ಮೊಳಕಾಲ್ಮುರು: ರಾಮನವಮಿ ಅಂಗವಾಗಿ ತಾಲ್ಲೂಕಿನ ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿಯಲ್ಲಿ ಶುಕ್ರವಾರ ಜೋಡೆತ್ತು ಎತ್ತಿನಬಂಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.

ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ ಗ್ರಾಮಸ್ಥರು ಸ್ಪರ್ಧೆ ಆಯೋಜಿಸಿ, ಮುಕ್ತವಾಗಿ ಭಾಗವಹಿಸುವ ಅವಕಾಶ ನೀಡಿದ್ದ ಕಾರಣ ರಾಜ್ಯ ಮತ್ತು ನೆರೆ ರಾಜ್ಯಗಳಿಂದ ಒಟ್ಟು 38 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಆಂಧ್ರಪ್ರದೇಶದ ಅನಂತಪುರದ ಎಂ.ಡಿ.ಸಿ. ಬೀರಾ ಪ್ರಥಮ ಸ್ಥಾನ ಪಡೆದು ₹ 20,000 ನಗದು, ಪಾರಿತೋಷಕ, ದೊರೆಹಟ್ಟಿ ರಾಮಾರ್ಜುನ ದ್ವಿತೀಯ ಸ್ಥಾನದೊಂದಿಗೆ ₹ 10,000 ನಗದು, ಪಾರಿತೋಷಕ, ತುಮಕೂರ್ಲಹಳ್ಳಿ ಡಿ. ಪಾಲಯ್ಯ ತೃತೀಯ ಸ್ಥಾನದೊಂದಿಗೆ ₹ 8000 ನಗದು ಪಾರಿತೋಷಕ, ಬಂಡೆಕಟ್ಟೆ ಚಂದ್ರಣ್ಣ ಮತ್ತು ರಾಣಾ ತಿಲಕ ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದುಕೊಂಡರು.

ಸ್ಪರ್ಧೆಗೆ ಚಾಲನೆ ನೀಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವೈ.ಪಿ. ಚೇತನ್, ‘ಗ್ರಾಮೀಣ ಭಾಗದಲ್ಲಿ ಇಂದಿಗೂ ಹಬ್ಬದ ಸಮಯದಲ್ಲಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಂಡು ಕ್ರೀಡಾಭಿಮಾನ ತೋರುತ್ತಿರುವುದು ಹೆಮ್ಮೆಯ ಸಂಗತಿ. ಸರ್ಕಾರವೂ ಇಂತಹ ಕ್ರೀಡೆಗಳಿಗೆ ಪ್ರೋತ್ಸಾಹ ಕೊಡುವ ಅಗತ್ಯವಿದೆ’ ಎಂದರು.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮೊಳಕಾಲ್ಮುರು ಠಾಣೆ ಪಿಎಸ್ಐ ಮಹೇಶ್ ಹೊಸಪೇಟೆ ವಿಜೇತರಿಗೆ ಬಹುಮಾನ ವಿತರಿಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ನಾಗೇಶ್, ಮೋಟೆ ಮಲ್ಲಯ್ಯ, ಎಂ.ಪಿ. ಪಾಪಣ್ಣ, ಮುಖಂಡರಾದ ಕುಂಟಯ್ಯ, ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ನಾಗರಾಜ್, ಪಾಲಯ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-44-1839019797

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.