ಮಂಗಳೂರು: ನಗರ ಹೊರವಲಯದ ಸಸಿಹಿತ್ಲು ಕಡಲಿನಲ್ಲಿ ಅಲೆಗಳ ಸವಾಲನ್ನು ಎದುರಿಸುತ್ತ ಬೆಳೆದ ಸರ್ಫಿಂಗ್ ಸ್ವಾಮಿ ಫೌಂಡೇಷನ್ನ ಪ್ರದೀಪ್ ಪೂಜಾರ ಮಂಗಳೂರಿನ ತಣ್ಣೀರುಬಾವಿ ಕಡಲಿನಲ್ಲಿ ಭಾನುವಾರ ಮಿಂಚಿದರು.

ಭಾರತ ಸರ್ಫಿಂಗ್ ಫೆಡರೇಷನ್, ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಎನ್ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್ಷಿಪ್ನ 18 ವರ್ಷದೊಳಗಿನ ಬಾಲಕರ ವಿಭಾಗದ ಪ್ರಶಸ್ತಿ ಗೆದ್ದ ಅವರು ರಾಷ್ಟ್ರಮಟ್ಟದ ಮೊದಲ ಟ್ರೋಫಿಯೊಂದಿಗೆ ಸಂಭ್ರಮಿಸಿದರು. ತಮಿಳುನಾಡಿನ ಕಮಲಿ ಮೂರ್ತಿ ಮಹಿಳೆಯರ ಓಪನ್ ಮತ್ತು 18 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಮಹಿಳೆಯರ ವಿಭಾಗದಲ್ಲಿ ಕಳೆದ ಬಾರಿಯೂ ಅವರು ಚಾಂಪಿಯನ್ ಆಗಿದ್ದರು.

ಪುರುಷರ ವಿಭಾಗದಲ್ಲಿ ತಮಿಳುನಾಡಿನ ಕಿಶೋರ್ ಕುಮಾರ್ ಮೊದಲಿಗರಾದರು. ಕನ್ನಡಿಗ, ಏಷ್ಯನ್ ಸರ್ಫಿಂಗ್ ಚಾಂಪಿಯನ್ಷಿಪ್ನ ಪದಕವಿಜೇತ ರಮೇಶ ಬೂದಿಹಾಳ ಎರಡನೇ ಸ್ಥಾನ ಪಡೆದರು. ಮಂಗಳೂರಿನ ಸಾನ್ವಿ ಹೆಗ್ಡೆ ಮತ್ತು ಆದ್ಯಾ ಸಿಂಗ್ 18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಳಿಸಿದರು. ಆದ್ಯಾ ಸಿಂಗ್ 14 ವರ್ಷದೊಳಗಿನವರ ವಿಭಾಗದ ಕಂಚು ಗೆದ್ದರು.

ಉತ್ತರ ಕರ್ನಾಟಕದಿಂದ ಬಂದು ನೆಲೆಸಿರುವ ಪ್ರದೀಪ್ ಪೂಜಾರ 5 ವರ್ಷಗಳ ಹಿಂದಷ್ಟೇ ಸರ್ಫ್ ಬೋರ್ಡ್ ತುಳಿದಿದ್ದರು. ಭಾನುವಾರ 5 ಅಲೆಗಳೊಂದಿಗೆ ಸೆಣಿಸಿದ ಅವರು ಗರಿಷ್ಠ 5 ಪಾಯಿಂಟ್ಗಳೊಂದಿಗೆ ಒಟ್ಟು 12.17 ಸ್ಕೋರು ಕಲೆ ಹಾಕಿದರು. ಚಾಂಪಿಯನ್ಷಿಪ್ನಲ್ಲಿ ಕರ್ನಾಟಕಕ್ಕೆ ಲಭಿಸಿದ ಏಕೈಕ ಪ್ರಶಸ್ತಿ ಇದು.

ಮಹಿಳೆಯರ ಮತ್ತು 18 ವರ್ಷದೊಳಗಿನವರ ವಿಭಾಗದ ಎಲ್ಲ ಹೀಟ್ಸ್ನಲ್ಲೂ ಮೊದಲ ಸ್ಥಾನ ಕಾಯ್ದುಕೊಂಡು ಬಂದಿದ್ದ ಕಮಲಿ ಮೂರ್ತಿ ಫೈನಲ್ನಲ್ಲೂ ಅಮೋಘ ಸಾಧನೆ ಮಾಡಿದರು. ಮಹಿಳೆಯರ ವಿಭಾಗದಲ್ಲಿ ಗೋವಾದ ಸುಗರ್ ಶಾಂತಿ ಬನಾರ್ಸೆ ಅವರನ್ನು 1.44 ಪಾಯಿಂಟ್ಗಳಿಂದ ಹಿಂದಿಕ್ಕಿ ಪ್ರಶಸ್ತಿಗೆ ಮುತ್ತಿಕ್ಕಿದರು. ಸುಗರ್ ಶಾಂತಿ ಮೊದಲ ಅಲೆಯಲ್ಲಿ 6 ಪಾಯಿಂಟ್ ಗಳಿಸಿ ಮುನ್ನಡೆದಿದ್ದರು. ಕಮಲಿ ಕೊನೆಯ ಹಂತದಲ್ಲಿ ಲಯ ಕಂಡುಕೊಂಡರು.

ಯುವ ಸರ್ಫರ್ ತಮಿಳುನಾಡಿನ ಕಿಶೋರ್ ಕುಮಾರ್ ಪುರುಷರ ವಿಭಾಗದಲ್ಲಿ ರಮೇಶ್ ಬೂದಿಹಾಳ್ ಅವರನ್ನು ನಿರಾಸೆಗೊಳಿಸಿದರು. ದೇಶದ ಪ್ರಮುಖ ಸರ್ಫರ್ಗಳು ಕಣಕ್ಕೆ ಇಳಿದಿದ್ದ ಈ ವಿಭಾಗದಲ್ಲಿ ಕಿಶೋರ್ ಗರಿಷ್ಠ 8 ಅಂಕಗಳೊಂದಿಗೆ ಒಟ್ಟು 15.20 ಸ್ಕೋರು ಗಳಿಸಿದರು.

ಫಲಿತಾಂಶಗಳು: ಪುರುಷರ ವಿಭಾಗ: ಕಿಶೋರ್ ಕುಮಾರ್ (ತಮಿಳುನಾಡು)–1. ಸ್ಕೋರು:15.20, ರಮೇಶ ಬೂದಿಹಾಳ (ಕೇರಳ)–2 (12.87), ಶಿವರಾಜ್ ಬಾಬು (ತಮಿಳುನಾಡು)–3 (11.90); ಮಹಿಳೆಯರು: ಕಮಲಿ ಮೂರ್ತಿ (ತಮಿಳುನಾಡು)–1. ಸ್ಕೋರು: 13.17, ಸುಗರ್ ಶಾಂತಿ ಬನಾರ್ಸೆ (ಗೋವಾ)–2 (11.73) ಸೃಷ್ಟಿ ಸೆಲ್ವಂ (ತಮಿಳುನಾಡು)–3 (8.50); 18 ವರ್ಷದೊಗಳಗಿನ ಬಾಲಕರು: ಪ್ರದೀಪ್ ಪೂಜಾರ (ಕರ್ನಾಟಕ)–1. ಸ್ಕೋರು: 12.17, ತಯಿನ್ ಅರುಣ್ (ತಮಿಳುನಾಡು)–2 (11.26), ಪ್ರಹ್ಲಾದ್ ಶ್ರೀರಾಮ್ (ತಮಿಳುನಾಡು)–3 (9.50); ಬಾಲಕಿಯರು: ಕಮಲಿ ಮೂರ್ತಿ–1. ಸ್ಕೋರು: 14.83, ಸಾನ್ವಿ ಹೆಗ್ಡೆ (ಕರ್ನಾಟಕ)–2 (5.67), ಆದ್ಯಾ ಸಿಂಗ್–(ಕರ್ನಾಟಕ)–3 (2.73); 14 ವರ್ಷದೊಳಗಿನ ಬಾಲಕರು: ಹರೀಶ್ ಪಿ (ತಮಿಳುನಾಡು)–1. ಸ್ಕೋರು: 17.23, ಶೇಕ್ ದಾವೂದ್ (ತಮಿಳುನಾಡು)–2 (12.97), ಪ್ರಹ್ಲಾದ್ ಶ್ರೀರಾಮ್ (ತಮಿಳುನಾಡು)–3 (8.40); ಬಾಲಕಿಯರು: ದಮಯಂತಿ ಶ್ರೀರಾಮ್ (ತಮಿಳುನಾಡು)–1. ಸ್ಕೋರು: 10.50, ಅರಬೋಳು ನೇತ್ರ-2 (8.13), ಸಾನ್ವಿತಾ ಕುಂದರ್ (ಕರ್ನಾಟಕ)–3 (5.54).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-1674046694

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.