ಮಂಗಳೂರು: ಆತಿಥೇಯ ಮಂಗಳೂರು ರೈಫಲ್ ಕ್ಲಬ್ನ (ಎಂಆರ್ಸಿ) ಸಿನೋಜ್ ಮೋಹನನ್ ಅವರು ಮಂಗಳೂರು ಓಪನ್ ಶೂಟಿಂಗ್ನ ಎರಡನೇ ಆವೃತ್ತಿಯಲ್ಲಿ ಮಿಂಚಿದರು.

ಕದ್ರಿಯಲ್ಲಿರುವ ಕ್ಲಬ್ ಆವರಣದಲ್ಲಿ ಮಂಗಳವಾರ ಆರಂಭಗೊಂಡ ಸ್ಪರ್ಧೆಯ ಪುರುಷರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ 359 ಸ್ಕೋರ್ ಗಳಿಸಿದ ಅವರು ಮುನ್ನಡೆಯಲ್ಲಿದ್ದಾರೆ. ಮಹಿಳೆಯರ ಸಬ್ ಯೂತ್ ವಿಭಾಗದಲ್ಲಿ ಚೆನ್ನೈನ ತಮಿಳುನಾಡು ಕ್ರೀಡಾಭಿವೃದ್ಧಿ ಪ್ರಾಧಿಕಾರದ (ಎಸ್ಡಿಎಟಿ) ಆರುಂಧತಿ ವೆಟ್ರಿವೇಲ್ 508 ಸ್ಕೋರ್ ಗಳಿಸಿ ಮುನ್ನಡೆ ಸಾಧಿಸಿದರು.

ಯೂತ್ ಪುರುಷರ 10 ಮೀ. ಏರ್ ರೈಫಲ್ಸ್ ವಿಭಾಗದಲ್ಲಿ ಎಂಆರ್ಸಿಯ ಆರ್ಯಾಂಶ್ ಶೆಟ್ಟಿ 369 ಸ್ಕೋರ್ ಗಳಿಸಿದ್ದಾರೆ. ಯೂತ್ ಮಹಿಳೆಯರ ವಿಭಾಗದಲ್ಲಿ ಎಂಆರ್ಸಿಯ ಸಾನ್ವಿ ಪಿ.ಕೆ. 371 ಸ್ಕೋರ್ ಗಳಿಸಿ ಮನ್ನಡೆಯಲ್ಲಿದ್ದು, ಅನುರಾಧಾ ವಿ.ಎಚ್ 364 ಸ್ಕೋರ್ ಗಳಿಸಿದ್ದಾರೆ. ಮಹಿಳೆಯರ ಸಬ್ ಯೂತ್ ವಿಭಾಗದಲ್ಲಿ ಚೆನ್ನೈನ ಎಸ್ಡಿಎಟಿಯ ರುಕ್ಷಣ ಪಿ.ಡಿ. 276 ಸ್ಕೋರ್ ಗಳಿಸಿದ್ದಾರೆ.

ದೇಶದ 31 ಸಂಸ್ಥೆಗಳ 325 ಶೂಟರ್ಗಳು ಪಾಲ್ಗೊಂಡಿರುವ ಮಂಗಳೂರು ಓಪನ್ನ ನ್ಯಾಷನಲ್ ರೆಕಾರ್ಡ್ (ಎನ್ಆರ್)ಮಟ್ಟದಲ್ಲಿ 189 ಮಂದಿ ಸ್ಪರ್ಧಿಸುತ್ತಿದ್ದಾರೆ. ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್ (ಐಎಸ್ಎಸ್ಎಫ್) ಮಟ್ಟದಲ್ಲಿ 80 ಸ್ಪರ್ಧಿಗಳು ಕಣಕ್ಕೆ ಇಳಿಯಲಿದ್ದಾರೆ.

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ಪುದುಚೆರಿ, ಮಹಾರಾಷ್ಟ್ರ ರಾಜ್ಯಗಳ ಹಾಗೂ ರಾಷ್ಟ್ರ– ಅಂತರರಾಷ್ಟ್ರೀಯ ಮಟ್ಟ ಪ್ರತಿನಿಧಿಸಿರುವ ಸುಮಾರು 350 ಶೂಟಿಂಗ್ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಸ್ಪರ್ಧೆಯು ಮೇ 30ರವರೆಗೆ ನಡೆಯಲಿದ್ದು, ಅಂತಿಮ ಪಂದ್ಯ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಏರ್ ಪಿಸ್ತೂಲ್, ಏರ್ ರೈಫಲ್ಸ್, ಓಪನ್ ಸೈಟ್ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಸಬ್ ಯೂತ್, ಯೂತ್, ಜೂನಿಯರ್, ಸೀನಿಯರ್ ಹಾಗೂ ಮಾಸ್ಟರ್ಸ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

‘ದೇಶದ ವಿವಿಧ ಭಾಗಗಳ ಶೂಟರ್ಗಳನ್ನು ಒಗ್ಗೂಡಿಸುವುದು. ಮಂಗಳೂರಿನ ಶೂಟಿಂಗ್ ಕ್ರೀಡೆಗೆ ಶಕ್ತಿ ನೀಡುವುದು. ಈ ಭಾಗದಲ್ಲಿ ಶೂಟಿಂಗ್ ಕ್ರೀಡೆಯನ್ನು ಇನ್ನಷ್ಟು ಪ್ರಚಾರ ಮಾಡುವುದು. ಆಕಾಂಕ್ಷಿ ಶೂಟರ್ಗಳಿಗೆ ವೇದಿಕೆ ಒದಗಿಸುವುದು ಈ ಕ್ರೀಡಾಕೂಟದ ಮುಖ್ಯ ಉದ್ದೇಶ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಶೂಟರ್ಗಳಲ್ಲಿ ಹೆಚ್ಚಿನವರು ಕರ್ನಾ ಟಕದವರು. ಅವರೂ ಭಾಗವಹಿಸು ತ್ತಿದ್ದು, ಸನ್ಮಾನಿಸಲಾಗುವು ದು. ಭಾರತೀಯ ಭೂಸೇನೆ, ವಾಯುಸೇನೆ, ನೌಕಾಸೇನೆಯ ಶೂಟಿಂಗ್ ಪಟು ಗಳು ಭಾಗವಹಿಸುತ್ತಿದ್ದಾರೆ. ಅವ ರಿಗೆ ಗೌರವ ನೀಡುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಮಂಗಳೂರು ರೈಫಲ್ಸ್ ಕ್ಲಬ್ ಸಂಸ್ಥಾಪಕ ಮುಕೇಶ್ ಕುಮಾರ್ ಹೇಳಿದರು. ಮಂಗಳೂರು ರೈಫಲ್ಸ್ ಕ್ಲಬ್ ಸದಸ್ಯರು, ಪೋಷಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-29-2128132773

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.