ಮುದಗಲ್: ‘ಸದೃಢ ಆರೋಗ್ಯಕ್ಕೆ ಕ್ರೀಡೆ ಅವಶ್ಯಕ’ ಎಂದು ಪಿಎಸ್ಐ ವೆಂಕಟೇಶ ಮಾಡಗಿರಿ ಹೇಳಿದರು.

ಪಟ್ಟಣದ ಸಿದ್ರಾಮಪ್ಪ ಸಾಹುಕಾರ ಸಂತೆಕೆಲ್ಲೂರು ಒಳಾಂಗಣ ಕ್ರೀಡಾಂಗಣದಲ್ಲಿ ಮುದಗಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಬ್ಯಾಡ್ಮಿಂಟನ್ ಟೂರ್ನಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಹ ದಂಡನೆಯಿಂದ ದೈನಂದಿನ ಬದುಕಿನ ಒತ್ತಡ ನಿವಾರಣೆಯಾಗಿ, ಜೀವನ ಉಲ್ಲಾಸದಿಂದ ಕೂಡಿರುತ್ತದೆ. ಯುವಜನರು ಹೆಚ್ಚು ಕ್ರೀಡಾಕೂಟದಲ್ಲಿ ಭಾಗವಹಿಸಲು ಉತ್ಸುಕರಾಗಬೇಕು. ಕ್ರೀಡೆಗಳು ಮಾನಸಿಕ, ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಅಸೋಸಿಯೇಷನ್ನವರು ನಿರಂತರವಾಗಿ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡಬೇಕು’ ಎಂದರು.

ಸಂಸ್ಥೆಯ ಗೌರವಾಧ್ಯಕ್ಷ ಸಿದ್ರಾಮಪ್ಪ ಸಾಹುಕಾರ ಟೂರ್ನಿ ಉದ್ಘಾಟಿಸಿದರು. 32 ತಂಡಗಳು ಭಾಗವಹಿಸಿವೆ.

ಶಿಕ್ಷಕ ಕೃಷ್ಣ ಮುಳ್ಳೂರು, ಅಸೋಸಿ ಯೇಷನ್ ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು, ಕಾರ್ಯದರ್ಶಿ ರಾಘವೇಂದ್ರ ಗುಮಾಸ್ತೆ, ಮುಖಂಡರಾದ ಸುರೇಶ ಸೇಠ್, ನಿವೃತ್ತ ಯೋಧ ವೀರನಗೌಡ ಬಯ್ಯಾಪುರ, ಶರಣಪ್ಪ ಗುಡಿಹಾಳ, ನಾಗನಗೌಡ ಬಯ್ಯಾಪುರ, ಸುಕುಮಾರ ಎನ್.ಅಕ್ಕಿ, ಉದಯಕುಮಾರ ಕಮ್ಮಾರ, ಮಹಿಬೂಬ ಬಾರಿಗಿಡ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-32-229482162

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.