ಮಲ್ಹಾರ(ಸೈದಾಪುರ): ‘ಆಟಗಾರರು ಕ್ರೀಡಾ ನಿಯಮಗಳಿಗೆ ಬದ್ಧರಾಗಬೇಕು. ಇಲ್ಲಿ ಸೋಲು – ಗೆಲುವು ಮುಖ್ಯವಲ್ಲ, ಕ್ರೀಡಾ ಸ್ಫೂರ್ತಿಯೊಂದಿಗೆ ಭಾಗವಹಿಸುವುದು ಅವಶ್ಯವಿದೆ’ ಎಂದು ರವಿಂದ್ರಗೌಡ ಕಾರಡ್ಡಿ ಮಲ್ಹಾರ ಹೇಳಿದರು.

ಸಮೀಪದ ಮಲ್ಹಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಮಲ್ಹಾರ ಪ್ರೀಮಿಯರ್ ಲೀಗ್’ಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಆಟಗಾರರು ವಿನಾಕಾರಣ ಮನಸ್ತಾಪ ಮಾಡಿಕೊಳ್ಳದೆ ಸ್ನೇಹ, ಸಹೋದರತ್ವ ಭಾವದೊಂದಿಗೆ ಆಟವಾಡಬೇಕು. ಇಂದಿನ ಸೋಲು ನಾಳೆಯ ಗೆಲುವಿಗೆ ಅಡಿಪಾಯವಾಗಬಹುದು’ ಎಂದರು.

‘ಕ್ರೀಡೆಯ ಜತೆಗೆ ಮಲ್ಹಾರ ಗ್ರಾಮದ ಯುವಕರು ಉತ್ತಮವಾಗಿ ವಿದ್ಯಾಭ್ಯಾಸ ಮಾಡುವ ಮೂಲಕ ಸರ್ಕಾರಿ ನೌಕರಿ ಹಾಗೂ ಎಂಬಿಬಿಎಸ್, ಎಂಜಿನಿಯರ್ನಂತಹ ಕೋರ್ಸ್ಗಳಿಗೆ ಸೇರಿಕೊಂಡು ಗ್ರಾಮದ ಕೀರ್ತಿ ಹೆಚ್ಚಿಸಬೇಕು’ ಎಂದರು.

ಪಂದ್ಯಾವಳಿಯಲ್ಲಿ ಮಲ್ಹಾರ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳು ಹಾಗೂ ತಾಂಡಾಗಳ ತಂಡಗಳು ಭಾಗವಹಿಸಿದ್ದವು. ಎಲ್ಲ ಆಟಗಾರರಿಗೆ ರವಿಂದ್ರಗೌಡ ಕಾರಡ್ಡಿ ಅವರು ಸುಮಾರು ₹ 50 ಸಾವಿರ ಖರ್ಚು ಮಾಡಿ ಟಿ–ಶರ್ಟ್ ಮತ್ತು ಸ್ಪೋರ್ಟ್ಸ್ ಪ್ಯಾಂಟ್ ವಿತರಿಸಿ ಕ್ರೀಡಾಸ್ಫೂರ್ತಿ ಮೆರೆದರು.

ಇದೇ ಸಂದರ್ಭದಲ್ಲಿ ಸಂಘಟಕರು ಮಾತನಾಡಿ, ‘ಪಂದ್ಯಾವಳಿಯ ವಿಜೇತ ತಂಡಕ್ಕೆ ಶರಣಪ್ಪಗೌಡ ಕೌಳೂರು, ಬಸ್ಸುಗೌಡ ಕಾರಡ್ಡಿ, ಮಹದೇವಪ್ಪ ಬಾಗ್ಲಿ, ವಗ್ಗಯ್ಯ ವಗ್ಗಯ್ಯನೋರ್, ಮಲ್ಲಮ್ಮ ಕೋಮಾರ ಹಾಗೂ ಸುರೇಶ ದೊಡ್ಡಮನಿ ಅವರಿಂದ ಆಕರ್ಷಕ ನಗದು ಬಹುಮಾನ ಇರಲಿದೆ’ ಎಂದು ಮಾಹಿತಿ ನೀಡಿದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-30-698065779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.