ನವದೆಹಲಿ : ಉದ್ದೀಪನ ಮದ್ದುಸೇವನೆ ನಿಗ್ರಹ ಕ್ರಮಗಳನ್ನು ಜಾಗತಿಕ ಮಟ್ಟಕ್ಕೆ ಅನುಗುಣವಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿಶ್ವ ಉದ್ದೀಪನ ಮದ್ದುಸೇವನೆ ನಿಗ್ರಹ ಘಟಕದ (ವಾಡಾ) ಅಧ್ಯಕ್ಷ ವಿಟೋಲ್ಡ್ ಬಾಂಕಾ ಅವರು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಜೊತೆ ಬುಧವಾರ ಸಮಾಲೋಚನೆ ನಡೆಸಿದರು.

ಬಾಂಕಾ ಅವರು ಮೂರು ದಿನಗಳಿಂದ ಭಾರತದಲ್ಲಿ ಬಿಡುವಿಲ್ಲದ ಪ್ರವಾಸದಲ್ಲಿದ್ದಾರೆ. ಸೋಮವಾರ ಅವರು, ಭಾರತದಲ್ಲಿ ಕ್ರೀಡೆಯ ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ತುರ್ತು ಮತ್ತು ಗಂಭೀರ ಕ್ರಮಗಳ ಬಗ್ಗೆ ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ನಿಗ್ರಹ ಘಟಕದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು.

‘ವಾಡಾ’ ಅಧ್ಯಕ್ಷ ವಿಟೋಲ್ಡ್ ಬಾಂಕಾ ಜೊತೆ ನವದೆಹಲಿಯಲ್ಲಿ ಬುಧವಾರ ಮಾತುಕತೆ ನಡೆಯಿತು. ಕ್ರೀಡೆಯನ್ನು ಸ್ವಚ್ಛಗೊಳಿಸುವ ಪ್ರಬಲ ಸಂಸ್ಕೃತಿ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಬದ್ಧವಾಗಿದೆ’ ಎಂದು ಮಾಂಡವೀಯ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಉದ್ದೀಪನ ಮದ್ದು ಸೇವನೆ ತಡೆಯುವ ನಿಟ್ಟಿನಲ್ಲಿ ಆಗುತ್ತಿರುವ ಪ್ರಗತಿಯ ಮೇಲೆ ಮಾತುಕತೆ ಕೇಂದ್ರೀಕೃತವಾಗಿತ್ತು ಎಂದು ಬಾಂಕಾ ಹೇಳಿದ್ದಾರೆ.

ಇದಕ್ಕೆ ಮೊದಲು ಅವರು ಸಿಬಿಐ ವಿಶೇಷ ನಿರ್ದೇಶಕ ಮನೋಜ್ ಶಶಿಧರ್ ಅವರನ್ನು ಭೇಟಿಯಾಗಿದ್ದರು. ನಿಷೇಧಿತ ಉದ್ದೀಪನ ಮದ್ದುಗಳ ಮಾರಾಟದಲ್ಲಿ ತೊಡಗಿರುವ ಕ್ರಿಮಿನಲ್ ಜಾಲ ಮಟ್ಟಹಾಕುವ ನಿಟ್ಟಿನಲ್ಲಿ ಸಹಕರಿಸುವ ಬಗ್ಗೆ ಚರ್ಚೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.