ಮುದ್ದೇಬಿಹಾಳ: ನೇಪಾಳದಲ್ಲಿ ಯೂಥ್ ಗೇಮ್ಸ್ ಫೌಂಡೇಷನ್ ಹಮ್ಮಿಕೊಂಡಿದ್ದ ಇಂಡೋ-ನೇಪಾಳ ಅಂತರರಾಷ್ಟ್ರೀಯ ಸೀರೀಸ್-2026 ರ ಕ್ರೀಡಾಕೂಟದಲ್ಲಿ ಮುದ್ದೇಬಿಹಾಳದ ಬಸವ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಮೊಹ್ಮದ್ ಜೀಶಾನ್ ರಿಸಾಲ್ದಾರ್ 10 ವಿಭಾಗದಲ್ಲಿ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು, ಮಲೇಷ್ಯಾದಲ್ಲಿ ನಡೆಯುವ ಸೌಥ್ ಏಷಿಯನ್ ಯುಥ್ ಗೇಮ್ಸ್ ಇಂಟರ್ ನ್ಯಾಷನಲ್ ಚಾಂಪಿಯನ್ಶಿಪ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.

ಜೀಶಾನ ರಿಸಾಲ್ದಾರ್ ಇತ್ತೀಚೆಗಷ್ಟೆ ಗೋವಾದಲ್ಲಿ ನಡೆದ ಯುಥ್ ಗೇಮ್ಸ್ ಕೌನ್ಸಿಲ್ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕ ಪರವಾಗಿ ಭಾಗವಹಿಸಿ ಅಲ್ಲಿಯೂ ಕೂಡ 100 ಮೀಟರ್ ಓಟದಲ್ಲಿ ಬಂಗಾರದ ಪದಕ ಪಡೆದುಕೊಂಡಿದ್ದನು.

ಈಗ ಇಂಡೋ ನೇಪಾಳ ಇಂಟರ್ ನ್ಯಾಷನಲ್ ಸೀರೀಸ್ ನಲ್ಲಿ ಮತ್ತೆ 100 ಮೀಟರ್ ಓಟವನ್ನು 14.56 ಸೆಕೆಂಟ್ನಲ್ಲಿ ಪೂರ್ಣಗೊಳಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ.

ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಿದ್ರಾಮಪ್ಪ ಭಜಂತ್ರಿ ಅವರ ನೇತೃತ್ವದಲ್ಲಿ ಜೀಶಾನ್ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯ ಸಾಧಸಿದಕ್ಕೆ ಭಜಂತ್ರಿ ಸಂತಸ ವ್ಯಕ್ತಪಡಿಸಿದ್ದಾರೆ. ಶಾಲೆಯ ಪ್ರಿನ್ಸಿಪಾಲ್ ಪ್ರಭಾ ಚಿನಿವಾರ ಹಾಗೂ ಶಾಲೆಯ ಚೇರ್ಮನ್ ಶಿವುಕುಮಾರ್ ಹರ್ಲಾಪುರ್ ಹಾಗೂ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ. ಶಾಲೆಯ ಶಿಕ್ಷಕಿ ಪ್ರಿಯಾಂಕಾ ಹೊಸಮನಿ ಮಕ್ಕಳೊಂದಿಗೆ ನೇಪಾಳಕ್ಕೆ ತೆರಳಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-26-1820356062

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.