್ನಬೆಳಗಲಿ ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗ ನಿಪನಾಳ, ಮಹೇಶಚಂದ್ರ ತೇಲಿ, ಶ್ರೀಶೈಲ ಕಾರಜೋಳ, ಗಿರೀಶ ಕೋರಡ್ಡಿ, ಪಣ್ಮುಖ ಸುತಾರ ಜ್ಯೋತಿ ಬೆಳಗಿಸಿದರು. ವಿನೋದ ಮೇತ್ರಿ ಜರ್ಸಿ ಬಿಡುಗಡೆಗೊಳಿಸಿದರು. ದುಂಡಪ್ಪ ಜಾಧವ, ಪರಪ್ಪ ಬ್ಯಾಕೋಡ, ಚನ್ನು ದೇಸಾಯಿ, ಸತೀಶ ಪೂಜಾರಿ, ಮಹೇಶ ಬಾಗಲಿ ಟ್ರೋಫಿ ಅನಾವರಣಗೊಳಿಸಿದರು. ಶಂಕರಗೌಡ ಪಾಟೀಲ, ಶಿವಾನಂದ ಕೋಳಿಗುಡ್ಡ, ಮಹಾದೇವ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-19-1997087678

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.