ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆತಿಥ್ಯದಲ್ಲಿ ಗುರುವಾರ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತರ ವಲಯ ಪುರುಷರ ಕಬಡ್ಡಿ ಟೂರ್ನಿಯಲ್ಲಿ ಮೂಡಲಗಿಯ ಬಿ.ಪಿ. ಇಡಿ ಕಾಲೇಜು ಚಾಂಪಿಯನ್ಷಿಪ್ ಪಡೆದುಕೊಂಡಿತು. ಮೂಡಲಗಿಯ ಎಂ.ಪಿ.ಇಡಿ ಕಾಲೇಜು ತಂಡ ರನ್ನರ್ ಅಪ್ ಆಯಿತು.

ಅಂತಿಮ ಪಂದ್ಯದಲ್ಲಿ ಬಿ.ಪಿ.ಇಡಿ ಕಾಲೇಜು ತಂಡವು ಮೂಡಲಗಿಯ ಎಂ.ಪಿ.ಇಡಿ ಕಾಲೇಜುವನ್ನು 20–18 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿತು. ಇದಕ್ಕೂ ಪೂರ್ವದಲ್ಲಿ ಸವದತ್ತಿಯ ಎಸ್ವಿಎಸ್ಬಿ ಕಾಲೇಜು ತಂಡವು ವಿಜಯಪುರದ ಸರ್ಕಾರಿ ಪದವಿ ಕಾಲೇಜು ತಂಡವನ್ನು 26–6 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿತು.

ಸವದತ್ತಿಯ ಎಸ್ವಿಎಸ್ಬಿ ಕಾಲೇಜು ತಂಡದ ಹಣಮಂತ ಬಜೇರಿ ಉತ್ತಮ ದಾಳಿಗಾರ, ಮೂಡಲಗಿ ಬಿ.ಪಿ.ಇಡಿ ಕಾಲೇಜಿನ ಮಹೇಶ ಕೆಮ್ಮನ್ನಕೋಳ ಉತ್ತಮ ಹಿಡಿತಗಾರ ಹಾಗೂ ಎಂ.ಪಿ.ಇಡಿ ಕಾಲೇಜಿನ ಮಲ್ಲು ಸುಳ್ಳನವರ ಸರ್ವೋತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾಗಿ ಟ್ರೋಫಿಗಳನ್ನು ಪಡೆದುಕೊಂಡರು.

ಬಹುಮಾನ ವಿತರಣೆ: ಬಹುಮಾನ ವಿತರಣಾ ಸರಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಆರ್.ಪಿ. ಸೋನವಾಲಕರ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿದರು.

ಪತ್ರಕರ್ತ ಬಾಲಶೇಖರ ಬಂದಿ, ಮಲಿಕಸಾಬ ಪಾಶ್ವಾಪುರ, ಲಕ್ಷ್ಮಣ ಅಡಿಹುಡಿ, ಸಂಗಪ್ಪ ಸೂರಣ್ಣವರ, ಕಾಲೇಜು ಆಡಳಿತಾಧಿಕಾರಿ ಡಾ. ಎಸ್.ಎಲ್. ಚಿತ್ರಗಾರ, ದೈಹಿಕ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಎಂ.ಕೆ. ಕಂಕಣವಾಡಿ, ಡಾ. ಎಲ್.ಬಿ. ಮಣ್ಣಾಪುರ, ಪಿ.ಬಿ. ಚೌಡಕಿ, ಭೀಮಶಿ ಬಡಗಣ್ಣವರ, ಬಾಳೇಶ ಕಂಬಾರ, ಪವನಕುಮಾರ, ಸಂತೋಷ ಮುಗಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-21-618019528

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.